google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): 2019

https://arebhasheminpuli.blogspot.com/2017/08/blog-post_11.html

Sunday 21 July 2019

ಕುರ್ರ್ಂಟು ಕಾಂಬೊದ್ಲೆ ಬಾವಾ....!!??




ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯತೇಳುವಾಂಗೆ ಕಡೆಗೂ ಕಾದ್‌ ಕಾದ್‌ ಹೆಮ್ಮನಬೊಳಿ ಪಾಚುಗೆ ನಂದರಬೊಳಿ ಅಮ್ಮುಣಿನ ಕೈಯೆತ್ತಿ ಕನ್ಯಾಧಾರೆ ಹೊಯ್ಸಿಕಂಬ ದಿನಬಾತ್. (ಪಾಪ... ಪಾಚುಗೂ ಗೊತ್ತಿರಿಕಿಲೆ.. ಕೆಲವು ಜನ ಹೇಳ್ಕಾಕನ ಪಶು ದ್ಲ್‌ ಪತಿ ಅಂತ ಹೇಳ್ವೆತ!! ಸಾರ ಇಲ್ಲೆ ಬುಡಿ.. ಮೊದ್ವೆ ಆದ ಮೇಲೆ ಪಶು, ಪತಿ ಎರ್ಡೂ ಒಂದೇ ಆದೆ!!)‌ ಅದ್ಯಾಕೋ ಗೊತ್ಲೆ.. ಮೊದ್ವೆತೇಂಳ್ರೆ ಮೊದ್ಮಕ್ಕಳಿಗಿಂತ ಒಳ್ದವ್ಕೇ ಏನೋ ಕುಸಿ. ಅದರ್ಲೂ ಅಲ್ಲಿರ್ವ ಜವಾಬ್ಧಾರಿಗ ಇವರ್ಂದಾಗಿಯೇ ಮುಂದುವರೆದುತೇಃಳುವಾಂಗೆ ಪಾತ್ರವರ್ಗಗಳೂ ಸುಮಾರ್. ಕಂಚಿನಕ್ಕಿ, ಅಡೋಳಿ, ಹಸೆಬರ್ಯಂವ... ಹಿಂಗೇ ಮೊದ್ವೆಲಿ ಕೊಲೆನೊಟ್ಟಿಗೆ ಕೋಲ್ತಿರಿಗೂ ದಕ್ಕುವಾಂಗೆ ಸಿಕ್ಕುವ ಒಂದ್ ಪಾತ್ರನೇ ಕುರ್ರ್ಂಟುಯಾನೆ ಅಡಿಕುರ್ರ್ಂಟು”. ಮೊದೋಳಿಗೆಗೆ ಮೇಲ್ಕಟ್ಟ್ ಅಡಿಲಿ ಹೆಣ್ಣಿಳ್ಸಿ ಕೊಟ್ಟಲ್ಲಿಗೆ ಹುಟ್ಟಿದಮನೆ ಋಣತೀರ್ತ್. ಗಂಡನಮನೆಲಿ ಎಲ್ಲವೂ ಹೊಸ್ಬರೇ. ಹೊಸಮನೆಗೆ ಹತ್ತಿದವ್ಳ್ಗೆ ಒಮ್ಮೆಗೇ ಬಂಗ ಆದು ಬೇಡಾತ ಯಾರಾರೊಬ್ಬನ ಗೂಡೆನಮನೆವು ಒಟ್ಟಿಗೇ ಕಳ್ಸ್‌ತಿದ್ದೊ. ಒಂದು ಪಾತ್ರನೇ ಅಡಿಕುರ್ರ್ಂಟು”. ಮೊದೋಳಿಗೆನ ಅಕ್ಕನ ಮಕ್ಕಳೋ, ಅತ್ತಿಗೆಕಳೋ ಹೆಚ್ಚಾಗಿ ಹೆಣ್ಮಕ್ಕಳೇ ಕುರ್ರ್ಂಟು ಆಗಿದ್ದವೆ. ಸಣ್ಣ ಹೈದಂಗಳೂ ಆದೆ. ಹಿಂದೆಲ್ಲಾ ಮೊದ್ವೆಕಳ್ದ್  ತುಪ್ಪ ತಾಕೆ 2-3 ದಿನಬೇಕಿತ್ತ್. (ದಿಬ್ಬಣನೇ ಒಂದಿ ನಡ್ಡ್‌ಹೋ ಕಾಲಲ್ಲನಾ??!!) ಹಂಗಾಗಿ ಷ್ಟ್‌ದಿನ, ತುಪ್ಪ ತಕಂಡ್ಬಾಕನ ಮುಟ್ಟ ಕುರ್ರ್ಂಟು  ಮೊದೋಳಿಗೆಗೆ ಸಂಗತ. ಒಟ್ಟಿಗೆ ಒಂದು ಹುಳ್ಳ್  ಕೆಣಿನೂ ಇದ್ದಿರ್ದು.  ಗಂಡನ ಮನೆಲಿ ನಮ್ಮ ಮಗಳ ಲಾಯ್ಕ್  ನೋಡಿಕಂಡೊನೊತ ತಿಳ್ಕಂಬಕೆನೂ ಆದೆಲ್ಲಾ!!!  ನ್ನ್‌ ಕುರ್ರ್ಂಟ್ ಆಕೂ ಕೆಲವು ಕೊಡಿಕಾಲ್ಲಿ ನಿತ್ತ್‌ಕಂಡಿದ್ದವೆ. ಮಾರ್ನೆದಿನ ತುಪ್ಪದವರೊಟ್ಟಿಗೆ ಬಾಕನ ಲಾಯ್ಕ್ಲಿ ಒಂದ್‌ ಸಮ್ಮಾನನೂ ಸಿಕ್ಕಿದೆಲ್ಲ!!


ಮೊದೋಳಿಗೆ ಅಮ್ಮುಣಿಗೆ ಪಾಚುನ ಮನೆ, ಮನೆವು ಹೊಸ್ಬರಾಂಗೆ ಅನ್ಸದಿದ್ದರೂ ಆದಿನ ಮಾತ್ರ ಒಂದ್ ಲಾಯ್ಕ್ಕುರ್ರ್ಂಟು ಬೇಕೇಬೇಕುತ ಅನ್ಸಿಟು.( ಕ್ರಮನೂ ಹಂಗೇ ಉಟ್ಟಲ್ಲ!!) ಎಷ್ಟಾದರೂ ಮೊದೋಳಿಗೆ ಅಲ್ಲ!!?? ಹಂಗೇ ಅದರ ಮಾವನ ಮಗ ಅಪ್ಪಿಗೂಡೆನ ಕೇಳಿ ಒಪ್ಪುಸಿತ್. ಅಪ್ಪಿಗೂಡೆ ಪ್ರಾಯಲಿ ಅಮ್ಮುಣಿಗಿಂತ ಮೂರೋ ನಾಕೋ‌ವರ್ಸಕ್ಕೆ ಮತ್ತೆ. ಬಾರೀ ಚಾಲಾಕಿ. ನೆಲಲಿ ಹುಲ್ಲ್‌ ಹುಟ್ಟದಾಂಗೆ, ಬಾಲಕೊಡಿ ಮೆಟ್ಟಿದ ಕೇರೆನಾಂಗೆ ಅತ್ತಂದಿತ್ತ ಇತ್ತಂದತ್ತ ಓಡಿಕಂಡಿರ್ದು. ಹಂಗಾಗಿ ಅದರ ಬಗ್ಗೆ ಅಮ್ಮುಣಿನ ಮನೆಯವ್ಕೆ ಯಾರಿಗೂ ಬೇಜಾರಾತ್ಲೆ. ಇನ್ನ್ ಗಂಡ್‌ನ ಕಡೆವ್ಕೆ ಕುರ್ರ್ಂಟುನ ಕಾಲೆಳಿದುತೇಃಳ್ರೆ ಏನೋ ಕುಸಿ. ಅದರ್ಲೂ ಪ್ರಾಯದಗೂಡೆಗ ಕುರ್ರ್ಂಟಾದರೆ ಹೈದಂಗಳಿಗೆ ಬೇರೆ ಹೇಳಿಕೊಡೊಕಾ?? ಕುರ್ರ್ಂಟುನ ಅಟ್ಟಲಿ ಅಣ್ಗುಸುವೆ, ತಿರ್ಗಿ ಕಳ್ಸುದ್ಲೆ ಹಿಂಗೆಲ್ಲಾ, ಇಲ್ಲಿಯೇ ಒಂದ್  ಹೈದನ ನೋಡಿ ಕಟ್ಟಿಬುಡೊನೊ... ಹಿಂಗೆಲ್ಲಾ... ಆದರೂ ಕುರ್ರ್ಂಟ್ಗೆ ಸಿಕ್ಕುವ ರಾಜಮೊರ್ಯಾದೆನೇ ಬೇರೆ. ಹಂಗೆ ಇಲ್ಲಿ ಅಪ್ಪಿಗೂಡೆನೂ ಎಲ್ಲರೊಟ್ಟಿಗೆ ಒಂದೇ ಆಗಿ ಸೇರಿಹೋತ್. ಮೊದ್ವೆಕಳ್ದ ಮಾರ್ನೇದಿನ ನಿಘಂಟ್  ಮಾಡ್ದಾಂಗೆ ಎಲ್ಲವೂ ಸೇರಿ ತುಪ್ಪತಕಂಡ್  ಹೊರ್ಟೊ. ಜೀಪ್‌ಗ ಮೂರ್‌ ಮೂರ್‌ ಆರ್‌ ಒಟ್ಟಿಗೆ ಒಂದ್‌ ಕಾರ್‌!! ನೆಂಟ್ರ್‌ಗ ಸುಮಾರೊಳೊತ ತೋರ್ಸೊಕಲ್ಲ!!?? ಅಂತೂ ಅಮ್ಮುಣಿನ ಮನೆಲಿ ಗೌಜಿಯೋ ಗೌಜಿ. ಹೊಸ ಮೊದ್ಮಕ್ಕಳಿಗೆ ಹಸೆಲಿ ಕುದ್ರ್ಸಿಹಾಲ್ತುಪ್ಪ ಕುಡ್ಸಿದೊ. ನೆಂಟ್ರ್‌ಗಳಿಗೆ ಸರ್ಬತ್ತ್  ಕೂ ಬಾತ್. ಗೌಜಿಲಿ ಕುರ್ರ್ಂಟು ಯಾರಿಗೂ ನೆಂಪೇ ಇಲ್ಲೆ. ಕಡೆಗೆ ಅಮ್ಮುಣಿನ ಮಾವನೇ ಕೇಳ್ದೊನಮ್ಮ ಕುರ್ರ್ಂಟ್ ಎಲ್ಲಿ?? ಕಾಂಬೊದ್ಲೆಲ್ಲಾ!!”.  ಇತ್ತ ಹೈದಂಗಳೂ ಒಂದ್  ಕೆಣಿ ಮಾಡಿದ್ದೊ. ಕುರ್ರ್ಂಟುಗೊಂದ್‌  ತಾಕೀತ್ ನಾವ್  ರ್ಯಕಾಕನ ಮುಟ್ಟ ಬಾಕೆಬೊತ್ತ್ !!  (ಮೊದ್ವೆಲಿ ಅಷ್ಟೂ ತಮಾಸೆ ‌ಮಾಡದಿದ್ದರೆ ಮೊದ್ವೆ ಮಾಡ್ದು ಮೊನ್ಸಂಗೆಂತಕೆ!!  ಪ್ರಾಣಿಗಳಿಗೇ ಮಾಡಕಲ್ಲ? ವಯಸ್ಸ್‌ಲಿ ಏನೂ ಮಾಡದಿದ್ದರೆ ಪ್ರಾಯ ಆದ ಮೇಲೆ ನೆಗಾಡಿಕೆ ಎಂತ ಇದ್ದದೆ?) ಇತ್ತ ಹೈದಂಗಳೂ ಸುಮ್ಮನೇ ಕೊಣ್ಸಿಕೆ ಸುರುಮಾಡ್ದೊ. ಕುರ್ರ್ಂಟುನ ಅಟ್ಟಲಿ ಮುಚ್ಚಿಹಾಕಿದ್ದೊ, ಹೊರಗೆ ತಾಕನ ಕಾಗೆಕಚ್ಚಿಕಂಡ್ ಹೋತಲ್ಲಾ...ಹಿಂಗೇ. ಕಡೆಗೆ ಊಟದ ಹೊತ್ತಾಕನ ನ್ನಾರ್‌  ಕುರ್ರ್ಂಟುನ ತಿರ್ಗಿಕಡೊನೊತ ಅಪ್ಪಿಗೂಡೆನ ಕರ್ಕಂಡ್  ರೊನೊತ ನೆಂಟ್ರ್ಎಲ್ಲಹೋದೊ. ಅಲ್ಲಿ ಹೋಗಿ ನೋಡ್ರೆ ನಮ್ಮ ಅಡಿಕುರ್ರ್ಂಟೂ ಇಲ್ಲೆ!!  ಕುದ್ರ್ಸಿ ಬಂದ ಕಾರ್‌ನೂ ಇಲ್ಲೆ!! ಇದೆಂಥಾ ಮಾಯಕ ಮಾರ್ರೆ... ಸುಮ್ಮನೇ ನಮ್ಮನೇ ಕೊಣ್ಸಿಕೆ ಮಾಡ್ತೊಳೊತ ನೆನ್ಸಿ ಕಾರ್‌ನ ಹೈದಂಗೆ ಫೋನ್ಮಾಡ್ರೆ ಮೊಬೈಲ್  ಸ್ವಿಚ್ಚ್ ಆಫ್!. ಸಭೆಲಿಡೀ ಗುಸುಗುಸು. ಇತ್ತ ಅಮ್ಮುಣಿನ ಕೋಣೆಲಿ ಪಟ್ಟಾಂಗ ಹೊಡಿತಿದ್ದಲ್ಲಿಗೆ ನಾದಿನಿ ಅಕ್ಕುಣಿ ಅಳ್ಗೆಲ್ ಮೋರೆಲೇ ಓಡಿಬಂದದೇ ಬೊಬ್ಬೆ ಕುರ್ರ್ಂಟು ಕಾಂಬೊದ್ಲೆ ಬಾವಾ... ಕುರ್ರ್ಂಟು ಕಾಂಬೊದ್ಲೆ!!”


ಸರಿ... ಇನ್ನೆಂಥ ಮಾಡ್ದು? ಹೈದಂಗ ಎಲ್ಲಾ ಸೇರಿಹೊರ್ಟೊ...ರ್‌ ಜೀಪ್ ರ್‌ ಕಡೆಗೆ. ಇತ್ತ ಮನೆಲಿನೋ ಅಪ್ಪಿನ ಅಯ್ಯೆ, ಅಪ್ಪನ ಅರೆಬಾಯಿಗೆ ಕೆಬಿಬುಡಂವಿಲ್ಲೆ!! “ಷ್ಟ್‌ ಲಾಯ್ಕ್ ನ ಗೂಡೆ, ಗಿಣಿ ಸಾಂಕಿದಾಂಗೆ ಸಾಕಿದ್ದೊ. ಈಗ ನೋಡ್ರೆ ಇಲ್ಲೇಂತೇಳ್ರೆ!! ಎಲ್ಲಾ ಹೊಸನೆಂಟ್ರ್ದೇ  ಗ್‌ಲ್‌ ಬಾಜಿ!!” ತೇಳ್ತಿದ್ದವರ ನೋಡಿ ಹೊಸನೆಂಟ್ರ್ಗೆ ಇವು ಇನ್ನೂ ಬೊಯ್ಗಳ್ ಇಸುದು ಬೇಡತ, ಅತ್ತಿಗೆನ ಒಳಗೆ ಎಳ್ಕಂಡ್ಹೋದೊ ಪಾಚುನ ಅಯ್ಯೆ ತಂಗಮ್ಮಕ್ಕ.  ಅಪ್ಪಿಗೂಡೆನ ಅಪ್ಪಂದ್ ಅಂತೂ ಜೋರೇ ಜೋರು. ”ಪೋಯಿ ಈಗಳೇ..  ಪೋಲೀಸ್‌ ಕಂಪ್ಲೇಂಟ್‌ ಕೊಡೊನೊ. ಪಾಚುನೂ ಬರೊಕು, ನನ್ನ ಮಗಳ ಅಡಿಕುರ್ರ್ಂಟು ಮಾಡಿ ಕರ್ಕಂಡ್ಹೋದಂವ ಮೊದ್ಮಂಙನೇ ಅಲ್ಲ? ಕರ್ಕಂಡ್‌ ಹೋ ಮೇಲೆ ಅಷ್ಟೂ ಜವಾಬ್ದಾರಿ ಬೇಡನ?? ಕಾರ್‌ ಡ್ರೈವರೇ ನನ್ನ ಮಗಳ ಹಾರ್ಸಿಕಂಡ್‌ ಹೋದ್. ಏನಾರ್  ಹೆಚ್ಚ್‌ ಕಮ್ಮಿ ಆತೋ. ಹೊಸನೆಂಟ್ರೇ ಅದ್ಕೆ ಹೊಣೆ!! ಕುರ್ರ್ಂಟು ಬಾರದೆ ನೆಂಟ್ರ್‌ಗ ಹೊರ್ಡಿಕೇ ಬೊತ್ತ್!!” . ಪಾಚುನ ಕತೆನ ಯಾರಿಗೆಹೇಳ್ದು?? ದಾಕ್ಷಿಣ್ಯಕ್ಕೆ ಬೊಸ್ರಾದರೆ ಬಯಕೆಗೇಳಿಕೆ ಜನ ಇಲ್ಲೆಗಡ!! ‘ಕಾರ್ನೂರ್ಗೆ ಬಳ್ಸಿರ್ಲಿ ನಾರ್‌ ತಪ್ಪಿತೋಅಲ್ಲ ನನ್ನ ಮೇಲೆ ಕಣ್ಣ್‌ ಹಾಕ್ಯಂಡಿದ್ದ ಗೂಡೆಗ ಅವರ ಮೊದ್ವೆ ಆತ್ಲೆತ ಸಾಪ ಇಸಿದೊನ ಹಿಂಗಾಕೆ!! ʼಅಪ್ಪೆ ಕಲ್ಲುರ್ಟೀ, ನಿಂಗೊಂದ್ ರ್ಕೆಕೊಟ್ಟನೆ. ಒಮ್ಮೆ ಆಪಾದನೆಂದ ದೂರಮಾಡ್  ತಾಯೇ!!’ ನೆನ್ಸಿ ಕಂಡಿರ್ಕಾಕನೇ ದೂರಲಿ ಜಾಲ್ಕರೆ ಉದ್ಗಿಲ್‌ ದಾಟಿ ಕಾರ್‌ ಬಾದು ಕಂಡತ್. ಕಾರ್ಂದ ಇಳ್ದ ಅಪ್ಪಿಗೂಡೆ ಏನೂ ಗೊತ್ತಿಲ್ಲದೆ ಬೇಕೋ ಬೇಡಾಂತ ಇಳ್ದರೆ, ಜನಂಗೆಲ್ಲಾ ತಿರ್ಗಿ ತಿರ್ಗಿ ಅದರ್ನೇ ನೋಡ್ವೆ. ಅಪ್ಪಿನ ನೋಡ್ದ ಅಮ್ಮುಣಿ ಓಡಿಬಂದ್‌  ಹೇಳದೇ ಎತ್ತ ಹೋಗಿದ್ದನೇ ...ಕುದುರೆ!!” ಬೊಯ್ಕಂಡ್ ತಲೆಗೊಂದ್‌ ಬೊಟ್ಟಿತ್.ಅಲ್ಲ ಅಮ್ಮುಣಿ... ನಿಂಗೆ ಗೊತ್ಲೆನ?? ನಮ್ಮ ಊರೋ ಅಂಡಮಾನ್, ಗುಡ್ಗೊಕುತ ಇಲ್ಲೆ!! ಹನೀಸ್‌ ಮೋಡ ಒಡ್ಡಿರೆ ಸಾಕ್, ಮಳೆ ಬಾಕೆ ಮೊದ್ಲೇ ಕರೆಂಟ್‌ ಹೋಗಿದ್ದದೆ. ನ್‌ ಮೊಬೈಲ್ಗೆ ಚಾರ್ಜ್, ನೆಟ್ವರ್ಕ್ ಎಲ್ಲಿದ್ದದೆ?? ಕಾರ್‌ಲಿ ಕುದ್ದ್‌ ಕುದ್ದ್‌ ಬೋರಾತ್. ನಿನ್ನ ಡ್ರೈವರೋ...ಬರೇ ಬೊದುಲೆ.. ಅವನ ಮೊಬೈಲ್ಲೂ ಚಾರ್ಜ್ ಇಲ್ಲೆ. ಸತ್ತೇ ಹೋಗುಟು!! ಅದ್ಕೆ ಹೋಗಿ ಅಲ್ಲಿ ಐತಡ್ಕ ಚಡವುಂದ ಆಚೆ ಇದ್ದೊ. ಅಲ್ಲಿ ಫುಲ್ಲ್‌ ನೆಟ್ವರ್ಕ್‌ಯಾ!!‌ 4G ಅಂತೂ ಹೈ ಸ್ಪೀಡ್!! ನಿನ್ನೆ ನಾ ನಿನ್ನೊಟ್ಟಿಗೆ ತೆಗ್ದ ಸೆಲ್ಫಿಗೆ 506 ಲೈಕ್‌ ಬಂದುಟು ಗೊತ್ತುಟಾ??”. ಕೇಳ್ದ ಕುರುಂಟುನ ಅಪ್ಪಂಗೆ ಎಕ್ಕ್‌ಡಿಕೆಗೆ ಮೊದ್ದ್‌ ಕೊಟ್ಟಂಗಾತ್...ಸ್ಕ್‌ ದಮ್ಮೇ ಇಲ್ಲೆ!!
(An Arebhashe Articles of Gowdas :ಕುರ್ರ್ಂಟು ಕಾಂಬೊದ್ಲೆ ಬಾವಾ....!!??

ಡಾ. ಪುನೀತ್‌ ರಾಘವೇಂದ್ರ ಕುಂಟುಕಾಡು