google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): April 2017

https://arebhasheminpuli.blogspot.com/2017/08/blog-post_11.html

Saturday 1 April 2017

ಮರೆಯಕ್ಕೇ ಆಗದ ಎಪ್ರಿಲ್ ಒಂದ್!!!


                   "ಓಯ್... ಹಿಂದೆ ನೋಡು.. ಯಾರೋ ನಿನ್ನ ಕರ್ದವೆ"... ತಿರ್ಗಿರೆ ಯಾರೂ ಇಲ್ಲೆ!!.."ಎಪ್ರಿಲ್ ಫೂಲ್....ಎಪ್ರಿಲ್ ಫೂಲ್"... ನೋಡ್ರೆ ದೋಸ್ತಿ 'ಕೆಬಿಲಿ ಗಾಳಿ ಹುಗ್ಗಿದ ಕರ್ ನಾಂಗೆ' ಹಾರಿ ಕೊಣ್ಕಂಡ್ ನೆಗಾಡ್ತುಟ್ಟು..ನಾವು ಚಪ್ಪೆಮೋರೆ ಹಾಕಿ ಒರುಂಗಿಸಿ ಮುಂದೆ ಹೋದವೆ. ಮಂಗಾಟ  ನಾವೆಲ್ಲ  ಪ್ರೈಮರಿ ಶಾಲೆಲಿ ಇರ್ಕಾಕನ ಅನ್ಭವ್ಸಿದವೇ. ಹಂಗೇ ಇಂದ್ ಎಪ್ರಿಲ್ ಒಂದ್... ಮತ್ತೆ ಅದೇ "ಫೂಲ್ಸ್ ಡೇ"... ಮೂರ್ಖರ ದಿನ...ಅದೆಷ್ಟೇ ಎಪ್ರಿಲ್ ಒಂದ್ ಬಂದ್ ಹೋದರೂ ನಾ ನನ್ನ ದೋಸ್ತಿ "ಎಂಪಿ" ಫೂಲ್ ಮಾಡ್ದ್ ಮಾತ್ರ ಮರ್ತೇ ಹೋದ್ಲೆ. ಅಂವ ಬರೇ ಪಾಪದ ಹೈದ. ನಾ ಎಷ್ಟ್ ಉಪದ್ರ ಕೊಟ್ಟರೂ ಬುಟ್ಟ್ ಹೋಕಿಲೆ... ನಳ್ಳ್ ನಾಂಗೆ!!(ದೋಸ್ತಿ ಹೇಳ್ದು ಅದ್ಕೇ ಅಲ್ಲ). "ಎಂಪಿ" ಬೇರೆ ಯಾರೂ ಅಲ್ಲ. ನನ್ನ "ಹುಡ್ಗಾಟದ ಹುಡ್ಕಾಟ" ಲಿ ನನ್ನೊಟ್ಟಿಗೆ "ಇಸ್ತ್ರಿ ಪೆಟ್ಟಿಗೆ ಮೇಲೆ, ದುಂಡು ತಳದ ಫ್ಲಾಸ್ಕ್ ಲಿ ಗ್ಯಾರ್ದಣ್ಣ್ ದರ ಕಾಸಿಕೆ ಕೈ ಜೋಡ್ಸಿದ್ದ ಅದೇ ಕೊರುಂಬ!!!". 

               ಮಾರ್ಚಿ 31ಕ್ಕೇ ಎಂಪಿ ಮಲ್ಗಿದ ಮೇಲೆ ಮೆಲ್ಲ ಅಂವನ ಮೊಬೈಲ್ ತೆಗ್ದ್, ಅದರ್ಲಿ ನನ್ನ ಹೆಸ್ರ್ " Airtel Customer Care" ಅಂತ ಬದ್ಲಾಯ್ಸಿ, ಸದ್ದಿಲ್ಲದ ಕೊತ್ತಿನಾಂಗೆ ಹೋಗಿ ಮಲ್ಗಿದೆ.( ಹಳೇ ನೋಕಿಯಾ  ಮೊಬೈಲ್.. ಪಾಸ್ ವರ್ಡ್ ಹಾಕಿ ಇಸಿಕೆ ಆದೇಂತಲೂ ಗೊತ್ಲೆ…  ಕೆಪ್ಪಂಗೆ).ಮಾರ್ನೆ ದಿನ ಬೊಳ್ಪಿಗೆ ಘಂಟೆ 11 ಕಳ್ದರೂ ಇಂವ ರೂಮುಂದ ಹೊರಗೆ ಬಾದೇ ಕಾಂಬೊದ್ಲೆ. ಹೋಗಿ ನೋಡ್ರೆ 'ಜಾತ್ರೆಲಿ ಐಸ್ಕ್ರೀಂ ಕೊಡ್ಸದ ಮಕ್ಕ ಕುಸು ಕುಸು ಮರ್ಡುವಾಂಗೆ' ತಲೆದಿಂಬೊಳಗೆ ಮೋರೆ ಇಸಿ ಕುಸುಕುಸು ಮಾಡ್ತುಟ್ಟು. ಎದ್ರಿಸಿ ಕೇಳ್ದೆ... "ಯಾವ ಗೂಡೆನ ಹುಲಿಹೊತ್ತತೂಂತ ಹಿಂಗೆ ನರ್ಕಿಯ? ಅಲ್ಲಾ... ಮೊನ್ನೆ ಹಾಯ್ ಹೇಳ್ದ ಗೂಡೆ ಇಂದ್ ಅಣ್ಣಾಂತ ಮೆಸೇಜ್ ಮಾಡಿಟಾ ಹೇಂಗೆ!!". ಅಂವ ತಲೆದಿಂಬುದ ತಲೆ ಎತ್ತದೆ ಕೈಲಿದ್ದ ಮೊಬೈಲ್ ನನ್ನ ಮುಸುಂಡ್ ಗೆ ಹಿಡ್ತ್.  ನೋಡ್ರೆ "ಪ್ರಿಯರೇ.. ನಮಸ್ಕಾರ..ನೀವು ಹಿಂದಿನ ದಿನಗಳಲ್ಲಿ ನಮ್ಮ ಇತರೆ ಚಂದಾದಾರರಿಗೆ ಅನುಚಿತ ಕರೆ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ನಿಮ್ಮ ಕುರಿತಾಗಿ ದೂರು ದಾಖಲಾಗಿದೆ. ಹಾಗಾಗಿ ನಿಮ್ಮ ಸಂಪರ್ಕವನ್ನು ಕಡಿತಗೊಳಿಸಲು ಪ್ರಥಮವಾಗಿ ಪೋಲೀಸ್ ವಿಚಾರಣೆಗೆ ಒಳಪಡುವುದು ಅತೀ ಅವಶ್ಯ. ಸದ್ಯದಲ್ಲೇ ನಮ್ಮ ಅಧಿಕಾರಿಗಳು ಪೋಲೀಸರೊಂದಿಗೆ ಆಗಮಿಸಿ ನಿಮ್ಮ ಮೊಬೈಲನ್ನು ವಶಪಡಿಸಿ ವಿಚಾರಣೆ ನಡೆಸುವರು. ದಯವಿಟ್ಟು ಸಹಕರಿಸಿ. ಧನ್ಯವಾದಗಳು".   Sent From : Airtel Customer Care..  ಇಂವ  ಎದ್ದ್ ಕುದ್ದ್ "ನಾ ಯಾರಿಗೆ ಏನ್ ಅನ್ಯಾಯ ಮಾಡ್ಯಳೆ? ಯಾವ ಗೂಡೆಗಳ ನಂಬರ್ರೂ ನನ್ನಕ್ಕಲೆ ಇಲ್ಲೆ. ಬಂದ ಮೆಸೇಜ್ ಗಳ ಸರಿ ಓದಿಕೂ ಗೊತ್ಲೆ.. ಇನ್ನ್ ನಾ ಯಾರಿಗೇಂತ ಕಳ್ಸಿನೆ. ನನ್ನ ಬಗ್ಗೆ ನಿಂಗೆ ಗೊತ್ಲೆನಾ?.. ಇನ್ನ್ ಪೋಲೀಸ್ ಬಂದೋಂತ ಗೊತ್ತಾದರೆ ಅಪ್ಪ ನನ್ನ ಬೆರ್ಸಿ ಬೆರ್ಸಿ ಬೊಡ್ಯೊವೋ..." ಹೇಳಿಕಂಡ್ ಕಣ್ಣ್ ಲಿ ಮೂಂಕುಲಿ ನೀರ್ ಅರ್ಸಿಕೆ ಸುರು ಮಾಡ್ತ್. "ಸರಿ ಬುಡ್... ಎಲ್ಯೋ  ತಪ್ಪಿ ಬಂದಿರೊಕು. ಸತ್ಯಕ್ಕೂ ಕಂಪ್ಲೇಂಟ್ ಬಂದಿದ್ದರೆ ಅವು ಒಮ್ಮೆ ಕಾಲ್ ಮಾಡಕಾಯಿತಲ್ಲ! ಅಷ್ಟಕ್ಕೂ ಅವು ಸುರೂಗೆ ಬರ್ಲಿ. ನಮ್ಮ ಬಂಗಾರ್ಕೊಡಿ ಬಾವ ಹೆಂಗೂ ರಾಜಕೀಯಲಿರವು.. ಪೋಲೀಸ್ ಗಳ ಲಾಯಿಕ್ ಗುರ್ತ ಇರವು. ಅವರೊಟ್ಟಿಗೆ ಹೇಳೊನೊ. ನೀ ಎದ್ರ್ ... ಹೋಗಿ ಹಲ್ಲುಜ್ಜೂಂತ" ಹೇಳಿ ಬಾತ್ರೂಮ್ ಗೆ ಎತ್ತಿಕಂಡೇ ಹೋಗಿ  ಬುಟ್ಟೆ(ಬುಟ್ಟದಲ್ಲ .. ಹಂಞ ನೋಡ್ರೆ ಬಿಸಾಡ್ದಾಂಗೇ!!)

                ಮಧ್ಯಾಹ್ನ ಕಳ್ದ್ ಹಿಂಬತಾದರೂ ಇಂವ ಸುಧಾರ್ಸುವ   ಯಾವ ಲಕ್ಷಣನೂ ಇಲ್ಲೆ. "ಕಪ್ಪೆ ಆದ ಕೋಳಿನಾಂಗೆ" ತೂಂಗ್ಯಂಡೇ ಉಟ್ಟು. 'ಇಂದ್ ಹೆಂಗೂ ರಜೆ... ಬಾ ಹೋಗಿ ಚಾಯ ಕುಡ್ಕಂಡ್ ಬರೋನೊ' ಅರ್ಧ ಚಡ್ಡಿಲಿದ್ದವಂಗೆ ಫುಲ್ ಪ್ಯಾಂಟ್ ಹಾಕ್ಸಿ ಎಳ್ಕಂಡೇ ಹೊರ್ಟೆ. ಒಟ್ಟಿಗೆ ಇನ್ನೊಬ್ಬ ದೋಸ್ತಿನೂ ಹಚ್ ನಾಯಿನಾಂಗೆ ಒಟ್ಟೀಗೇ ಬಾತ್. ಕುರೆ ಸತ್ತ ಕೊರುಂಬನಾಂಗಿದ್ದ ಎಂಪಿನ ಮೋರೆ ನೋಡಿ ಏನಾತ್ ಕೇಳಿ, ವಿಷಯ ತಿಳ್ದ್, ಮೊಬೈಲ್  ಲಿ ಇದ್ದ ಮೇಸೇಜ್ ಓದಿನೂ ನೋಡ್ತ್. ಅವಂದ್ ಚೂರ್ ಕಂಪ್ಯೂಟರ್ ತಲೆ! ಮೆಸೇಜ್ ಬಂದ ನಂಬರ್ ನೋಡಿ..' ನಂಬರ್ ಎಲ್ಲೋ ನೋಡ್ದಂಗೆ ಉಟ್ಟಲ್ಲಾ, ತಡಿ .. ನನ್ನ ಮೊಬೈಲ್ ಲಿ ಸರ್ಚ್ ಮಾಡೊನೊ' ತೋಟೆ ಹಾಕಿತ್. ಅವಂದರ್ಲಿ ಹುಡ್ಕಿ ನೋಡ್ರೆ ಕಥೆ ಎಂತ... ಮೆಸೇಜ್ ಬಂದದ್ ನನ್ನ ನಂಬರ್ಂದ!!! ವಿಷಯ ಗೊತ್ತಾತಲ್ಲ!! ನಮ್ಮ ಎಂಪಿದ್ ಬೊಬ್ಬೇ ಬೊಬ್ಬೆ. 'ನೀ ನನ್ನ ಹಿಂಗೂ ಬಕ್ರಾ ಮಾಡ್ದ??!! ನಿನ್ನ ಕಾಲ್ ಹಿಡ್ದ್ ನೆಲಕ್ಕೆ ಬೊಡ್ದನೆ. ಸೊಂಟಕೆ ಕಲ್ಲ್ ಕಟ್ಟಿ ಹಳ್ಳಕ್ಕೆ ಹಾಕಿನೆ....' ( ಹೈದಂಗಳ ಕೆಲವು ಬೊಯ್ಗಳ್ ಗಳ ಹೇಳಿಕೆ ಆದುಲೆ... ಎಡ್ಜಷ್ಟ್ ಮಾಡಿಕಣಿ!!) ಅಂತೂ ಮಾಡ್ದ ಕೀತಾಪತಿಗೆ ನನ್ನ ಕೈಯಿಂದಲೇ ಚಾಯದೊಟ್ಟಿಗೆ ಗೋಬಿಮಂಚೂರಿನೂ ತಿನ್ಸಿ ಸಮಾಧಾನ ಮಾಡಿ ಹಾಸ್ಟೆಲ್ ಗೆ ಕರ್ಕಂಡ್ ಬಂದೆ. ಅಂದ್ ಕಾಲಕ್ಕೆ ಅದ್ "ಕುರೆಕೆಲ್ಸಾಂತ" ಅನ್ಸಿರೂ ಇಂದ್ ನೆಗಾಡಿಕೆ ಲಾಯಿಕಾದೆ. ಅದ್ಕೇ ಅಲ್ಲ ಹೇಳ್ದು.. ನಾವು ಯೌವ್ವಂನಲಿ ಸುಮಾರ್ ತರ್ಲೆ/ಕಿತಾಪತಿಗ ಮಾಡೊಕು..ಇಲ್ಲರೆ ಪ್ರಾಯ ಆದ ಮೇಲೆ ನೆಗಾಡಿಕೆ ಎಂತದೂ ಇರ್ದುಲೆ!!


  •       ನಿಮ್ಮ ಹೈದ