google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಒಂದ್ ತೊಟ್ಟೆಯ ಕಥೆ!!

https://arebhasheminpuli.blogspot.com/2017/08/blog-post_11.html

Friday 8 September 2017

ಒಂದ್ ತೊಟ್ಟೆಯ ಕಥೆ!!


                          
                              "ಇಂದನಿಯಾ....ಕತ್ತಲೆ ಇಡೀ ಸರಿ ನಿದ್ದೆನೇ ಇಲ್ಲೆ. ಏನೇನೋ ಕನ್ಸ್. ನಾವ್ ಮಲ್ಗುವ ತಲೆಕಡೆ ಹೊರಗೆ ಮಾಡ್ಂದ ಎನೋ ಕೊಟಕೊಟಾಃತ  ಸದ್ದ್. ಯಾರೋ ಮಾತಾಡಿಕಂಡಾಂಗೆನೂ ಕೇಳ್ತಿತ್ತ್. ನೀವ್ಗೇ ಏನಾರ್ ಗೊತ್ತಾಗುಟ?" ಹೇಳಿಕಂಡೇ ಗಂಡ ಚಿನ್ನಣ್ಣನ ಬಟ್ಲ್ ಗೆ ಓಡಿಟ್ಟುನೂ, ಕಡ್ಡೆ ಉಪ್ಪಣದ ಗೈಪುನೂ ಅಳಗೆ ಅಡೀಂದ ಗೋಂಚಿ ಇಕ್ಕಿಕೆ ಹೊರ್ಟೊ ಎಂಕಮ್ಮಕ್ಕ. "ಇಲ್ಲೆಲ್ಲಾ... ನಂಗೆ ನಿನ್ನೆ ಮಲ್ಗಿದವಂಗೆ ನಿನ್ನ ಅಪ್ಪನ "ಮಂಗುರ್ಣಿ" ದೆಸೆಂದ, ಕೊಟಕೊಟನೂ ಕೇಳ್ತ್ಲೆ!! ಎಂಥದೂ ಇಲ್ಲೆ. ಬೆಳ್ಜಾರ್ ಗೆ ಒಮ್ಮೆ ನಾ ಉಚ್ಚೆ ಹೊಯ್ಯಕೆ ಎದ್ರ್ ಕಾಕನ ಅಟ್ಟಲಿ ಎಲಿಗ ಓಡ್ದ್ ಕೇಳ್ತ್. ನಿಂಗೆಲ್ಲೋ ಭ್ರಮೆ!! ಸತ್ತ ನಿನ್ನ ಶಾಲೆ ಮಾವನ ಕೊಲೆ  ಬಂದಿರೊಕು!! ನೀ ಎಷ್ಟಾದರೂ ಅವರ ಕೊಂಡಾಟದ ಸೊಸೆ ಅಲ್ಲಾ??!!" ಹೇಳಿ ಓಡಿಟ್ಟ್ ಮುರ್ದ್ ಗೈಪುಗೆ ಕಂತ್ ಸಿ ತಿಂಬಕೆ ಸುರುಮಾಡ್ದೊ ಚಿನ್ನಣ್ಣ. ಅತ್ತೆ ಮೇಲೆನ ಸಿಟ್ಟ್ ಮೇಲೆತೇಃಳುವಾಂಗೆ "ಇವ್ಕೆ ಎಲ್ಲಾ ಸಸಾರನೇ...." ಗಂಡಂಗೆ ಬೊಯ್ಕಂದ್ ಒಲೆಲಿದ್ದ ಸೌದೆ ಕೊಳ್ಳಿನ ಸಿಟ್ಟ್ ಲಿ ಭೊಸ್ಕಂತ ಇನ್ನೂ ಒಳಗೆ ನೂಕಿದೊ. ಒಲೆಲಿದ್ದ ಕೆಂಡದಾಂಗೆ ಕೆಂಪಾದ ಹೆಣ್ಣ್ ಸುರ್ಪ ನೋಡಿ ಚಿನ್ನಣ್ಣ "ಸರೀ... ಬುಡು... ಇನ್ನೊಮ್ಮೆ ಹಂಗೇನಾದರ್ ಆದರೆ ನೋಡ... ನಾಳ್ದ್ ಹೆಂಗೂ ಪುತ್ತೂರ್ ಗೆ ಹೋಕುಟ್ಟು.. ಜೋಯಿಸರೊಟ್ಟಿಗೆ ಕೇಳೊನೊ... ಆತಾ" ಹೇಳಿ ನೆಗಾಡಿಕಂಡ್, ಒಳ್ದ ಉಪ್ಪಣದ ಹೊಡಿ ತುಂಡುನ ಚಪ್ಪಿಕಂಡ್, ಬಟ್ಲ್ ನೀರಡಿಲಿಸಿ ಕೈತೊಳ್ದ್ ತೋಟಕ್ಕೆ ಹೋದೊ. ದಿನ ಕತ್ತಲೆಗೂ ಪುನಃ ಅದೇ ಸದ್ದ್ ಕೇಳಿ ಎಚ್ಚರಾದ ಎಂಕಮ್ಮ, ಗೂರೆಳಿತ್ತಿದ್ದ ಗಂಡನ ಕುಟ್ಟಿ ಕುಟ್ಟಿ ಎದ್ರ್ ಸಿ "ನೋಡಿ... ಇಂದ್ ನೂ ಅದೇ ಸೌಂಡ್.. ಹೋಗಿ ನೋಡಿಯಾ..." ಹೇಳ್ದಕ್ಕೆ, ನಿದ್ದೆ ಕಣ್ಣ್ ಲೇ ಲೈಟ್ ತಕಂಡ್ ಹೋದೊ ಚಿನ್ನಣ್ಣ. ಸೂರಡಿಲಿ ಎಂತದೂ ಕಾಣದಿದ್ದರೂ, ಕೇಳ್ದ ಸದ್ದ್ ಗೆ ಮಾತ್ರ ನಿದ್ದೆ ಫುಲ್ ಬುಟ್ಟೋತ್. ತಿರ್ಗಿ ಬಂದ್ "ಸೌಂಡ್ ಕೇಳ್ದು ಹೌದುಯಾ.. ಆದರೆ ಎಂತದೂ ಕಾಂಬೊದ್ಲೆ!! ನಾಳೆ ಬೊಳ್ಪುಗೆ ಬೈನಾಟಿಗೊಂದು ಈಡ್ ತೆಗ್ದಿಸೊನೊ... ನೋಡ!!" ಹೇಳಿ ಜಾರ್ದ ಕಂಬೈನ ಸರಿಮಾಡಿಕಂಡ್ ಅಂಗಾತ ಬಿದ್ದ್ ಕಂಡೊ.
           
                        ಮಾರ್ನೆ ದಿನ ಬೊಳ್ಪುಗೆ ಎದ್ರಿಕೆ ಮೊದಲೇ  ಚಿನ್ನಣ್ಣನ ಅವ್ವನ ಪರ್ರಂಚಟ ಸುರಾಗುಟು."ನಾ ಹೇಳ್ದೆ... ಮೂಲೆಲಿ ಸಿಡ್ಲ್ ಬೊಡ್ಡ್ ಸತ್ತ ಕೊಟ್ಟೆ ಚಾಳೆನ ತೆಗ್ಸೊಕುತ... ಇವಂಗೆ ನೋಡ್ರೆ ಯಾಗ ನೋಡ್ರೂ ಪುರ್ಸೊತ್ತಿರಿಕಿಲೆ!!  ಊರ್ಲಿದ್ದ ಕೊಟ್ಟುಕುಡ್ತಲೆಗೆಲ್ಲಾ ಅದರ್ಲೇ ಬಂದ್ ಸತ್ತೊಳೊ.. ಏನ್ ಬೊಬ್ಬೆ, ಏನ್ ಬೊಬ್ಬೆ!! ಇನ್ನ್ ಕೊಟ್ಟೆ ಚಾಳೆಗೆ ಯಾವ ರಣ, ಪೀಡೆ ಬಂದ್ ಸೇರಿಕಂಡತೊ? ಕತ್ತಲೆ ಇಡೀ ಅತ್ತನ ಮಾಡ್ ಕರೇಂದ ಕೊಟಕೊಟ ಸದ್ದ್. ಇರ್ಲ್ ಇಡೀ ನಾ ಕಣ್ಣೇ ಮುಚ್ಚಿತ್ಲೆ!!  ಚಿನ್ನಾ... ಇಂದಾರ್ ಒಮ್ಮೆ ಹೋಗಿ ನಿನ್ನ ಜೋಯಿಸನೊಟ್ಟಿಗೆ ಕೇಳಿ ಬಾ ಮಾರಾಯಾ..." ಅಯ್ಯೆನ ಸುಪ್ರಭಾತಕ್ಕೇ ಎದ್ದ ಚಿನ್ನಣ್ಣ " ಆದವ್ವ... ನಿನ್ನ ಪರ್ರ್ಂಚಟನ ಒಮ್ಮೆ ನಿಲ್ಸಿಯಾ"ತೇಳಿ ಹಲ್ಲುಜ್ಜಿ, ಚಾ ಕುಡ್ದ್ ಜೋಯಿಸನಕ್ಕಲೆ ಹೋಗಿ ಎತ್ತಿದೊ. ಸುಮಾರ್ ಹೊತ್ತ್ ಕುದ್ದ್ ಕುದ್ದ್, ಕಡೇಗೆ ಮೂರ್ ಘಂಟೆ ಹೊತ್ತ್ ಗೆ ಜೋಯಿಸನ ಮುಂದೆ ಕುದ್ರುವ ಭಾಗ್ಯ ಸಿಕ್ಕಿತ್ ಇವ್ಕೆ. ಜೋಯಿಸನೂ ಕವ್ಡೆ ಹಾಕಿ, ಕೂಡ್ಸಿ, ಕಳ್ದ್... ಬರ್ದದರ ಮೇಲೇ ಮೂರ್ ಮೂರ್ ಸರ್ತಿ ಗೀಟ್ ಹಾಕಿದರ್ಲಿ ಪೇಪರೇ ಒಟ್ಟೆ!! "ನೋಡಿ ಚಿನ್ನಣ್ಣಾ... ನಿಮ್ಮ ಮನೆಗೆ ಛಿದ್ರ ದೋಷ ಆಗುಟು. ನೀರಡಿ ಕೊಟೆಗೆ ಹಕ್ಕಲೆ ತಗ್ ಡ್, ಕುಪ್ಪಿಲಿ ಮೊಸಿ ತುಂದ್ ಮನಿ ಏನಾರ್ ಸಿಕ್ಕಿದ್ ನೆನ್ಪುಟ್ಟಾ?.... ನೆರೆಕರೆಯವರೊಟ್ಟಿಗೆ ನಿಷ್ಠುರ, ಕುಟುಂಬಲಿ ಒಳಜಗಳಗ ಏನಾರ್...." "ನೆರೆಕರೆಯವರ ಜಗಳ ನಾಯಿ, ಕೋಳಿಗಳಿಗೆ ಯಾಗೋಳು ಇದ್ದದೇ. ಕುಟುಂಬ ಜಗಳ, ಕೋಮಣ ಜಿಡ್ಡ್ ಹೋಗುವಂಥದ್ದಲ್ಲ!! ಆದರೂ ಯಾರೂ ಮಾಡಿರಿಕಿಲೇಂತ ಹೇಳಿಕೆ ಆಕಿಲೆ. ಅಂಥಾ ಕೊರ್ಸಂಡಿ, ಕಣ್ಣೋಜಿ, ನಂಜಿ ಕಾರಿಕಂಡಿರವೇ ನಮ್ಮಲ್ಲಿ ಒಳದ್. ಇದ್ ಯಾರ್ ಮಾಡಿರುವೊತ ಒಮ್ಮೆ ಪ್ರಶ್ನೆಲಿ ನೋಡಿ? ಹಂಗೇ ಇದ್ಕೆ ನಿಮೂರ್ತಿ ಎಂಥ ಜೋಯಿಸರೇ?" "ನೋಡಿ ಚಿನ್ನಣ್ಣಾ.. ಯಾರ್ ಮಾಡ್ದೋತ ಬೇಡ. ಮತ್ತೆ ಅದ್ ಇನ್ನಷ್ಟ್ ಜಗಳಕ್ಕೆ ದಾರಿ. ಅಷ್ಟಕ್ಕೂ ಇದ್ ನಿಮೂರ್ತಿ ಮಾಡಿಕೆ ಆಗದ ಸಮಸ್ಯೆ ಏನೂ ಅಲ್ಲಲ್ಲ??!! ಒಂದ್ ಸಣ್ಣ ಕಿರಿಯ ಮಾಡಿ, ಕಳ್ದ್ ತೆಗೆಯೊನೊ. ಅಷ್ಟೇ!! ನಾಳೆ ಬುಟ್ಟ್ ನಾಳ್ದ್ ನಂಗೆ ಚೂರು ಪುರ್ಸೊತ್ತು ಉಟ್ಟು... ಅದೇ ದಿನ ಆದು.. ಹೊರಗೆ ಹೈದ ನೀವ್ಗೆ ಸಾಮಾನ್ ಚೀಟಿ ಕೊಟ್ಟದೆ. ಆಕಿಲೆನಾ? " ಜೋಯಿಸಂಗೆ ಕಾಣಿಕೆ ಇಸಿ, ಹೈದ ಕೊಟ್ಟ ಚೀಟಿನನೂ ತಕಂಡ್ ಚಿನ್ನಣ್ಣ ಮನೆಗೆ ಎತ್ತ್ ಕಾಕನ ನಡುರಾತ್ರೆ. ನೋಡ್ರೆ ಸದ್ದ್ ಮಾತ್ರ ಚೂರು ಕಮ್ಮಿ... ಆಗೊಮ್ಮ್.. ಈಗೊಮ್ಮೆ ಅಷ್ಟೆ!!


                         ಅಂತೂ ಜೋಯಿಸ ಹೇಳ್ದ ಸಾಮಾನ್ ಗಳೆಲ್ಲಾ ತಂದ್ ಮನೆಲಿಸಿ ಕಳ್ದ್ ತೆಗೆಯಕೆ ಎಲ್ಲವೂ ಕಾದ್ ಕುದ್ದೊ. ಯಾರಿಗೂ ಗೊತ್ತಾಕೆ ಬೊತ್ತುತ ಯಾರಿಗೂ ಹೇಳ್ತ್ಲೆ. ಆದರೂ ಎಂಕಮ್ಮಕ್ಕ ಮಾತ್ರ ಅವರ ತವ್ರ್ ಮನೆಗೆ ಹೇಳಿ ಅಪ್ಪನ ಬಾಕೆ ಮಾಡಿಕಂಡೊ. 'ಹಿಂಬತ್ ನಾಕ್ ಘಂಟೆಗೇ ಬನ್ನೆ'ತೇಳ್ದ ಜೋಯಿಸರ್ ಬಂದ್ ಎತ್ತ್ ಕಾಕನ ಘಂಟೆ ಎಂಟ್!! ಬಂದ ಹಾಂಗೇ ಮಂಡಲ ಹಾಕಿ, ಕಾಯಿ ಗಡಿಲಿ ನೆಣೆ ಬತ್ತಿ ಇಸಿ ಕೆಲ್ಸ ಎಲ್ಲಾ ರಪರಪ ಮಾಡಿ ಮುಗ್ಸಿದೊ. ಕಡೆಗೆ ಒಂದ್ ಹೂಂಜನನೂ ತಲೆಕೊಯಿದ್, ಒಟ್ಟಿಗೆ ಬಂದ ಹೈದನೊಟ್ಟಿಗೆ ಬ್ಯಾಗ್ ಗೆ ತುರ್ಕಿ ಇಸಿಕಂಡೊ!! ಎಲ್ಲರ ಎದ್ರ್ ಸಿ ನಿಲ್ಲ್ ಸಿ "ಮನೆದೇವ್ರ, ಗ್ರಾಮದೇವ್ರ, ಸೀಮೆ ದೇವ್ರ ನೆನ್ಸಿಕಂಡ್... ಮೀದ ನೀರ್ ಲ್ಯಾಗಲಿ, ಉಟ್ಟ ಬಟ್ಟೆಲ್ಯಾಗಲಿ, ಹೊಯ್ದ ಎಣ್ಣೆಲ್ಯಾಗಲಿ, ಹೊತ್ತ್ ಸಿದ ಬತ್ತಿಲ್ಯಾಗಲಿ, ಹಾಕಿದ ಮಂಡಲಲ್ಯಾಗಲಿ, ಕೊಯ್ದ ಕೋಳಿಲ್ಯಾಗಲಿ ಏನಾರೊಂದು ಕುಂದುಕೊರತೆ ಬಂದಿರ್ದು. ಅದರೆಲ್ಲಾ ಮಾಪ್ ಮಾಡಿ, ಆಗಿರುವ ದೋಷಕಾರ್ಯಕ್ಕೆ ಸಂಪೂರ್ಣ ನಿಮೂರ್ತಿ ಮಾಡಿ ಕೊಡೊಕುತ ನಮ್ಮೆಲ್ಲರ ಪ್ರಾರ್ಥನೆ" ಹೇಳಿ ಕರೆಲಿ ಹಾಳೆ ಕಿಳ್ಳಿಲಿದ್ದ ಕುರ್ದಿ ನೀರ್ ಎಲ್ಲವ್ಕೂ ಸಿಡ್ಕಿದೊ ಜೋಯಿಸರ್. "ಲೈಟ್ ಹಿಡ್ಕಂಡ್ ಬನ್ನಿ ಚಿನ್ನಣ್ಣಾ... ಕುರ್ದಿ ನೀರ್ ಮನೆ ಸುತ್ತ ಚೋಂಪೊಕು... ಪೋಯಿ" ಮನೆವರ ಕರ್ಕಂಡ್ ಹೊರ್ಟೊ. ಹೋಕನ ಕೊಟ್ಟೆ ಚಾಳೆನ ಕಡೆ, ಮನೆನ ಮಾಡ್ ಸೂರಡಿ ದಂಬೆ ಕರೆಲಿ ಬಿಳೀ "ತೊಟ್ಟೆ"ಲಿ ಕಟ್ಟಿಕಂಡ್ ಏನೋ ನೇಲ್ದೆ. ಅದರ ನೋಡಿ "ನೋಡ್ದರಿಯಾ ಚಿನ್ನಣ್ಣಾ... ಮಾಡಿ ಮೊಡ್ಗಿದ್ ಇಲ್ಲ್ಯುಟ್ಟು!! ಇಷ್ಟ್ ದಿನ ನೀವ್ಗೆ ಕಂಡತೇಲೆ!! ಈಗ ಹೊರಗೆ ಬಾತ್ ನೋಡಿ. ಇದರ ಹಂಗೇ ಬರೇ ಕೈಲಿ ಹೆರ್ಕಿ ಬಿಸಾಡ್ದಲ್ಲ. ಕಟ್ಟಿ ಕೊಟ್ನೆ. ತಕಂಡೋಗಿ ಹರಿವ ನೀರ್ ಲಿ ಬುಡಿ. ಚೋಡಿಲಿ ಆದರೂ ಆದು!!" ಹೇಳ್ದ ಜೋಯಿಸ ಅವಂನ ಬಿಲ್ಲ್ ಚುಕ್ತಾ ಮಾಡಿಕಂಡ್, ಕೊಯ್ದ ಕೋಳಿನನೂ ತಕಂಡ್ ಹೋತ್. ಆದಿನ ಕತ್ತಲೆಗೆ ಎಂಥ ಸೌಂಡೂ ಇಲ್ಲೆ. ಎಲ್ಲವು ನೆಮ್ಮದಿಂದ ನಿದ್ದೆ ಮಾಡ್ದೊ. ಮಾರ್ನೆ ದಿನ ಬೊಳ್ಪುಗೆ ನೋಡ್ರೆ, ಕೆಲ್ಸಕ್ಕೆ ಬಂದ ಮಾಂಕು ಬಿಳಿ "ತೊಟ್ಟೆ" ಸಿಕ್ಕಿದ ಜಾಗೆಲಿ ಎಂಥದೋ ಪುರ್ಡಿದೆ. ಅದರ ನೋಡ್ದ ಎಂಕಮ್ಮಕ್ಕ "ಓ ಮಾಂಕು... ನೀ ಎಂಥ ಅಲ್ಲಿ ಹುಡ್ಕುದು? ಅಲ್ಲಿ ನಿನ್ನೆ ಛಿದ್ರದೋಷದ ಸಾಮಾನ್ ಸಿಕ್ಕಿತ್. ನೀನೇ ಏನಾರ್ ತಂದಿಸಿದಾ ಹೆಂಗೆ? ಸೊಯೆಇಲ್ಲದಂವ... ನಿನ್ನ ಹುಲಿ ಹಿಡ್ಯಕೆ... " " ಅಯ್ಯೋ ಎಂಕಮ್ಮಕ್ಕ... ನಂಗೇನ್ ಮೊರ್ಲಾ.. ಗಂಜಿ ಉಂಬ ಮನೆಗೆ ಮಾಡಿ ಮೊಡ್ಗಿಕೆ.. ಮೊನ್ನೆ ಗೊಬ್ಬರ ಎಳ್ಯಕೆ ಬಂದಿರ್ಕಾಕನ, ನೀವ್ ಕಿಚ್ಚಿ ಹಾಕಂಬಕೆ ನಾಕ್ ತುಂಡ್ ಚರ್ರ್ಂಡಿ ಮೀನ್ ಕೊಟ್ಟಿದ್ದರಿ ನೋಡಿ. ಇನ್ನೊಮ್ಮೆಗೆ ಆದೂಂತ ಬಿಳಿ "ತೊಟ್ಟೆ"ಲಿ ಕಟ್ಟಿ ಇಸಿದ್ದೆ. ಕೆಳಗಿಸಿರೆ ಎಲಿ, ಕೊತ್ತಿ ಹೊರ್ದೂತ ಇಲ್ಲಿ ಸೂರಡಿಲಿ, ದೊಂಬೆ ಸೆರೆಲಿ ಹುಗ್ಗ್ ಸಿ ಇಸಿದ್ದೆ. ಕತ್ತಲೆಗೆ ಎಲಿಗಳೋ, ಹೆಗ್ಗಣನೋ ಬಂದ್, ಎಳ್ದ್ - ಜಾರ್ಸಿ ಹೊರಗೆ ತೆಗ್ದಿರೊಕು... ಅದರ ಪಡೆ ಮುತ್ತಿಕೆ!!" ಹೇಳಿ ನೆಗಾಡಿಕಂಡ್ ಅಡ್ಕೆ ಚೊಲ್ಲಿಕೆ ಹೋತ್.....
 ( Ond Thotteya Kathe : An arebhashe article of Gowdas)
  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು

No comments:

Post a Comment