google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಛೇ... ಹಿಂಗೂ ಆದು ಉಟ್ಟಾ??!!

https://arebhasheminpuli.blogspot.com/2017/08/blog-post_11.html

Monday 20 March 2017

ಛೇ... ಹಿಂಗೂ ಆದು ಉಟ್ಟಾ??!!


                           ಕುಂಟಡ್ಕ ದೊಡ್ಡಮನೆ ಪೊನ್ನಪ್ಪತೇಂಳ್ರೆ ಇಡೀ ಉಂಡೆಮಜಲ್ ಗ್ರಾಮಕ್ಕೇ ದೊಡ್ಡಜನ. ಸತ್ಯ, ಧರ್ಮಕ್ಕೆ ಹೆಸ್ರಾದ ಇವು ಭಾರೀ ಶ್ರಮಜೀವಿ. ನೋಡಿಕೂ ಹಾಂಗೆ.. ಆರೂವರೆ ಅಡಿ ಎತ್ತರದ ಅಜಾನುಬಾಹು!! ಊರುನ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಜನ " ಏನ್ ಪೊನ್ನಣ್ಣಾ" ಹೇಳಿ ಕೈಎತ್ತಿ ನಮಸ್ಕಾರ ಮಾಡಿ ಮಾತಾಡ್ಸವು. ಇಂಥಾ ಪೊನ್ನಪ್ಪನವರ್ದ್ ಐದ್ ಗಂಡ್ ಎರಡ್ ಹೆಣ್ಣ್ ಮಕ್ಕಳ ತುಂಬು ಸಂಸಾರ... ಅದರ್ಲಿ ಹಿರಿಯವನೇ ನಮ್ಮ " ಸೋಮಪ್ಪ" ... ಎಲ್ಲವ್ಕೂ ದೊಡ್ಡಂವ ಆದರ್ಂದ ಕರಿದು 'ಸೋಂಪಣ್ಣ'!!! ಇವನೇ  ನಮ್ಮ ಕಥೆಗೆ ನಾಯಕ. ಒಳ್ಳೆ ವಿದ್ಯೆ , ಬುದ್ಧಿ ಒಟ್ಟಿಗೆ ಒಳ್ಳೆ ಉದ್ಯೋಗಲೂ ಇದ್ದ ನಮ್ಮ ಸೋಂಪಣ್ಣಂಗೆ ಪ್ರಾಯ ತುಂಬಿಕಂಡ್ ಬಂದಾಂಗೆ ಎಲ್ಲವ್ಕೂ ಬರುವ ಆಸೆನೂ ಹುಟ್ಟಿತ್. ಅದೇ " ನಾನೂ ಒಂದು ಮೊದ್ವೆ ಆಕು!!" ಅಂತ. ಆದರೆ ಮನೆಲಿ ಅಪ್ಪನೊಟ್ಟಿಗೆ ಹೆಂಗೆ ಹೇಳ್ದು? ಮಕ್ಕ ಎಷ್ಟೇ ಬೆಳ್ದು ದೊಡ್ಡವರಾದರೂ ಅಯ್ಯೆ, ಅಪ್ಪಂಗೆ ಮಕ್ಕಳೇ ಅಲ್ಲ!! ಅದರ್ಲೂ ನೇರ ಹೋಗಿ ಹೇಳ್ರೆ ತಮಾಷೆ ಮಾಡಿ ನೆಗಾಡ್ವೋತ ನಾಚಿಕೆ. ಆಗ ನೆನ್ಪಾದೇ ಸೋಂಪಣ್ಣಂಗೆ ಅವನ ಚಡ್ಡಿ ದೋಸ್ತಿ ಕಾಟಿಗುಂಡಿ ಮಿಲ್ಟ್ರಿ ರಾಮಣ್ಣ!!!


                           ಸೋಂಪಣ್ಣ ಅರ್ಕಿಲ್ ಲಿ ಕಾಸಿ ಬಾಳೆ ಕುರ್ಲೆ ಅಡಿಲಿ ನುರ್ಕಿ ಇಸಿದ "ಗ್ಯಾರ್ದಣ್ಣ್" ದರ್ನೂ, ಒಂಚೂರ್ ಕಡ್ಡೆ ಉಪ್ಪಣನೂ ಹಿಡ್ಕಂಡ್ ದೋಸ್ತಿನಕ್ಕಲೆ ಹೊರ್ಟತ್. ದಾರಿಲಿ ಸಿಕ್ಕಿದ ಕಟ್ಟ, ಚೋಡಿಗಳ್ಲಿ ಕೈಕಾಲ್ ತೊಳ್ಕಂಡ್, ಯಾರೋ ಹಾಕಿದ ಅಡ್ಚಿಲ್ ಗೆ ಬಿದ್ದ ಮೊಲನ ಕಾಡ್ ಗೆ ಬುಟ್ಟ್ ಕಂಡ್ , ಗುಡ್ಡೆಲಿ ಸೊಪ್ಪ್ ಹೆರ್ಕ್ಂಡಿದ್ದ - ಗದ್ದೆಲಿ ಹಳು ತೆಕ್ಕಂಡಿದ್ದ ಹೆಮ್ಮಕ್ಕಳೆಲ್ಲಾ ಮಾತಾಡ್ಸಿಕಂಡ್  ಕಾಟಿಗುಂಡಿ ಮನೆಗೆ ಎತ್ತ್ ಕಾಕನ  ಕೋಳಿಗಳೆಲ್ಲಾ ಮುಚ್ಚಿ ಹಾಕುವ ಹೊತ್ತ್. ಉದ್ಗಿಲ್ ತೆಗ್ಯಕಾಕನನೇ ಬೂದಿಗುಂಡಿಂದ ಎದ್ದ  ನಾಯಿ ಕಚ್ಚಿಕೆ ಬಂದಾಂಗೆ ಓಡಿಬಂದರೂ, ನೆಂಟ್ರ್ ಗೊತ್ತಾಗಿಯೋ ಏನೋ ಮೂಸಿಕೆ ಸುರುಮಾಡ್ತ್. ನೋಡ್ರೆ ರಾಮಣ್ಣ ಅಂಗಳಲೇ ಚುರ್ಕರ ಕುದ್ದ್ ಕಂಡ್ ಉರ್ಳ್ ಗೆ ಬಿದ್ದ ಬರಿಂಕನ ಸಜ್ಜಿ ಮಾಡ್ತುಟ್ಟು!! ದೋಸ್ತಿ ಬಂದದರ ನೋಡಿ ಮಾಸ ಕಮ್ಮಿ ಆದೊಲ್ಲಾಂತ ನೆನ್ಸಿರೂ ಕೈಲಿದ್ದ ಕುಪ್ಪಿ ನೋಡಿ  ಹೆರ್ಮಣೆನಾಂಗಿದ್ದ ಅಷ್ಟೂ ಹಲ್ಲ್ ಬುಟ್ಟ್ " ಕೋಲ್ಗೇಟ್ ಸ್ಮೈಲ್"  ಕೊಟ್ಟರೆ, ರಾಮಣ್ಣನ ಹೆಣ್ಣ್ ಅಮ್ಮುಣಿ ಅಂಗಳಲಿ ಉರ್ಬುಳಿ ಹೊಣ್ಕ್ಯಾಡಿಕಂಡಿದ್ದ ಮಕ್ಕಳ ನೀರ್ ಚೊಂಬ್ ತಾಕೆ ಬೆರ್ಸಿ ತಾನೂ ಅಣ್ಣನ ಮಾತಾಡ್ಸಿಕೆ ಬಾತ್ಕತ್ತಲೆಗೆ ಸೋಂಪಣ್ಣಂಗೆ ಭಾರೀ ಗಮ್ಮತ್. ಸ್ಪೆಷಲ್ ಮಿಲ್ಟ್ರಿ ರಮ್ ಬೇರೆ!! ಊಟ ಎಲ್ಲ ಆದ  ಮೇಲೆ ಸೋಂಪಣ್ಣ ದೋಸ್ತಿನೊಟ್ಟಿಗೆ ಮೆಲ್ಲ ಬಂದ ವಿಷಯನ  ಬಾಯ್ಬುಟ್ಟತ್."ಯಾಗೋಳು ತಲೆದಿಂಬು ತೊಬ್ಬಿ ಹಿಡ್ದ್ ಮಲ್ಗಿ ಮಲ್ಗಿ ಸಾಕಾತ್ ಮಾರಾಯ. ಮೊದ್ವೆ ಆಕೂಂತ ಮನ್ಸಾದೆ. ಅಪ್ಪನೊಟ್ಟಿಗೆ ಹೆಂಗೆ ಹೇಳ್ದು.. ನಂಗೆ ಮೊದ್ವೆ ಮಾಡೀಂತ!! ... ನೀನೇ ಒಂದು ಉಪಾಯ ಹೇಳ್". ಮಿಲ್ಟ್ರಿ ರಮ್ ಆಗಲೇ ತಲೆಗೆ ಹಿಡ್ದಿದ್ದ ರಾಮಣ್ಣಂಗೆ ದೋಸ್ತಿನ ಕಷ್ಟಕ್ಕೆ ಒಳ್ಳೆ ಉಪಾಯ ಕೊಟ್ಟತ್. " ಸೋಂಪ... ನೀ ಹೋಗಿ ಪೊನ್ನ ಮಾವಂಗೆ ಹೇಳ್.. ' ಅಪ್ಪಾ... ಅವ್ವ ಒಬ್ಬಂಗೆ  ಮನೆ ಕೆಲ್ಸ ಎಲ್ಲಾ ಮಾಡಿಕೆ ಭಂಗ...ತಮ್ಮಂದ್ರ್ ಗೆ ಮೊದ್ವೆ ಮಾಡಿ.. ಮನೆಗೆ ಎರ್ಡ್ ಹೆಣ್ಣ್ ಮಕ್ಕ ಬಂದವೆ'... ಆಗ ಮಾವ ಹೇಳುವೊ  'ದೊಡ್ಡಂವ ನಿನ್ನ ಬುಟ್ಟ್ ಉಳ್ದವ್ಕೆ ಮೊದ್ವೆ ಮಾಡ್ರೆ ನೋಡ್ದವ್ ಏನ್ ಹೇಳುವೊ. ಸುರೂಗೆ ನೀ ಮೊದ್ವೆ ಆಗ್.. ಮತ್ತೆ ಒಳ್ದವ್ಕೆ'.. ಆಗ ನಿನ್ನ ಮೊದ್ವೆ ಗ್ಯಾರಂಟಿ ಆದೆ" ಅಷ್ಟೆ!!!

                           ಮಾರ್ನೆ ದಿನ ಬೊಳ್ಪುಗೆ ಕೋಳಿಕೂಂಗಿಕೇ ಮೊದ್ಲು ಎದ್ದ ಸೋಂಪಣ್ಣ ಅಮ್ಮುಣಿ ಮಾಡ್ದ  ಬೊಡ್ರೊಟ್ಟಿ, ಕತ್ತಲೆನ ಗಸಿ ತಿಂಡ್ ಓಡಿಕಂಡ್ ತೇಳುವಾಂಗೆ ಬಂದ್ ಮನೆಗೆ ಎತ್ತಿತ್. ಬಂದದೇ ಸೀದ ಅಪ್ಪನ ಮುಂದೆ ಹಾಜರ್. ಪೊನ್ನಣ್ಣ ಆಗಷ್ಟೆ ಜಾಲ್ ಕರೆಲಿ ಮಾಡ್ದ ನೆಟ್ಟಿಗೆ ನೀರ್ ಹೊಯ್ದ್ ಬಂದ್ ದೊಡ್ಡಮನೆ ಕೈಮರಲಿ ಕುದ್ದ್ ಸುಧಾರ್ಸಿಕಣ್ತೊಳೊ. ದೋಸ್ತಿ ಹೇಳಿಕೊಟ್ಟಾಂಗೆ ಸೋಂಪಣ್ಣ ಉರ್ಗಿತ್ ... "ಅಪ್ಪಾ.. ಮನೆಲಿ ಜನ ಜಾಸ್ತಿ ಆಗಿ ಅವ್ವ ಒಬ್ಬಂಗೆ ಎಲ್ಲಾ ಕೆಲ್ಸ ಭಂಗ. ಹಂಗೇ ತಮ್ಮಂದ್ರ್ ಗೆ ಮೊದ್ವೆ ಮಾಡ್ರೆ ಆಕಿಲೆನಾ?" ಮಾತ್ ಕೇಳಿ ಕೇಳಿ ಪೊನ್ನಣ್ಣಂಗೆ ಕಣ್ಣಲಿ ನೀರ್ ತುಂಬಿ, ಮಂಙನ ಕೈ ಹಿಡ್ಕಂಡ್ " ನೀ ನನ್ನ ಮಂಙ ಅಲ್ಲ ಬಲ... ನೀನೇ ನಂಗೆ ಅಪ್ಪ. ಮನೆ ಜವಾಬ್ದಾರಿ ಎಲ್ಲಾ ನಾ ಹೇಳದೆ ನೀನೇ ತಕಂಡಳ. ನಿನ್ನಂಥ ಮಂಙ ಹುಟ್ಟಿಕೆ ನಾ ಎಷ್ಟ್ ಪುಣ್ಯ ಮಾಡಿರೊಕೊ!! ಆಗಲಿ .. ನೀ ಹೇಳ್ದಾಂಗೆ ತಮ್ಮಂದ್ರ್ ಗೆ ಮಾತ್ರ ಅಲ್ಲ.. ಒಳ್ಳ ನೆಂಟ್ರ್ ಸಿಕ್ಕಿತೆ ನಿನ್ನ ತಂಗೆಕಳಿಗೂ ಒಟ್ಟಿಗೇ ಮೊದ್ವೆ ಮಾಡೊನೊ!!" ತಿರ್ಗಿ ಎಂಥಾಂತ ಹೇಳ್ದು ಸೋಂಪಣ್ಣ.. ನನ್ನ ಹಣೆಲಿ ಇಷ್ಟೇ ಬರ್ದುಟೂಂತ  ನೆನ್ಸಿಕಂಡ್ , ಉಪಾಯ ಹೇಳಿಕೊಟ್ಟ ದೋಸ್ತಿಗೆ " ಹುಲಿ ಹುಡಿಯಕೆ" ಅಂತ ಬೊಯ್ಕಂಡ್ " ಕುರೆ ಸತ್ತ ಕೊರುಂಬ" ನಾಂಗೆ ತೋಟ ಕಡೆ ಹೊರ್ಟತ್. ಆರ್ತಿಂಗಳೊಳಗೆ  ಸೋಂಪಣ್ಣನ ಎರ್ಡ್ ತಮ್ಮಂದರಿಗೂ , ತಂಗೆಕಳಿಗೂ ಒಂದೇ ಚಪ್ಪರಲಿ ಮೊದ್ವೆನೂ ಕಳ್ತ್!!! ಆದ್ದರ್ರ್ಂದ್ ನಮ್ಮ ಹೈದ, ಗೂಡೆಗಳೇಮೊದ್ವೆ  ಆಕುಂತಿದ್ದರೆ ನೇರವಾಗಿ ಅವ್ವ, ಅಪ್ಪಂಗೆ ಹೇಳಿ. ಇಲ್ಲರೆ ಕಡೆಗೆ ನೀವೂ ಹೇಳಕಾದು.."ಛೇ..ಹಿಂಗೂ ಆದು ಉಟ್ಟಾ?"


                ನಿಮ್ಮ ಹೈದ

7 comments:

  1. ಗೌಡ ಕನ್ನಡ ಆಡು ನುಡಿಯ ಸೊಬಗನ್ನು ತೋರುವ ನಿಮ್ಮ ಬರಹಗಳು ಚೆನ್ನಾಗಿವೆ ನಿರಂತರ ಬರೆಯುತ್ತಿರಿ ಶುಭವಾಗಲಿ

    ReplyDelete
    Replies
    1. ನಿಮ್ಮ ಆಶೀರ್ವಾದ ಮೇಡಂ... ನಮಸ್ತೇ

      Delete
  2. ಕಥೆ ಬಾರಿ ಲಾಯ್ಕ ಉಟ್ಟು. ಹೀಂಗೆನೆ ಬರಿತಾ ಇರಿ.

    ReplyDelete
  3. ನೀವು ಬರೇ ಬೊಡ್ರೋಟ್ಟಿಯೇ ಮಾಡ್ರೆ. ಬರೀ ಅದರನೇ ತಿಂದ್ ತಿಂದ್ ನಾಲಿಕೆ ಬೊಡ್ಡ್ ಹಿಡಿದ್ಲೆನಾ? ಇನ್ನೊಮ್ಮೆ ಓಡಿಟ್ಟೋ, ಪುಂಡಿಯೋ, ಕಲ್ತಪ್ಪನೋ ಏನಾರ್ ಮಾಡಿ ಆಗದೋ... ಪೊಕ್ಳ ರೊಟ್ಟಿ ಇನ್ನೂ ಲಾಯ್ಕಾದೆ, ಕೋಳಿ ಗೈಪುನೊಟ್ಟಿಗೆ!

    ReplyDelete