google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): March 2017

https://arebhasheminpuli.blogspot.com/2017/08/blog-post_11.html

Sunday 26 March 2017

ಬೆಂಗ್ಳೂರೆಂಬ 'ಮಿಣ್ಪುಳಿ'!!!

"ಅಣ್ಣೂಗಂಟೆ ಏಳಾತ್ಎದ್ರ್ಕಾಲೇಜ್ ಗೆ ಹೊತ್ತಾದೆಕುಂಞ ಮಾವನ ದೊಡ್ಡ ಮಂಙ ಕುಟ್ಟನ ನೋಡು..  ಇಂಜಿನಿಯರಿಂಗ್ ಮುಗ್ಸಿ ಬೆಂಗ್ಳೂರ್ಲಿ ಒಳದ್ ಗೊತ್ಲೇನಾ ನಿಂಗೆ? ತಿಂಗಳಿಗೆ ಲಕ್ಷ ಲಕ್ಷ ದುಡ್ದದೆ…  ನೀನೂ ಹಂಗೆ ಆದು ಬೇಡನಾ?"  ಬೊಡ್ರೊಟ್ಟಿ ಹೊಯ್ತಾ  ಬೇಬಿಯಕ್ಕ ಮಂಙನ ಮೇಲೆ ಪರ್ರ್ಂಚಿಕೆ ಸುರು ಮಾಡ್ದೊ. ಅಮ್ಮನ ಮಾತ್  ಕೇಳ್ದ ಅಣ್ಣು 'ನಾನೂ ಒಂದಿನ ಹಂಗೇ ಆವೇಂತಾ' ಗೊಣ್ಗ್ಯಂಡ್ ಹಲ್ಲುಜ್ಜಿಕೆ ನೀರಡಿಗೆ ಓಡ್ತ್. ನಮ್ಮ ಕೆ.ವಿ.ಜಿ. ಗೌಡ್ರ್ ಒಂದ್ ಇಂಜಿನಿಯರಿಂಗ್ ಕಾಲೇಜ್ ಕಟ್ಟ್ ಸಿದರ್ರ್ಂದ ಇಂದ್ ನಮ್ಮ ಸುಳ್ಯದ ಮೂಲೆ ಮೂಲೆನ ಹೈದ/ ಗೂಡೆಗ  B.E.  ಮಾಡ್ತೊಳೊ. ಇಲ್ಲರೆ  ಡಿಗ್ರಿನೋ ಬೇರೇನೋ    ಮಾಡಿ ಕೆಲ್ಸ ಹುಡ್ಕ್ಯಂಡ್ ಹೊರ್ಡಕಾಗಿತ್ತೇನೋ!!! ಹಂಗೇ  ನಮ್ಮ ಅಣ್ಣುನೂ..  B.E. ಕಲಿತಾ ಲಾಷ್ಟ್ ಸೆಮ್ ಲಿ Project Work ಮಾಡಿಕೆ ಬೆಂಗ್ಳೂರ್ಗೆ ಬಂದ್ ಎತ್ತಿದ ಹೈದನ ಖುಷಿಗೆ ಲೆಕ್ಕನೇ ಇಲ್ಲೆ. ಸುಳ್ಯಲಿ ಇಂಜಿನಿಯರಿಂಗ್ ಕಾಲೇಜೇ ಎತ್ತರದ ಕಟ್ಟಡ ನೋಡಿದ್ದ ಅವಂಗೆ ಬೆಂಗ್ಳೂರ್ಲಿ ಬಿಲ್ಡಿಂಗ್ ಗಳ ನೋಡಿ ಒಮ್ಮೆ ತಲೆ ತಿರ್ಗಿರೆ,  KFC ಚಿಕನ್, McD ಬರ್ಗರ್ ನಾಲಿಗೆಗೆ  ಹೊಸ ರುಚಿನೇ ತೋರ್ಸಿತ್. ಅಲ್ಲಿ ಎಂ.ಜಿ. ರೋಡ್ / ಬ್ರಿಗೇಡ್ ರೋಡ್ ಲಿ ತೊಳ್ದ ಮೊಟ್ಟೆನಾಂಗಿರುವ ಗೂಡೆಗಳ ನೋಡಿ  ' ನಾ ಜಾಬ್ ಮಾಡ್ರೆ ಬೆಂಗ್ಳೂರ್ಲೇ' ಹೇಳಿಕಂಡ್ ಊರ್ ಕಡೆ ಹೊರ್ಟತ್ ನಮ್ಮ ಹೈದ!!

ಇಂಜಿನಿಯರಿಂಗ್ ಮುಗ್ದಾಂಗೆ ಒಳ್ಳ ಕಂಪೆನಿಲಿ ಕೆಲ್ಸನೂ ಸಿಕ್ಕಿತ್ ನಮ್ಮ ಅಣ್ಣು ಹೈದಂಗೆ. ಬೇಬಿಯಕ್ಕಂಗಂತೂ ಖುಷಿಲಿ ಕಾಲ್ ನೆಲಲೇ ನಿಲ್ತಿಲ್ಲೆ. ಎಲ್ಲವ್ಕೂ ಫೋನ್ ಮಾಡಿ ಒಂದ್ ರೌಂಡ್ ಹೇಳಿನೂ ಆತ್ 'ನಮ್ಮ ಅಣ್ಣು ಬೆಂಗ್ಳೂರ್ಗೆ ಹೊರ್ಟುತೂಂತ!!'. ಸಿಟಿಗೆ ಬಂದ ಅಣ್ಣು ನಾಕ್ ಹೈದಂಗಳೊಟ್ಟಿಗೆ ಸೇರಿ ಒಂದ್ ರೂಮ್ ನೂ ಮಾಡ್ತ್. ಊಟ, ತಿಂಡಿ ಹೋಟ್ಲ್/ ಇಲ್ಲರೆ ಕಂಪನಿ ಫುಡ್ ಕೋರ್ಟ್!! ಬೊಳ್ಪಿಗೆ ಬರ್ಗರ್, ಮಧ್ಯಾಹ್ನ ಪಾಸ್ತಾ, ಕತ್ತಲೆಗೆ " ಅಂಬೂರ್ ಧಮ್ ಬಿರಿಯಾನಿ"!! ವೀಕೆಂಡ್ ಪಾರ್ಟಿ ಮತ್ತೆ ಸುತ್ತಿಕೆ ಮಂತ್ರಿ ಮಾಲ್/ ಸೆಂಟ್ರಲ್ ಮಾಲ್!! ಕಲರ್ ಕಲರ್ ಪಬ್ ಗಳ ಮುಂದೆ ಊರ್ಲಿ ಆತಿದ್ದ "ಹೊನಲು ಬೆಳಕಿನ ಕಬಡ್ಡಿ" ಯಾವ ಲೆಕ್ಕ. ಇದ್ ಸ್ವರ್ಗ!!! ನಂಗೆ ಇಲ್ಲಿ ಜಾಬ್ ಸಿಕ್ಕಿಕೆ ಪುಣ್ಯಮಾಡಿರೊಕೂಂತ ನೆನ್ಸಿಕಂಬತಿದ್ದ ಅಣ್ಣುಗೆ ಊರ್ ನೆನ್ಪೇ ಇಲ್ಲೆ!!

ಬೆಂಗ್ಳೂರ್ ಗೆ ಬಂದ ತಿಂಗ ಮೂರ್ ಕಳ್ದಾಂಗೆ ಮಾಯಾನಗರಿನ ನಿಜ  ಅನುಭವ ಆಕೆ ಸುರಾತ್ ನೋಡಿ.ಸಂಬಳ ಎಷ್ಟೇ ಬಂದರೂ ತಿಂಗಳ ಕಡೆಗೆ ಕೈಲಿ ಒಳಿದು ಕೆಲವೇ ಸಾವಿರ (ಅದೂ ಗ್ಯಾರಂಟಿ ಇಲ್ಲೆ!!). ಕೇವಲ ನಾವು ಉಸ್ರಾಡುವ ಗಾಳಿ ಮಾತ್ರ ಫ್ರೀ. ಆದರೆ ಅದೂ ಹೊಗೆ, ಧೂಳು ತುಂಬಿ ಹಿಂಬತಾಕನ ಮೂಂಕುಲಿ ಕಪ್ಪು ಕಪ್ಪು ಹೊಡಿ! ಮನೆಲಿ ಕೋಳಿ ಗೈಪು ಮಾಡ್ಕಾಕನ ಮಂಙಂಗೇಂತ  ಕರಿಯಡ/ ಪಟ್ಟಕಾಯಿ ತೆಗ್ದಿಸ್ತಿದ್ದೊ  ಅಮ್ಮ, ಇಲ್ಲಿ ಉಂಡರೂ ಉಣದಿದ್ದರೂ ಕೇಳಂವ ಇಲ್ಲೆ. ರೂಮ್ ಮೇಟ್ ಬಾದೇ 12 ಘಂಟೆ ಮೇಲೆ!! ಎಲ್ಲಿ ಹೋದರೂ ಬೆಂಳ್ತೆಕ್ಕಿನೇ ಹೊರ್ತು ಕೊಸ್ಲಕ್ಕಿ ಅನ್ನ/ ಕುಡು ಪೊಜ್ಜಿ/ ಒಣ್ಗಿಲ್ ಮೀನ್ ಪೊರ್ಮಳನೇ ಇಲ್ಲೆ!! ಒಮ್ಮೆ ಊರ್ಗೆ ಹೋಗಿ ಬಾಕೆ ಆಗುವ ಖರ್ಚ್ ಊರುಲಿ ಕಾಲೇಜ್ ಗೆ ಹೋಕಾಕನ ಇಡೀ ತಿಂಗಳಿಗೇ ಸಾಕಾತಿತ್ತ್. ಫೋನ್ಲಿ ಹಳೆ ದೋಸ್ತಿಗಳೊಟ್ಟಿಗೆ  ಮಾತಾಡಿ ಮಾತಾಡಿ ಫೋನ್ ಬಿಸಿ ಆತಷ್ಟೇ ಹೊರ್ತ್ ಮನ್ಸ್ ತಂಪಾತ್ಲೆ(ಕಾರಣ ಎಲ್ಲರ ಕತೆನೂ ಅದೇ!!)  ಎಲ್ಯಾರ್ ಹೊರಗೆ ಹೋಗಿ ಬರೊನಾಂತ ರೂಮ್ ಮೇಟ್ ನೊಟ್ಟಿಗೆ ಕೇಳ್ರೆ "ಟ್ರಾಫಿಕ್ ಲೇ ಅರ್ಧದಿನ ಕಳೆದು ಬೇಡ" ಅಂತ ಉತ್ತರ. ಮನೆಲಿರ್ಕಾಕನ ಶಾಲೆಮಾವನ ಮನೆ , ಬಂಗಾರ್ಕೊಡಿ ದೊಡ್ದತ್ತೆ ಮನೆ, ಊರು ಬೈಲ್ ಉಗ್ಗಪ್ಪನ ಮನೆ ಎಲ್ಲಾ ಸುತ್ತಿಕಂಡ್ ಬಾಕೆ ಆತಿತ್ತ್. ಇಲ್ಲಿ? ಊರ್ ಗೆ ಬಂದಿರ್ಕಾಕನ  'ಬೆಂಗ್ಳೂರ್ಗೆ ಬಾಕನ ಮನೆಗೆ ಬಂದೇ ಬರೊಕು' ಹೇಳ್ದವೆಲ್ಲಾ ಫೋನ್ ಮಾಡ್ರೆ 'ನಾವು ಈವಾರ ಇಲ್ಲೆಯಾ.. ಒಂದ್ ಫಂಕ್ಷನ್ಗೆ ಹೋಕುಟ್ಟು' ಹೇಳ್ತೊಳೊ. ಬೆಂಗ್ಳೂರೇ ಹೀಂಗೆ.. "ಮಿಣ್ಪುಳಿ"ನಾಂಗೆ..ನೋಡಿಕೆ ಭಾರೀ ಲಾಯಿಕ್.. ಮಿಣ್ಪುಳಿ ಅಮಾಸೆ ಕತ್ತಲೆಲಿ ಮಿಣ್ಕಿ ಚೂರ್ ಬೆಳ್ಕ್ ತೋರ್ಸಿದೇ ಬುಟ್ಟ್ ಚಂದ್ರನಾಂಗೆ ಪೂರ್ತಿ ಬೆಳ್ಕಲ್ಲ!! ಹಂಗೇ ಬೆಂಗ್ಳೂರ್.. ಉಂಬಕೆ ಗಂಜಿ ಕೊಟ್ಟ್ , ಬೊದ್ಕಿಕೆ ದಾರಿ ತೋರ್ಸಿದೇ  ಹೊರ್ತ್ "ಕೊಡ್ದು ಬೊದ್ಕಲ್ಲ!!"  ಆದರೂ ಊರ್ ಲಿ B.E. ಮುಗ್ಸಿ ಬೆಂಗ್ಳೂರ್ಲಿ ಇನ್ನೂ ಕೆಲ್ಸಕ್ಕೆ ಪರ್ದಾಡಿಕಂಡ್ ಇರವ್ಕಿಂತ ನನ್ನ ಕಥೆ ಎಷ್ಟೋ ಮೇಲ್.  'ಕುರ್ಡ್ ಗಿಂತ ಕೋಸ್ ಮೇಲೂಂತ' ನೆನ್ಸಿಕಂಡ್ , ಮಾರ್ನೆ ದಿನದ ಡ್ಯೂಟಿಗೆ ಹೊರ್ಡುವ ಚಿಂತೆಲೇ ಮಲ್ಗಿಗೆ ಹೊರ್ಟತ್  ಅಣ್ಣು !!
ನಿಮ್ಮ ಹೈದ

Monday 20 March 2017

ಛೇ... ಹಿಂಗೂ ಆದು ಉಟ್ಟಾ??!!


                           ಕುಂಟಡ್ಕ ದೊಡ್ಡಮನೆ ಪೊನ್ನಪ್ಪತೇಂಳ್ರೆ ಇಡೀ ಉಂಡೆಮಜಲ್ ಗ್ರಾಮಕ್ಕೇ ದೊಡ್ಡಜನ. ಸತ್ಯ, ಧರ್ಮಕ್ಕೆ ಹೆಸ್ರಾದ ಇವು ಭಾರೀ ಶ್ರಮಜೀವಿ. ನೋಡಿಕೂ ಹಾಂಗೆ.. ಆರೂವರೆ ಅಡಿ ಎತ್ತರದ ಅಜಾನುಬಾಹು!! ಊರುನ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಜನ " ಏನ್ ಪೊನ್ನಣ್ಣಾ" ಹೇಳಿ ಕೈಎತ್ತಿ ನಮಸ್ಕಾರ ಮಾಡಿ ಮಾತಾಡ್ಸವು. ಇಂಥಾ ಪೊನ್ನಪ್ಪನವರ್ದ್ ಐದ್ ಗಂಡ್ ಎರಡ್ ಹೆಣ್ಣ್ ಮಕ್ಕಳ ತುಂಬು ಸಂಸಾರ... ಅದರ್ಲಿ ಹಿರಿಯವನೇ ನಮ್ಮ " ಸೋಮಪ್ಪ" ... ಎಲ್ಲವ್ಕೂ ದೊಡ್ಡಂವ ಆದರ್ಂದ ಕರಿದು 'ಸೋಂಪಣ್ಣ'!!! ಇವನೇ  ನಮ್ಮ ಕಥೆಗೆ ನಾಯಕ. ಒಳ್ಳೆ ವಿದ್ಯೆ , ಬುದ್ಧಿ ಒಟ್ಟಿಗೆ ಒಳ್ಳೆ ಉದ್ಯೋಗಲೂ ಇದ್ದ ನಮ್ಮ ಸೋಂಪಣ್ಣಂಗೆ ಪ್ರಾಯ ತುಂಬಿಕಂಡ್ ಬಂದಾಂಗೆ ಎಲ್ಲವ್ಕೂ ಬರುವ ಆಸೆನೂ ಹುಟ್ಟಿತ್. ಅದೇ " ನಾನೂ ಒಂದು ಮೊದ್ವೆ ಆಕು!!" ಅಂತ. ಆದರೆ ಮನೆಲಿ ಅಪ್ಪನೊಟ್ಟಿಗೆ ಹೆಂಗೆ ಹೇಳ್ದು? ಮಕ್ಕ ಎಷ್ಟೇ ಬೆಳ್ದು ದೊಡ್ಡವರಾದರೂ ಅಯ್ಯೆ, ಅಪ್ಪಂಗೆ ಮಕ್ಕಳೇ ಅಲ್ಲ!! ಅದರ್ಲೂ ನೇರ ಹೋಗಿ ಹೇಳ್ರೆ ತಮಾಷೆ ಮಾಡಿ ನೆಗಾಡ್ವೋತ ನಾಚಿಕೆ. ಆಗ ನೆನ್ಪಾದೇ ಸೋಂಪಣ್ಣಂಗೆ ಅವನ ಚಡ್ಡಿ ದೋಸ್ತಿ ಕಾಟಿಗುಂಡಿ ಮಿಲ್ಟ್ರಿ ರಾಮಣ್ಣ!!!


                           ಸೋಂಪಣ್ಣ ಅರ್ಕಿಲ್ ಲಿ ಕಾಸಿ ಬಾಳೆ ಕುರ್ಲೆ ಅಡಿಲಿ ನುರ್ಕಿ ಇಸಿದ "ಗ್ಯಾರ್ದಣ್ಣ್" ದರ್ನೂ, ಒಂಚೂರ್ ಕಡ್ಡೆ ಉಪ್ಪಣನೂ ಹಿಡ್ಕಂಡ್ ದೋಸ್ತಿನಕ್ಕಲೆ ಹೊರ್ಟತ್. ದಾರಿಲಿ ಸಿಕ್ಕಿದ ಕಟ್ಟ, ಚೋಡಿಗಳ್ಲಿ ಕೈಕಾಲ್ ತೊಳ್ಕಂಡ್, ಯಾರೋ ಹಾಕಿದ ಅಡ್ಚಿಲ್ ಗೆ ಬಿದ್ದ ಮೊಲನ ಕಾಡ್ ಗೆ ಬುಟ್ಟ್ ಕಂಡ್ , ಗುಡ್ಡೆಲಿ ಸೊಪ್ಪ್ ಹೆರ್ಕ್ಂಡಿದ್ದ - ಗದ್ದೆಲಿ ಹಳು ತೆಕ್ಕಂಡಿದ್ದ ಹೆಮ್ಮಕ್ಕಳೆಲ್ಲಾ ಮಾತಾಡ್ಸಿಕಂಡ್  ಕಾಟಿಗುಂಡಿ ಮನೆಗೆ ಎತ್ತ್ ಕಾಕನ  ಕೋಳಿಗಳೆಲ್ಲಾ ಮುಚ್ಚಿ ಹಾಕುವ ಹೊತ್ತ್. ಉದ್ಗಿಲ್ ತೆಗ್ಯಕಾಕನನೇ ಬೂದಿಗುಂಡಿಂದ ಎದ್ದ  ನಾಯಿ ಕಚ್ಚಿಕೆ ಬಂದಾಂಗೆ ಓಡಿಬಂದರೂ, ನೆಂಟ್ರ್ ಗೊತ್ತಾಗಿಯೋ ಏನೋ ಮೂಸಿಕೆ ಸುರುಮಾಡ್ತ್. ನೋಡ್ರೆ ರಾಮಣ್ಣ ಅಂಗಳಲೇ ಚುರ್ಕರ ಕುದ್ದ್ ಕಂಡ್ ಉರ್ಳ್ ಗೆ ಬಿದ್ದ ಬರಿಂಕನ ಸಜ್ಜಿ ಮಾಡ್ತುಟ್ಟು!! ದೋಸ್ತಿ ಬಂದದರ ನೋಡಿ ಮಾಸ ಕಮ್ಮಿ ಆದೊಲ್ಲಾಂತ ನೆನ್ಸಿರೂ ಕೈಲಿದ್ದ ಕುಪ್ಪಿ ನೋಡಿ  ಹೆರ್ಮಣೆನಾಂಗಿದ್ದ ಅಷ್ಟೂ ಹಲ್ಲ್ ಬುಟ್ಟ್ " ಕೋಲ್ಗೇಟ್ ಸ್ಮೈಲ್"  ಕೊಟ್ಟರೆ, ರಾಮಣ್ಣನ ಹೆಣ್ಣ್ ಅಮ್ಮುಣಿ ಅಂಗಳಲಿ ಉರ್ಬುಳಿ ಹೊಣ್ಕ್ಯಾಡಿಕಂಡಿದ್ದ ಮಕ್ಕಳ ನೀರ್ ಚೊಂಬ್ ತಾಕೆ ಬೆರ್ಸಿ ತಾನೂ ಅಣ್ಣನ ಮಾತಾಡ್ಸಿಕೆ ಬಾತ್ಕತ್ತಲೆಗೆ ಸೋಂಪಣ್ಣಂಗೆ ಭಾರೀ ಗಮ್ಮತ್. ಸ್ಪೆಷಲ್ ಮಿಲ್ಟ್ರಿ ರಮ್ ಬೇರೆ!! ಊಟ ಎಲ್ಲ ಆದ  ಮೇಲೆ ಸೋಂಪಣ್ಣ ದೋಸ್ತಿನೊಟ್ಟಿಗೆ ಮೆಲ್ಲ ಬಂದ ವಿಷಯನ  ಬಾಯ್ಬುಟ್ಟತ್."ಯಾಗೋಳು ತಲೆದಿಂಬು ತೊಬ್ಬಿ ಹಿಡ್ದ್ ಮಲ್ಗಿ ಮಲ್ಗಿ ಸಾಕಾತ್ ಮಾರಾಯ. ಮೊದ್ವೆ ಆಕೂಂತ ಮನ್ಸಾದೆ. ಅಪ್ಪನೊಟ್ಟಿಗೆ ಹೆಂಗೆ ಹೇಳ್ದು.. ನಂಗೆ ಮೊದ್ವೆ ಮಾಡೀಂತ!! ... ನೀನೇ ಒಂದು ಉಪಾಯ ಹೇಳ್". ಮಿಲ್ಟ್ರಿ ರಮ್ ಆಗಲೇ ತಲೆಗೆ ಹಿಡ್ದಿದ್ದ ರಾಮಣ್ಣಂಗೆ ದೋಸ್ತಿನ ಕಷ್ಟಕ್ಕೆ ಒಳ್ಳೆ ಉಪಾಯ ಕೊಟ್ಟತ್. " ಸೋಂಪ... ನೀ ಹೋಗಿ ಪೊನ್ನ ಮಾವಂಗೆ ಹೇಳ್.. ' ಅಪ್ಪಾ... ಅವ್ವ ಒಬ್ಬಂಗೆ  ಮನೆ ಕೆಲ್ಸ ಎಲ್ಲಾ ಮಾಡಿಕೆ ಭಂಗ...ತಮ್ಮಂದ್ರ್ ಗೆ ಮೊದ್ವೆ ಮಾಡಿ.. ಮನೆಗೆ ಎರ್ಡ್ ಹೆಣ್ಣ್ ಮಕ್ಕ ಬಂದವೆ'... ಆಗ ಮಾವ ಹೇಳುವೊ  'ದೊಡ್ಡಂವ ನಿನ್ನ ಬುಟ್ಟ್ ಉಳ್ದವ್ಕೆ ಮೊದ್ವೆ ಮಾಡ್ರೆ ನೋಡ್ದವ್ ಏನ್ ಹೇಳುವೊ. ಸುರೂಗೆ ನೀ ಮೊದ್ವೆ ಆಗ್.. ಮತ್ತೆ ಒಳ್ದವ್ಕೆ'.. ಆಗ ನಿನ್ನ ಮೊದ್ವೆ ಗ್ಯಾರಂಟಿ ಆದೆ" ಅಷ್ಟೆ!!!

                           ಮಾರ್ನೆ ದಿನ ಬೊಳ್ಪುಗೆ ಕೋಳಿಕೂಂಗಿಕೇ ಮೊದ್ಲು ಎದ್ದ ಸೋಂಪಣ್ಣ ಅಮ್ಮುಣಿ ಮಾಡ್ದ  ಬೊಡ್ರೊಟ್ಟಿ, ಕತ್ತಲೆನ ಗಸಿ ತಿಂಡ್ ಓಡಿಕಂಡ್ ತೇಳುವಾಂಗೆ ಬಂದ್ ಮನೆಗೆ ಎತ್ತಿತ್. ಬಂದದೇ ಸೀದ ಅಪ್ಪನ ಮುಂದೆ ಹಾಜರ್. ಪೊನ್ನಣ್ಣ ಆಗಷ್ಟೆ ಜಾಲ್ ಕರೆಲಿ ಮಾಡ್ದ ನೆಟ್ಟಿಗೆ ನೀರ್ ಹೊಯ್ದ್ ಬಂದ್ ದೊಡ್ಡಮನೆ ಕೈಮರಲಿ ಕುದ್ದ್ ಸುಧಾರ್ಸಿಕಣ್ತೊಳೊ. ದೋಸ್ತಿ ಹೇಳಿಕೊಟ್ಟಾಂಗೆ ಸೋಂಪಣ್ಣ ಉರ್ಗಿತ್ ... "ಅಪ್ಪಾ.. ಮನೆಲಿ ಜನ ಜಾಸ್ತಿ ಆಗಿ ಅವ್ವ ಒಬ್ಬಂಗೆ ಎಲ್ಲಾ ಕೆಲ್ಸ ಭಂಗ. ಹಂಗೇ ತಮ್ಮಂದ್ರ್ ಗೆ ಮೊದ್ವೆ ಮಾಡ್ರೆ ಆಕಿಲೆನಾ?" ಮಾತ್ ಕೇಳಿ ಕೇಳಿ ಪೊನ್ನಣ್ಣಂಗೆ ಕಣ್ಣಲಿ ನೀರ್ ತುಂಬಿ, ಮಂಙನ ಕೈ ಹಿಡ್ಕಂಡ್ " ನೀ ನನ್ನ ಮಂಙ ಅಲ್ಲ ಬಲ... ನೀನೇ ನಂಗೆ ಅಪ್ಪ. ಮನೆ ಜವಾಬ್ದಾರಿ ಎಲ್ಲಾ ನಾ ಹೇಳದೆ ನೀನೇ ತಕಂಡಳ. ನಿನ್ನಂಥ ಮಂಙ ಹುಟ್ಟಿಕೆ ನಾ ಎಷ್ಟ್ ಪುಣ್ಯ ಮಾಡಿರೊಕೊ!! ಆಗಲಿ .. ನೀ ಹೇಳ್ದಾಂಗೆ ತಮ್ಮಂದ್ರ್ ಗೆ ಮಾತ್ರ ಅಲ್ಲ.. ಒಳ್ಳ ನೆಂಟ್ರ್ ಸಿಕ್ಕಿತೆ ನಿನ್ನ ತಂಗೆಕಳಿಗೂ ಒಟ್ಟಿಗೇ ಮೊದ್ವೆ ಮಾಡೊನೊ!!" ತಿರ್ಗಿ ಎಂಥಾಂತ ಹೇಳ್ದು ಸೋಂಪಣ್ಣ.. ನನ್ನ ಹಣೆಲಿ ಇಷ್ಟೇ ಬರ್ದುಟೂಂತ  ನೆನ್ಸಿಕಂಡ್ , ಉಪಾಯ ಹೇಳಿಕೊಟ್ಟ ದೋಸ್ತಿಗೆ " ಹುಲಿ ಹುಡಿಯಕೆ" ಅಂತ ಬೊಯ್ಕಂಡ್ " ಕುರೆ ಸತ್ತ ಕೊರುಂಬ" ನಾಂಗೆ ತೋಟ ಕಡೆ ಹೊರ್ಟತ್. ಆರ್ತಿಂಗಳೊಳಗೆ  ಸೋಂಪಣ್ಣನ ಎರ್ಡ್ ತಮ್ಮಂದರಿಗೂ , ತಂಗೆಕಳಿಗೂ ಒಂದೇ ಚಪ್ಪರಲಿ ಮೊದ್ವೆನೂ ಕಳ್ತ್!!! ಆದ್ದರ್ರ್ಂದ್ ನಮ್ಮ ಹೈದ, ಗೂಡೆಗಳೇಮೊದ್ವೆ  ಆಕುಂತಿದ್ದರೆ ನೇರವಾಗಿ ಅವ್ವ, ಅಪ್ಪಂಗೆ ಹೇಳಿ. ಇಲ್ಲರೆ ಕಡೆಗೆ ನೀವೂ ಹೇಳಕಾದು.."ಛೇ..ಹಿಂಗೂ ಆದು ಉಟ್ಟಾ?"


                ನಿಮ್ಮ ಹೈದ