google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): September 2017

https://arebhasheminpuli.blogspot.com/2017/08/blog-post_11.html

Tuesday 26 September 2017

ಅಡೋಳಿ ಪಾಚು....(An Arebhashe Articles of Gowdas)

                  ಗೌಡ್ರ್ ಗಳ್ಲಿ ಮೊದುಮಂಞ, ಮೊದೋಳಿಗೆನೊಟ್ಟಿಗೆ ಇದ್ದ್ ಕೊಡೆ ಹಿಡ್ಯವ್ಕೆ "ಅಡೋಳಿ" ಕರಿದು. ವಧು,ವರನ ಸೋದರ ಅತ್ತೆ/ಮಾವನ ಮಕ್ಕಳಿಗೆ ಮಾತ್ರ ಇದ್ ಜನ್ಮಸಿದ್ಧ ಅಧಿಕಾರ!! ಅಕ್ಕ, ತಂಗೆಕಳ ಗಂಡಂದಿರಿಗೂ ಇದರ್ಲಿ ಹಕ್ಕ್ ಉಟ್ಟು!! ಒಟ್ಟಾರೆ ಸಂಬಂಧಲಿ ಹೈದಂಗೆ ಬಾವ/ನಣ್ಕ, ಗೂಡೆಗೆ ಅತ್ತಿಗೆ/ನಾದಿನಿ ಆಗಿರೊಕು. (ಅಂಥವು ಇಲ್ಲದಿದ್ದರೆ ಮತ್ತೆ ವಧು, ವರ ಆದವ್ಕೆ ತುಂಬಾ ಹಕ್ಕಲೆ ಇದ್ದವೂ ಆದೆ... ಯಾರೂ ಇಲ್ಲದಿದ್ದರೆ ಮತ್ತೆ ಎಂಥ ಮಾಡ್ದು. ಅಳಿದೂರಿಗೆ ಉಳಿದವನೇ ಗೌಡ!!). ಇವುಕೆ ಬರೇ ಕೊಡೆ ಹಿಡಿದು ಮಾತ್ರ ಕೆಲ್ಸ ಅಲ್ಲ. ಮೊದ್ಮಕ್ಕಳ ಸೀರೆನ ನೆರ್ಗೆ ಸರಿಮಾಡ್ದು, ಪಂಚೆ ಸರಿ ಮಾಡ್ದು, ಪಚಾರಕ್ಕೆ ಕುದ್ದಲ್ಲಿಗೆ ನೀರ್/ ಜ್ಯೂಸ್/ಬೊಂಡ ತಂದ್ ಕೊಡ್ದು... ಕಡೆಗೆ ಎಣ್ಣೆ ಅರ್ಸಿನ ಆಗಿ ಮೀಯಕನ, ಮೈಸೂರ್ ಬಾಳೆಣ್ಣ್ ಕಡ್ಲೆ ಹೊಡಿ ಹಾಕಿ ಮೊದ್ಮಕ್ಕಳ ಬೆನ್ನ್ ಉಜ್ಜುದೂ "ಅಡೋಳಿ" ಜವಾಬ್ಧಾರಿ!! ಹಂಗೇ ನಮ್ಮ ಪಾಚುನೂ ಒಮ್ಮೆ ಅಡೋಳಿ ಆದರ್ಂದಗಿ ಅವನ ದೆಸೆನೇ ಬದ್ಲಾತ್... ಹೆಂಗೆ?? ಮುಂದೆ ಓದಿ... ಮನಸಾರೆ ಮೆಚ್ಚಿದ ಗೂಡೆ ಅಮ್ಮುಣಿನ ಬುಟ್ಟೇ ಬುಡೊಕುತ ಲಚ್ಚಣ್ಣ ಹಠ ಹಿಡ್ದಿದ್ದೊಲ್ಲ!! 'ಸಿಡಿಲಿ ಬಿದ್ದಿದ್ದ ತೆಕ್ಕಟೆನ, ಸುದ್ದಿಲ್ಲದೆ ಗೈಪು ಮಾಡಿ, ಕುಂಡಕೋಳಿನ ನೇಲ್ಸಿ ಇಸಿದ್ದ ಕಟ್ಟಪುಣಿ ದ್ಯಾಪಣ್ಣನ ಮಗ್ಳ್ ಬೇಡ' ಒಂದ್ ಕೊರ್ಸಂಡಿ ಹಠ!! ಹೇಳಿಕೆ ಒಂದ್ ಕಯಿಂಪೆ!! ಅಷ್ಟೇ.. ಹಂಗಾಗಿ ಪಾಚುನೂ ಅಮ್ಮುಣ್ಣಿನ ಮರ್ಯಕೆ ನೋಡ್ತಾ ಉಟ್ಟು. ಒಟ್ಟೊಟ್ಟಿಗೆ ಅಷ್ಟೇ ಬೇಜಾರ್ ನೂ ಇತ್ತ್!!  ಹಿಂಗೇ ದಿನ ದೂಡ್ತಿರ್ಕಾಕನ ಪಾಚುನ ಬಾವ ಪುತ್ತುಗೆ ಮೊದ್ವೆ ನಿಘಂಟ್ ಆತ್. ಪಾಚುನೂ ಪುತ್ತುನೂ ಬಾವ, ನಣ್ಕಂಗಿಂತಲೂ ಒಳ್ಳೆ ದೋಸ್ತಿಗ. ಪುತ್ತು ಚೂರ್ ತಲೆ ಓಡ್ಸಿ ಪಾಚುನೇ "ಅಡೋಳಿ" ಆದರೆ ಅವನ ಮನ್ಸ್ ಗೂ ಒಂದ್ ಬದಲಾವಣೆ ಸಿಕ್ಕಿದೆತ, ಪಾಚುನ ಒಪ್ಪುಸಿ ಹೊಸಾ ಜುಬ್ಬ, ಕೋಟ್ ಎಲ್ಲಾ ತೆಗ್ಸಿ ಕೊಟ್ಟರೆ, ಪಾಚುಗೆ ಒಪ್ಪಿಕಣದೆ ಬೇರೆ ದಾರಿಯೇ ಇಲ್ಲೆ.

                   ಅಂತೂ ದಿಬ್ಬಣದವೂ, ಅಡೋಳಿ ಪಾಚುನೂ ಮೊದ್ಮಂಙಂಗೆ ಕೊಡೆ ಹಿಡ್ಕಂಡ್, ನೆಂಟ್ರ್ ಗಳೊಟ್ಟಿಗೆ ತಮಾಷೆಮಾಡಿಕಂಡ್ ಧಾರೆ ಹೊತ್ತಿಗೆ ಸರಿ ಆಗುವಾಂಗೆ ಮೇಲ್ಕಟ್ಟ್ ಅಡಿಗೆ ಎತ್ತಿದೊ. ಊರ್ ಗೌಡ್ರ್ ಗಡಿಬಿಡಿ ಮಾಡ್ದೂಕಂಚಿನಕ್ಕಿನೊಟ್ಟಿಗೆ ಮೊದೋಳಿಗೆನ ಕಡೆವೂ ಬಂದ್ ಎತ್ತುದೂ ಸರೀ ಆತ್. ಮೊದ್ಮಂಙನ ಹಿಂದೆ ನಿತ್ತ್ ಕಂಡಿದ್ದ ಪಾಚು ಯಾವುದೋ ಆಲೋಚನೆಲಿ ತಲೆ ಎತ್ತಿ ಮೊದೋಳಿಗೆನ ಕಡೆ ನೋಡ್ದೂ, ಮೊದೋಳಿಗೆನ ಹಿಂದೆ ಇದ್ದ ಅದರ ಅಡೋಳಿನೂ ಇವನ ನೋಡ್ದೂ ಅದ್ ವಿಧಿಯೋ, ಮಾಯೆನ ಆಟನೋ ಗೊತ್ಲೆ. ಪಾಚುಗೆ ಒಮ್ಮೆ ಮೈಲಿಡೀ ಜುಂಗು ಎದ್ದದ್ ಮಾತ್ರ ಸತ್ಯ. ನೋಡ್ರೆ ಅದೇ ಅಮ್ಮುಣಿ!! ಮನಸಾರೆ ಮೆಚ್ಚಿ, ಪ್ರೀತಿಸ್ತಿದ್ದ ಅಮ್ಮುಣಿ!! ಅಷ್ಟೊತ್ತಿಗೆ ಊರ್ ಗೌಡ್ರ್ "ಹತ್ತ್ ಕುಟುಂಬ ಹದಿನೆಂಟ್ ಗೋತ್ರ ಬಂಧು ಬಾಂಧವರು ನೆಂಟರಿಷ್ಟರು....... ಕೈಯೆತ್ತಿ ಕನ್ಯಾಧಾರೆ ಹೊಯ್ದವೇಂತೇಃಳುವೇ" ಒಂದೇ ಉಸ್ರುಲಿ ಹೇಳ್ದೂ, ಎಲ್ಲವೂ "ಒಳ್ಳೆ ಕಾರ್ಯಂತೇಃಳುವೇ" ಹೇಳ್ದರ್ಲೂ ಮುಳ್ಗಿದರ್ಂದ, ಅಮ್ಮುಣಿನ ಕಣ್ಣ್ ಕರೆಂದ ಒಂದ್ ಹನಿ ನೀರ್ ಜಾರ್ದರ ಯಾರೂ ಗಮನ್ಸಿತೇಲೆ. ಆದರೆ ಅದ್ ಹನಿನ, ಕೈಲಿದ್ದ ಚೌಕದ ಕೊಡೀಂದ ಕಣ್ಣ್ ಕರೇಗೆ ಉಜ್ಜಿಕಂಡದರ ಕಂಡ್ ಸಂಕಟ ಪಟ್ಟ್ ಕಂಡವ ಮಾತ್ರ ಒಬ್ಬನೇ.. ಪಾಚು!! ಹೆಂಗೆ ಹೆಂಗೋ ಊಟಮಾಡಿ ದಿಬ್ಬಣದವರ್ಂದಲೂ ಮೊದ್ಲೇ ಹೊರ್ಟ್ ಮನೆ ಎತ್ತಿತ್ ನಮ್ಮ ಪಾಚು ಹೈದ. ಮಾರ್ನೆದಿನ ತುಪ್ಪಕೆ ಪೋಯಿತ ಪುತ್ತು ಫೋನ್ ಮಾಡಿ ಕರ್ದ ರೂ ಹೊರ್ಟತ್ಲೆ. "ನಂಗೆ ಸರೀ ಉಶಾರಿಲ್ಲೆಯ.... ಮೈ ಕೈ ಎಲ್ಲಾ ಪುಳ್ದದೆ.. ಬಹುಃಶ ಮೊನ್ನೆ ಇಡೀ ನಿದ್ದೆಗೆಟ್ಟ್ ಆಗಿರೊಕು.. ಇಂದೇ ಕತ್ತಲೆಗೆ ಬೇರೆ ಬೆಂಗ್ಳೂರ್ ಗೆ ಹೋಕು.. ನಾಳೆ ಡ್ಯೂಟಿಗೆ ಸನಿ ಹೋಕುಟ್ಟು.. ಭಂಗ ಆದು... ನಾ ಬಾದ್ಲೆ.. ಬೇಜಾರ್ ಮಾಡಿಕಂಬಡ!!" ಹೇಳಿ ತಪ್ಪ್ ಸಿಕಂಡ್ ಮಲ್ಗಿದಂವ ಎದ್ದದ್ ಹಿಂಬತಾಕನ. ಎದ್ದವನೇ ಸೀದ ಬೆಂಗ್ಳೂರ್ ಬಸ್ಸ್ ಹತ್ತಿ ಹೋತ್ ಕೂಡ. ಎಷ್ಟಾದರೂ ಮನ್ಸ್ ಬೇನೆಗೆ ಮುಲಾಮ್ ಎಲ್ಯುಟ್ಟು ಹೇಳಿ??

                     ಅತ್ತಿಗೆನ ಮೊದ್ವೆಗೆತ ಖುಸಿಲೇ ಓಡಿಬಂದಿದ್ದ ಗೂಡೆ ಅಮ್ಮುಣಿ ಬೇಜಾರ್ಲಿ ಒಳದ್ ನೋಡಿ ಅದರಪ್ಪ ದ್ಯಾಪಣ್ಣಂಗೆ ಒಂದ್ ಮಾತ್ ಕೇಳಿಯೇ ಹೋತ್ ನೋಡಿ.(ಎಷ್ಟಾದರೂ ಹೆಣ್ಣ್ ಹೆತ್ತವಲ್ಲ?? ಅದರ್ಲೂ ಅಪ್ಪಂದರ್ ಗಂಡ್ ಮಕ್ಕತ ಎಷ್ಟ್ ಹೊತ್ತ್ ಕಂಡರೂ ಹೆಣ್ಣ್ ಮಕ್ಕಳ ಮೇಲೆ ಇರುವ ಪ್ರೀತಿನೇ ಬೇರೆ... ತೋರ್ಸಿಕಂಬೊದ್ಲೆ ಅಷ್ಟೆ!!) "ಅಮ್ಮುಣೀ... ಅತ್ತಿಗೆನ ಮೊದ್ವೆ ಆತ್.. ನಿನ್ನದಿನ್ನೂ ಅತ್ಲೆತ ಬೇಜಾರ್ ಮಾಡಿಕಂಬಡ... ನಿಂಗೂ ನಾವು ಹುಡ್ಕ್ ತೊಳೊ ಅಲ್ಲ?? ಒಬ್ಬಳೇ ಮಗಳ ಗಿಣಿ ಸಾಂಕಿದಾಂಗೆ ಸಾಂಕಿ ಯಾರಿಗೋ ಕೊಡಿಕೆ ಒಮ್ಮೆಗೇ ಮನ್ಸಾದ್ಲೆ. ಬುಡು... ನೋಡ... ಮೊನ್ನೆ ಹೊಸಮೊದ್ಮಂಙ ಪುತ್ತುನೊಟ್ಟಿಗೆ ಇದ್ದ ಅಡೋಳಿ ಯಾರ್ ಗೊತ್ಲೆ. ಹೈದ ಲಾಯಿಕುಟ್ಟು. ಸಾಧುನೂ ಕಂಡದೆ. ನಮ್ಮ ಪುತ್ತುನೊಟ್ಟಿಗೇ ಕೇಳೊನೊ.. ಮೊದ್ವೆ ಗಜಿಬಿಜಿ ಎಲ್ಲಾ ಕಳ್ಯಲಿ!!" ಅಪ್ಪನ ಮಾತ್ ಕೇಳಿ ಅಮ್ಮುಣಿ , ಮರ್ಟ್ ಕಂಡ್ ಹಿಂದೆ ನಡ್ದ ಎಲ್ಲಾ ವಿಷಯ ಹೇಳ್ರೆ ದ್ಯಾಪಣ್ಣಂಗೂ ಒಮ್ಮೆಗೆ ಏನ್ ಹೇಳೊಕೂಂತಲೂ ಗೊತ್ತಾಗ್ತಿಲ್ಲೆ. ಆದರೂ ಮಗಳ ಸಮಾಧಾನ ಮಾಡಿ, ಬೆಂಗ್ಳೂರ್ ಗೆ ಕಳ್ಸಿದೊ. ಮಾರ್ನೆ ದಿನನೇ ಬೊಳ್ಪುಗೆ ಎದ್ದವೇ ಸೀದ ಹೋಗಿ ಎತ್ತಿದ್... ಲಚ್ಚಣ್ಣನ ಮನೇಗೆ!! "ಅಲ್ಲಯಾ ಬಾವ... ನಾವ್ ಅಂದ್ ಹುಡ್ಗಾಟಲಿ ಹಂಗೆ ಮಾಡ್ದೊತ ಈಗಲೂ ಹಂಗೇ ಮಾಡ್ರೆ ನಾವ್ಗೂ ಮಕ್ಕಳಿಗೂ ವ್ಯತ್ಯಾಸ ಎಂಥ ಉಟ್ಟು? ಆದದೆಲ್ಲಾ ಕಳ್ತ್... ಈಗ ನಿನ್ನ ಮನೆಬಾಗಿಲ್ ಗೆ ಬಂದ್ ಕೇಳಿಕಣ್ತೊಳೆ... ನನ್ನ ಮಗಳ ನಿನ್ನ ಸೊಸೆ ಮಾಡಿಕಂಡಿಯಾ??" ಲಚ್ಚಣ್ಣಂಗೂ ಒಮ್ಮೆಗೆ ಅವನ ಹಠ "ನಾಯಿ ಮೊಲೆಲಿ ಹಾಲಿದ್ದಂಗೆ"ಅನ್ಸಿದ್ ಮಾತ್ರ ಸುಳ್ಳಲ್ಲ. ಒಟ್ಟಿಗೆ ಮನ್ಸ್ ಲೇ 'ಹೆಂಗಿದ್ದರೂ ಗೊತ್ತಿದ್ದ ನೆಂಟ್ರೆ. ಆಸ್ತಿ ಬೊದ್ಕ್ ನಮ್ಮಷ್ಟಲ್ಲದಿದ್ದರೂ ಬರೇ ಪಾಪದವಲ್ಲ. ಕುಂಟುಕಾಡು ರಾಮಯ್ಯ ಬಾವ ಅಂದೇ ಹೇಳ್ಯೊಳೊ. ಗೂಡೆನ ಕೊಡ್ಕಾಕ ದೊಡ್ಡ ಮನೆಕಡೆ ಕೊಡೊಕು.. ತಾಕಾಕನ ನಮ್ಮಂದ ಪಾಪದವರಲ್ಲಿಂದ ತರೊಕು ಗಡ!! ಇನ್ನ್ ಈಗ ನಾ ಒಪ್ಪಿಕಣದೆ ಸಣ್ಣಂವ ಆದು ಯಾಕೆ?' "ಆದು ಬಾವ...ಮನೆ ಬಾಗಿಲ್ ಗೆ ಬಂದ್ ಹೆಣ್ಣ್ ಕೊಟ್ರೆತೇಃಳ್ಕಾಕನ ಬರುವ ಭಾಗ್ಯನ ಬೇಡತೇಳ್ದು ಮನೆಯಜಮಾನಂಗೆ ಒಳ್ಳದಲ್ಲ. ಎಷ್ಟಿದ್ದರೂ 'ಋಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯ' ಅಲ್ಲಾ..ನಾನೇ ಪಾಚುನೊಟ್ಟಿಗೆ ಮಾತಾಡಿ ಮುಂದುವರ್ಸಿನೆ... ಅಮ್ಮುಣಿ ನನ್ನ ಸೊಸೆ!!"... ಒಂದ್ ಅಡೋಳಿ ಆದ ದೆಸೆಂದ ಪಾಚು ಈಗ ಅವಂಗೊಂದು ಅಡೋಳಿನ ಹುಡ್ಕುತುಟ್ಟುಗಡ!!!
ಅಡೋಳಿ ಪಾಚು....(An Arebhashe Articles of Gowdas)


  • ಡಾ. ಪುನೀತ್ ರಾಘವೇಂದ್ರ ಕುಂಟುಕಾಡು


Arebhashe Articles of Gowdas