google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): August 2017

https://arebhasheminpuli.blogspot.com/2017/08/blog-post_11.html

Thursday 31 August 2017

ಕುಂಞಿಮೋನುನ ಚಾಮಿ!!!




                   ಅರೆಭಾಷೆ ಗೌಡ್ರ್ ಗಳ್ಲಿ "ಕುಂಞಿಮೋನು" ಅಂತ ಸಣ್ಣ ಹೈದಂಗಳ ಕರಿದು ಸಾಮಾನ್ಯ. ಅದರ್ಲೂ ಗುಂಡು ಗುಂಡಂಗೆ ಇದ್ದ್ ಇಟ್ಟಿ ರೆಟ್ಟಿದಾಂಗೆ ರೆಟ್ಟಿಕಂಡಿರುವ ಉರಿಕೊಳ್ಳಿ ಹೈದಗಳಿಗಂತೂ ಅಜ್ಜಿಕ ಇದೇ ಹೆಸ್ರುಲೇ ಕರಿದು. "ಕುಂಞಿಮೋನು" ಮೂಲತಃ ಮಲ್ಯಾಳಂದ ಬಂದ ಪದ ಆದರ್ಂದ ಮಲ್ಯಾಳ ಜಾಸ್ತಿ ಇದ್ದ ಕಡೆನ ಗೌಡ್ರ್ ಜಾಸ್ತಿ ಬಳ್ಸುವೆ. "ಸಣ್ಣ ಹೈದ" ಇದರ ಅರೆಭಾಷೆ ಅರ್ಥ. ಅಜ್ಜಿಕ ಎಲ್ಯಾಡಿಕೆ ಗುದ್ದಿಕಿದ್ದರೆ, ನೆಶ್ಶೆ ಡೊಬ್ಬಿಗೆ/ಬುರ್ರ್ಡೆಗೆ ಹೊಡಿ ತುಂಬುಸಿಕೆ ಇಲ್ಲರೆ ಮಡೆಗುತ್ತಿ ಸೂಸಿಕೆ... ಹಿಂಗೇ ಏನಾರ್ ಹೊಡಿಪೊಡಿ ಕೆಲ್ಸಗ ಇದ್ದರೆ "ಕುಂಞಿಮೋನೇ..." ತೇಃಳಿ ಮೋಕೆಲಿ ಕರಿದೂ ಉಟ್ಟು!! ಹಂಗೇ ನಮ್ಮ ಕುಂಞಿಮೋನುನೂ ಭಾರೀ ಕೊಂಡಾಟದ ಅಜ್ಜಿ ಪುಳ್ಳಿ. ಮನೆಲಿ ಅಂವನ ಉಪದ್ರ ತಡ್ಯಕೆ ತೀರದೆ ಅಪ್ಪ ತ್ಯಾಂಪಣ್ಣ ಅಂಗನವಾಡಿಗೆ ಎಳ್ಕಂಡೋಗಿ ಬುಟ್ಟರೆ ನೋಡಿ...ನಾಕೇ ದಿನ.. ಒಂದಿನ ಮಧ್ಯಾಹ್ನ ಅಂಗನವಾಡಿ ಟೀಚರೇ ಇವನ ಕರ್ಕಂಡ್ ಬಂದ್ "ನೋಡಿ ತ್ಯಾಂಪಣ್ಣ... ನಿಮ್ಮ ಮಂಙನ ದೆಸೆಂದ ನಾ ಗದ್ದೆ ಪುಣಿಲಿ ರೆಟ್ಟಿ ಬೀಳದ್ ಪುಣ್ಯ!! ನನ್ನ ಚಪ್ಪಲ್ ಬಾರ್ ಜಾರ್ಸಿಸಿಟು!! ಉರಿಕೊಳ್ಳಿ.. ಮೊನ್ನೆ ಉಚ್ಚೆಹೊಯ್ಯಕೆ ಬುಟ್ಟರೆ ಮಾದಣ್ಣನ ಮಂಙನ ಚಡ್ಡಿ ಒಳಗೆ ಚೌಳಿ ಹಿಡ್ದ್ ಹಾಕಿಟು!! ಮಕ್ಕಳ ಸ್ಲೇಟ್ ಗಳ ಮೇಲೆ ಕುದ್ದ್ ಕುದ್ದ್ ಎಲ್ಲಾ ಹೊಡಿ ಹೊಡಿ!! ನಿನ್ನೆ ಅಂಗನವಾಡಿನ ಒಲೆಗೆ ಒಂದ್ ಪಾಟೆ ನೀರ್ ಹೊಯಿದಿಸಿ, ನಾ ಮತ್ತೆ ಮನೆಲಿ ಸಜ್ಜಿಗೆ ಬೇಸಿಕಂಡ್ ಬಂದದ್ ಗೊತ್ತುಟಾ? ನಿಮ್ಮ ಕಾಲ್ ಬೇಕರೆ ಹಿಡ್ಕಣೆ. ದಮ್ಮಯ್ಯ... ಇನ್ನ್ ಮೇಲೆ ಅಂಗನವಾಡಿಗೆ ಮಾತ್ರ ಇಂವನ ಕಳ್ಸುದು ಬೇಡ!!" ಹೇಳಿ ಅಪ್ಪನ ಕೈಗೆ ಮಂಙನ ಒಪ್ಪುಸಿ, ಕೊಟ್ಟ ಮೊಜ್ಜಿಗೆ ನೀರ್ ನನೂ ಕುಡಿಯದೆ ಸೇಂಕ್ಯಂಡ್ ಬುಕ್ಕ್ಯಂಡ್ ಓಡ್ಯೊಳೊ. ತ್ಯಾಂಪಣ್ಣನ ಅವ್ವ ತಂಗಮ್ಮಕ್ಕಂಗೂ ಪುಳ್ಳಿ ಮನೇಲಿ ಇದ್ದರೆ ನಂಗೂ ಆರಾಮತ ನೆನ್ಸಿ " ಕೂಸುನ ನಾ ನೋಡಿಕಣೆ ತ್ಯಾಂಪ"ತೇಳಿ ಕುಂಞಿಮೋನುನ ಮನೆಲೇ ಒಳ್ಸಿಕಂಡೊ. ಮನೆಲಿರುವ ಹೈದಂಗೆ ಇನ್ನೇನ್ ಕೆಲ್ಸ... ಕಾಪು ಕುದ್ದ ಹೇಂಟೆನ ಕುಂಡೆ ಪೊಕ್ಕುಸಿ ಪಿಳ್ಳೆ ಬಂದುಟಾಂತ ನೋಡ್ದು, ನಾಯಿ ಮೊರಿಗಳ ನೀರಡಿ ಕೊಟೆಗೆಗೆ ತಕಂಡೋಗಿ ಮೀಂವ ನೀರ್ ಅಂಡೆಗೆ ಕಂತ್ ಸಿ ತೆಗಿದು, ಅಜ್ಜಿ ಹೊಯಿದ ಮಾಂಬಳಕ್ಕೆ ಕುಂಡತ ಬರದಾಂಗೆ ನೋಡಿಕಂಬೊದು... ಇದೇ... ಅದರೊಟ್ಟಿಗೆ ಒಂದು ಹೊಸಾ ಆಸೆ... ದೊಡ್ಡ ಹುಂಜನ ಗೈಪು ಮಾಡ್ರೆ ತಿಂಬಕೆ ಕರಿಯಡ ಸಿಕ್ಕುದಲ್ಲಾತ!! ಅವ್ವನೊಟ್ಟಿಗೆ ಅದರ ಹೇಳಿನೂ ಆತ್... ತಂಗಮಕ್ಕಂಗೆ ತಲೆಬಿಸಿ ಸುರಾಗಲಿ ನೋಡಿ... ಅದ್ ನೋಡ್ರೆ "ಕಲ್ಲುರ್ಟಿ" ಗೆ ಬುಟ್ಟ ಕೋಳಿ!! ಹೈದಂಗೆ ಆಚೆ ವರ್ಷ ಜಾಂಡಿಸ್ ಆಗಿ, ಬೊದ್ಕಿರೆ ಸಾಕ್ ತಿರ್ಕಾಕನ.. ತಂಗಮಕ್ಕನೇ ತ್ಯಾಂಪಣ್ಣನೊಟ್ಟಿಗೆ ಹರ್ಕೆ ಹಾಡ್ ಹೇಳ್ಸಿ ಕಲ್ಲುರ್ಟಿಗೆ ಕೋಲ ಕೊಟ್ನೇಂತ ಹೇಳಿ ಒಳ್ಸಿಕಂಡದ್. ' ಹೈದಂಗ ಅದರ ಮೇಲೇ ಕಣ್ಣ್ ಬೀತ್ ತೇಃಳ್ರೆ ಇದ್ ಬೇರೆಂತದೂ ಅಲ್ಲ. ಕಲ್ಲುರ್ಟಿದೇ ಕೆಲ್ಸ!!' ಮಂಙಂಗೆ ಪರ್ರ್ಂಚಿ ಜೋರ್ಮಾಡಿ ಅಜಲನಕ್ಕಲೆ, ವಾಲಗದವರಕ್ಕಲೆ ಬೆರ್ಸಿ ಕೋಲಕ್ಕೆ ದಿನ ನಿಘಂಟ್ ಮಾಡ್ದೊ. ಕುಂಞಿಮೋನುಗೆ ಚಾಮಿ ನೋಡಿಕೆ ಉಟ್ಟೂತ ಪುಸಲಾಯ್ಸುದರೊಟ್ಟಿಗೆ ಕೋಳಿಗೈಪೂ ಮಾಡುವೆತ ಆಸೆನೂ ಹುಟ್ಟುಸಿದೊ. ಹೈದಂಗೆ ಚಾಮಿ ತೇಳ್ರೆ ಗೊತ್ತಿಲ್ಲದಂವ ಕೋಳಿಗೈಪು ಸಿಕ್ಕಿದೆತ ಕೊಣಿಯಕೆ ಸುರು ಮಾಡ್ತ್!!


                   ನಿಘಂಟ್ ಆದ ದಿನಕ್ಕೆ ನಾಕ್ ದಿನ ಇರ್ಕಾಕನೇ ಕೆಳಗೆ ಬೈಲ್ ಹೈದಂಗಳ ಕರ್ಕಂಡ್ ಬಂದ್ ಚಪ್ಪರ ಹಾಕ್ಸಿ, ಅಂಗಳ ಗುಡ್ಸಿ ರೆಡಿ ಮಾಡ್ಸಿತ್ ತ್ಯಾಂಪಣ್ಣ. ದೆವ್ವದ ದಿನ ಮನೆಲಿ ಜನನೋ ಜನ.. ಉಗ್ಗವ್ವ,ದೊಡ್ಡಂವ್ವ, ಚಿಂಕ್ಕವ್ವ, ಸಂಣ್ಣವ್ವ, ದೊಡ್ಡತ್ತೆ, ಸಣ್ಣತ್ತೆ, ಕುಂಞತ್ತೆ, ಶಾಲೆತ್ತೆ, ಉಗ್ಗಪ್ಪ, ಸಂಣ್ಣಪ್ಪ, ಕುಂಞಪ್ಪ, ದೊಡ್ಡ ಮಾವ, ಕುಂಞಿಮಾವ, ಶಾಲೆ ಮಾವ...ಎಲ್ಲರ ನೋಡಿ ಹೈದ ಕೊಣ್ದಾಡ್ತುಟ್ಟು (ಇಂದ್ ಮಕ್ಕಳಿಗೆ ಇವರೆಲ್ಲರ ಕಾಂಬ ಭಾಗ್ಯನೇ ಇಲ್ಲೆ. ಬರೇ ಅಂಕಲ್, ಆಂಟಿ!!) ಕತ್ತಲೆ ಆಕನ ದೆವ್ವದ ಕೊಣ್ತ ಸುರು. ಕುಂಞಿಮೋನುಗೆ ಇದ್ ಹೊಸಾ ಅನುಭವ!! ದೆವ್ವ ಕಣ್ಣ್ ಹೊರ್ಳ್ ಸಿ ಸೂಟೆನ ಎದೆಗೆ ಹಿಡ್ದರ ನೋಡಿ ಹೆದ್ರಿಕಂಡೇ ಅವ್ವನ ಸೆರ್ಂಗ್ ಎಡೇಂದ ನೋಡಿ ಚಾಮಿಗೆ ಭಯಂಕರ ಶಕ್ತಿ ಉಟ್ಟೂತ ನೆನ್ಸಿತ್. ದ್ಯಾಪು ಚಿಕ್ಕನ ದರ್ಶನ ನೋಡಿ ನಂಬಿಕೆ ಇನ್ನೂ ಜಾಸ್ತಿ ಆಗ್ತುಟ್ಟು. ಅದ್ರೊಟ್ಟಿಗೆ ಇಷ್ಟ್ ದಿನ ದೇವ್ರ ಕೋಣೆಲಿ ಮುಡ್ಪು ಕರೆಲಿ ಇದ್ದ ಬೆಳ್ಳಿ ಕಟ್ಟ್ ಬೆತ್ತ ದೆವ್ವದ ಕೈಲಿ ನೋಡಿ "ಚಾಮಿ ಯಾಗೋಳು ಮನೆ ಒಳಗೇ ಇದ್ದದೆನಾಂತ" ಆಶ್ಚರ್ಯನೂ ಆತ್. ಚಪ್ಪರದಡಿಲಿ ಕುದ್ದ ಹೆಮ್ಮಕ್ಕಳ್ದ್, ಅಜ್ಜಿಕಳ್ದ್ ಮಾತೇ ಮಾತ್.ಅದೇ ಹಳೇ ಪಂಡ್ ಕಟ್ಟೆ ಪುರಾಣ!!ದೆವ್ವ ಏನ್ ಹೇಳ್ರೂ ಯಾರಿಗೂ ಕೇಳ್ತನೇ ಇಲ್ಲೆ. ಕಡೆಗೆ ದೆವ್ವ ಕಟ್ಟಿದಂವನೇ ಅವರೆಲ್ಲಾ ಸುಮ್ಮನೆ ಇರಿಕೆ ಹೇಳಿ , ಇವನ ಕೈಲಿ ಬೆತ್ತ ಇಸಿ.. "ಅಪ್ಪೆನ ಪಿರವು ಬಾಲೆ ಬತ್ತಿನ ಲೆಕ್ಕ, ಪೆರ್ಗೆದ ಪಿರವು ಕಿನ್ನಿ ಬತ್ತಿನ ಲೆಕ್ಕ, ಪೆತ್ತದ ಪಿರವು ಕಂಜಿ ಬತ್ತಿನ ಲೆಕ್ಕ, ಸೂಜಿದ ಪಿರವು ನೂಲು ಬತ್ತಿನ ಲೆಕ್ಕ ಬತ್ತ್ ತ್ ಗೆಂಡದ ಬರ್ಸೊಗೊ ಕರ್ಬದ ಕೊಡೆ ಆತ್ ಉಂತುದು ಕಾತೊನ್ವೆ.. ಭಯ ಬೋಡ್ಚಿ, ಭಯ ಬೋಡ್ಚಿ!!" (ಅಮ್ಮನ ಹಿಂದೆ ಕೂಸು ಬಂದಾಂಗೆ, ಹೇಂಟೆನ ಹಿಂದೆ ಪಿಳ್ಳೆಗ ಬಂದಾಂಗೆ, ಹಸ್ ಹಿಂದೆ ಕರ್ ಬಂದಾಂಗೆ, ಸೂಜಿನ ಹಿಂದೆ ನೂಲ್ ಬಂದಾಂಗೆ ಬಂದ್ ಕೆಂಡದ ಮಳೆ ಬಾಕನ ಕಬ್ಬಿಣದ ಕೊಡೆ ಆಗಿ ನಿತ್ತ್ ಕಾಪಾಡ್ನೆ. ಭಯ ಬೇಡ, ಭಯ ಬೇಡ!!). ದೆವ್ವ ಹೇಳ್ದ್... ಇವಂಗೆ ಏನೊಂದೂ ಅರ್ಥ ಆಗದಿದ್ದರೂ ಚಾಮಿ ಮಾತ್ರ ಒಂದ್ ಅಭೂತ ಶಕ್ತಿ ಮನ್ಸ್ ಗೆ ಬಂದ್ ಭಯ, ಭಕ್ತಿಲಿ ಕೈಮುಗ್ತ್ ಕುಂಞಿಮೋನು.

                   ದೆವ್ವ ಬಂದ ನೆಂಟ್ರ್ ಗಳ , ಕೊಟ್ಟ ಹೆಣ್ಮಕ್ಕಳ್ಗೆಲ್ಲಾ ಅಭಯ ಕೊಟ್ಟ್ ಪಿರ್ದ್ ದ್, ದೆವ್ವದ ಭಂಡಾರ ಒಳಗೆ ಎತ್ತಿ ಇಸಿದೊಕೆಲವು ಗಂಡ್ ಸರ್ ಸಿಗ್ದ ಕೊಮ್ಮುನ ದಂಬೆಗಳ ಇಜ್ಜಲ್ ಗೆ ಹಾಕಿ ಉಂಬಕೆ ಕುದ್ರಿಕೆ ರೆಡಿ ಮಾಡ್ರೆ ಕೆಲವು ಅಜ್ಜಂದ್ರ್ ಕೋಲದ ಬಗ್ಗೆ ಚರ್ಚೆಲೇ ಮುಳ್ಗ್ಯೊಳೊ.. ಮತ್ತೇನಿಲ್ಲೆ... ವಾಲಗದಂವ  'ಪೆಪೇಂ..ಪೇಪೇಂಪೇ..ಪೇ.' ಊದುದು ಬುಟ್ಟು 'ಪೇಪೇಪೇಪೇ.. ಪೇಂಂ...' ಊದಿತ್ಂತ ಇವ್ಕೆ ತಲೆಬಿಸಿ!!!(ಒಳಗೆ ಹೋದ ಅಮೃತನೂ ಕೆಲ್ಸ ಮಾಡ್ತುಟ್ಟೂಂತ ಅವ್ಕಷ್ಟೇ ಗೊತ್ತು!!). ಹೈದ ಕೋಳಿಗೈಪುನ ಆಸೆಗೆ ಎಲ್ಲರೊಟ್ಟಿಗೆ ಉಂಬಕೆ ಕುದ್ದ್ ಕರೆಲಿ ಚುರ್ಕರ ಕುಂಡೆ ಊರ್ದ ಕುಂಞಪ್ಪನೊಟ್ಟಿಗೆ ಬಾಳ್ಲೆಗೆ ಕಿಳ್ಳಿನೂ ಕಟ್ಟ್ ಸಿಕಂಡತ್!! ಚೂರ್ ಹುಗ್ಗೆನೂ ಇಕ್ಕಿದ್ ಕೋಳಿ ಗೈಪುನೂ ಇಕ್ಕಿದೊ. ಕರಿಯಡ ತಿಂಬ ಆಸೆಲಿದ್ದ ಕುಂಞಿಮೋನು ಬಾಳ್ಲೆ ನೋಡ್ರೆ ಅಲ್ಲಿ ಎಂತ... ಕೊಡ್ಕಿ ಕೊಡ್ಕಿ ಇಕ್ಕಿದ್ ಒಂದ್ ಮುಲ್ಲೆಗೆಂಡೆನೂ... ರೆಂಕೆ ಕೊಡಿ ಮಾತ್ರ!! (ನಾಳಿ ತುಂಡ್, ಎಲು ಗಂಟ್ ಅಂತೂ ಗೈಪು ಇಕ್ಕಂವ ಹೈದ ತಿಂಬಕಿಲೇಂತ ಸೌಂಟ್ ಗೆ ಬಂದದರ್ನೂ ಅತ್ತಲೇ ಮೊಗ್ಚಿಕಂಡುಟು!!). ಇವಂಗೆ ಬೇಜಾರಾಗಿ, ಕಣ್ಣ್ ಲಿ ನೀರ್ ತುಂಬುಸಿಕಂಡ್ ಬೊಬ್ಬೆ ಹೊಡ್ದರೆ ಉಟ್ಟಲ್ಲಾ... ಎಂತಾತ್... ಎಂತಾತ್ ... ಅತ್ತೆಕ... ಅಯ್ಯೆಕ ಎಲ್ಲವೂ ಬಂದ್ ಎತ್ತಿದೊ... ಹೈದ ಕಣ್ಣ್ ಒರ್ಸಿಕಂಡ್ ಒಂದೇ ಪದ .... "ನಂಗೆ ಕರಿಯಡ ಬೇಕೂಊಊಊ!!". ತಂಗಮ್ಮಕ್ಕ 'ನಾಳೆ ಇನ್ನೊಂದ್ ಕೋಳಿನ ಗೈಪು ಮಾಡೊನೊ'ತೇಃಳ್ರು ಹೈದ ಮರ್ಡಟ ನಿಲ್ಸುದೇಲೆ... ಅಂಗಳಲೇ ಹೊಣ್ಕಿ ಹೊಣ್ಕಿ ಮರ್ಟದೆ..ನಮ್ಮ ಉರಿಯೋಳು!! ಕಡೆಗೆ ಪೂಜಾರಿ ದ್ಯಾಪಣ್ಣ ದೆವ್ವಕೆ ಇಕ್ಕಿದ ಅಗೆಲ್ ಲಿದ್ದ ಕರಿಯಡ ತುಂಡುನೂ, ಹನೀಸ್ ಚೂರ್ ರೊಟ್ಟಿನೂ ಕೊಟ್ಟಮೇಲೆ ಅಳ್ಗೆಲ್ ನಿಲ್ಸಿತ್. ಉಂಡ್ ಮಲ್ಗಿರೂ ಕುಂಞಿಮೋನುಗೆ ತಲೆಲಿ ಏನೇನೋ ಪ್ರಶ್ನೆಗ...' ಚಾಮಿ ಹಗ್ ಲ್ ಎಲ್ಲಿದ್ದದೆ? ಕತ್ತಲೆಗೆ ಎಲ್ಲಿ ಮಲ್ಗಿದೆ? ಚಾಮಿನ ಮನೆ ಎಲ್ಲಿ? ಅದರ ಬಣ್ಣ ಕಪ್ಪು ಯಾಕೆ? ಅದ್ ಯಾವುದೋ ಭಾಷೆಲಿ ಮಾತಾಡ್ದು ಯಾಕೆ? ಚಾಮಿ ಪೊಪ್ಪನಾಂಗೆ ಕಂಬೈ ಯಾಕೆ ಉಡ್ದುಲೆ? ಅದ್ಕೆ ಅಮ್ಮ , ಪೊಪ್ಪ ಯಾರೂ ಇಲ್ಲೆನಾ? ಕಿಚ್ಚಿನ ಎದೆಗೆ ಹಿಡ್ಯಕಾಕನ ಹೊತ್ತುದ್ಲೆನಾ? ಅಂತೂ ಕರಿಯಡ ನಂಗೆ ಸಿಕ್ಕಿತ್.. ಹೆಚ್ಚಿನಂಶ ಚಾಮಿಗೆ ಹೊಟ್ಟೆ ಇಸ್ ತಿತ್ಲೆ ಕಂಡದೆ...' ಹಿಂಗೇ ಅವನ್ದೇ ಪ್ರಶ್ನೆಗಳಿಗೆ ಅವನೇ ಉತ್ತರ ಕೊಟ್ಟ್ ಕಂಡಿರ್ಕಾಕನ ಹೊರಗೆ ಜಿರಿಜಿರಿ ಸದ್ದ್ ಲಿ ಏನೋ ಗೆಜ್ಜೆ ಸದ್ದ್ ನಾಂಗೇ ಕೇಳಿ... ಚಾಮಿ ಪುನಃ ಬಾತ್ ನೆನ್ಸಿ.. ಹೆದ್ರಿ ಅವ್ವನ ತೊಬ್ಬಿ ಹಿಡ್ಡ್ ಕಣ್ಣ್ ಮುಚ್ಚಿ ಮಲ್ಗಿದ ಹೈದಂಗೆ ನಿದ್ದೆ ಹತ್ತಿದೇ ಗೊತ್ತಾತ್ಲೆ.
(ಚಾಮಿನ ಚಿತ್ರನ ಲಾಯಿಕ್ಲಿ ಎಡಿಟ್ ಮಾಡಿ ಕಳ್ಸಿ ಕೊಟ್ಟ ನಿಖಿಲ್ ಕುಡೆಕಲ್ಲು ಇವ್ಕೆ ಧನ್ಯವಾದಂಗ)
(Kunjhimonuna Chaami : An Arebhashe article of Gowdas)
  • ಡಾ. ಪುನೀತ್ ರಾಘವೇಂದ್ರ ಕುಂಟುಕಾಡು