google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಬುಡ ಚಿಗ್ ರ್ದ ಹೊತ್ತ್….( An Arebhashe Articles of Gowdas)

https://arebhasheminpuli.blogspot.com/2017/08/blog-post_11.html

Tuesday 19 September 2017

ಬುಡ ಚಿಗ್ ರ್ದ ಹೊತ್ತ್….( An Arebhashe Articles of Gowdas)



                                  "ಇಂದನೇ ಬೇಬಿ.... ಅಣ್ಣುನ ಫೋನ್... ಅಮೇರಿಕಾಂದ... ನಿನ್ನೊಟ್ಟಿಗೆ ಮಾತಾಡ್ದೆಗಡ... ಬೇಗ ಬಾನೇ...." ಗಂಡ ರಾಮಣ್ಣನ ಬೊಬ್ಬೆ ಕೇಳಿ, ಜಾಲ್ ಕರೆಲಿ ನೀರಡಿ ದೊಂಬೆ ಅಡಿಲಿ ಹಸಿಮೀನ್ ಸಜ್ಜಿ ಮಾಡಿಕಂಡಿದ್ದ ಬೇಬಿಯಕ್ಕ, ಮೀನ್ ತಪಲೆಗೆ ಹಾಳೆ ಕಿಳ್ಳಿ ಅಡ್ಪ ಇಸಿ ಅದೇ ಚಂಡಿ ಕೈನ ಸೆರ್ರ್ಂಗ್ ಗೆ ಒರ್ಸಿಕಂಡ್ ಮನೆ ಒಳಗೆ ಓಡ್ದೊ. "ಹಲೋ.. ಅಮ್ಮಾ... ಹೆಂಗೊಳರಿ... ಸರ್ತಿ ತೊಡಿಕ್ಕ್ಯಾನ ಜಾತ್ರೆ  ಸಮಯಲಿ ನಾವು ಊರ್ ಗೆ ಬರ್ತೊಳೊ. ದೊಡ್ಡದರ್ಶನ ಬಲಿಗೆ ಎಲ್ಲವೂ ಒಟ್ಟಿಗೇ ಪೋಯಿ. ಶಾಂತಿನೂ ಬಂದದೆ. 'ಅನುಜ್ಞಾ'ನನೂ ಕರ್ಕಂಡ್ ಬರ್ತೊಳೆ... ಹಲೋ... ಕೇಳ್ತುಟ್ಟಾ... ಹಲೋ.. ಹಲೋ... ಟುಂಯ್... ಟುಂಯ್". ಫೋನ್ ಕಟ್!! ಬೇಬಿಯಕ್ಕಂಗೆ ಮಂಙನೊಟ್ಟಿಗೆ ಮಾತಾಡಿಕೆ ಆಗದೆ ಹನೀಸ್ ಬೇಜಾರಾದರೂ ಅಂವ ಹೇಳ್ದ ಮಾತ್ ಕೇಳಿ ಹಾಲ್ ಕುಡ್ಡಷ್ಟ್ ಕುಸಿ ಆತ್. ಹಂಗೇ ಅಲ್ಲಿದ್ದ ಐಮರಕ್ಕೆ ಒರ್ಗಿ ಕುದ್ದ್ ಕಳ್ದ ದಿನಗಳೆಲ್ಲಾ ನೆನ್ಸಿಕೆ ಸುರು ಮಾಡ್ದೊ. ಅಣ್ಣು ಹೈದನ ಹೊಟ್ಟೆ ಬಟ್ಟೆ ಕಟ್ಟಿ ಇಂಜಿನಿಯರ್ ಮಾಡ್ಸಿ ಬೆಂಗ್ಳೂರ್ ಗೆ ಕಳ್ಸಿದ್.. ಹೋದಂವ ಪೇಟೆ ಗೂಡೆ ಶಾಂತಿನ ಮೊದ್ವೆ ಆಕೆ ಹೊರ್ಟದ್.. ಮನ್ಸ್ ಒಪ್ಪದಿದ್ದರೂ ಒಬ್ಬನೇ ಮಂಙತ ಗಂಡನನೂ ಒಪ್ಪ್ ಸಿ ಮೊದ್ವೆ ಮಾಡ್ದ್.. ಮೊದ್ವೆ ಆಗಿ ಮೂರ್ ತಿಂಗಳಿಗೇ ಅಂವ ಹೆಣ್ಣ್ ಕರ್ಕಂಡ್ ಅಮೇರಿಕಾಕ್ಕೆ ಹಾರ್ದ್.. ಅಲ್ಲಿಯೇ ಅವ್ಕೊಂದ್ ಹೆಣ್ಣ್ ಕೂಸ್ ಹುಟ್ಟಿದ್... ಇಲ್ಲಿವರೆಗೆ ಕೂಸುನ ಮೋರೆ ಕೂಡ ನೋಡಿಕೆ ಅಗದ್ದ್.. ಇದೇ!! ಮಂಙ ಅಮೇರಿಕಾಕ್ಕೆ ಹೊರ್ಡ್ ಕಾಕನ ಬೇಬಿಯಕ್ಕಂಗಂತೂ ಕುಸಿಯೋ ಕುಸಿ. ನಮ್ಮ ಇಡೀ ಬೈಲ್ ಲಿ ಮಾತ್ರ ಅಲ್ಲ ಇಡೀ ಗ್ರಾಮಲೇ ಅಣ್ಣುನೇ ಸುರೂಗೆ ವಿದೇಶಕ್ಕೆ ಹೊರ್ಟಂವ. ಗಂಡ, ಹೆಣ್ಣ್ ದಾರಿಲಿ ಸಿಕ್ಕುವ ನೆರೆಕರೆವು, ನೆಂಟ್ರ್ ಗಳೊಟ್ಟಿಗೆ ಹೇಳಿಕಂಡ್ ತಿರ್ಗಿದೇ ತಿರ್ಗಿದ್. ಆದರೆ ದಿನ ಕಳ್ದಾಂಗೆ ಗೊತ್ತಾತ್... ಹೋದಂವ ಬಾದು ವರ್ಷಕ್ಕೋ ಎರ್ಡ್ ವರ್ಷಕ್ಕೊಮ್ಮೆ. ಅದೂ ಒಬ್ಬನೇ.. ಸೊಸೆಗೆ ಊರ್ ಕಡೇ ನೋಡಿಕೂ ಮನ್ಸಿಲ್ಲೆ!! ತಿಂಗ ತಿಂಗ ಮನೆಗೆ ಬೇಕಷ್ಟ್ ದುಡ್ಡ್ ಕಳ್ಸಿದೆ.. ಆದರೆ ಮನ್ಸ್ ಗೆ??!! ಹಿಂಗೇ... ಫೋನ್ ಲೇ ವಿಚಾರ್ಸಿಕಂಬೊದು ಅಷ್ಟೆ. ಅಂಥದರ್ಲಿ ಹಕ್ಕಲೆ ಹಕ್ಕಲೆ ಎಂಟ್ ವರ್ಷದ ಮೇಲೆ ಮಂಙ  ಪುಳ್ಳಿನನೂ ಕರ್ಕಂಡ್ ಬಂದದೆತೇಃಳ್ರೆ ಯಾವ ಅಯ್ಯೆಗೂ ಎಷ್ಟ್ ಕುಸಿ ಆಕಿಲೆ??!! ಅದರ್ನೇ ಗಂಡನ ಕೆಬಿಗೆ ಉರ್ಗಿಕೆ ರಾಮಣ್ಣನ ಹುಡ್ಕಿರೆ ಅವು ಆಗಳೆ ಹಳು ತೆಗ್ಯಕೆ ಗದ್ದೆ ಕರೆಗೆ ಎತ್ತಿ ಆಗುಟು. ಅಷ್ಟೊತ್ತಿಗೆ ನೆಂಪಾತ್.. ಸಜ್ಜಿ ಮಾಡಿಕಂಡಿದ್ದ ಹಸಿಮೀನ್ ಅಲ್ಲಿಯೇ ಬುಟ್ಟಳೆ. ಹೋಗಿ ನೋಡ್ರೆ ಒಂದ್ ಮೀನ್ ಕಂಟ ಕೊತ್ತಿ ಹೊತ್ತ್ ದ್ ಬೀಜ ಮರದ ಕೊಡಿಲಿ ಕುದ್ದಕಂಡ್ ಕೈ ನೆಕ್ಕ್ಯಣ್ತುಟ್ಟು. ಅದ್ಕೆ ಒಂದ್ ಕಲ್ಲ್ ಬೇರಿ ಒಳ್ದ ಮೀನ್ ಸಜ್ಜಿ ಮಾಡಿ ಅರೆಪುಗೆ ಹುಳಿಮೆಣ್ಸ್ ಕಡ್ಯಕೆ ಅಡ್ಗೆ ಕೋಣೆಗೆ ಹೋದೊ ಬೇಬಿಯಕ್ಕ.

                                   ಮಾರ್ನೆ ದಿನಂದ ಕೆಲ್ಸಕ್ಕೆ ಬಂದ ಪಾಚೊಳ್ತಿನೊಟ್ಟಿಗೆ, ಕಾಯಿ ತೆಗ್ಯಕೆ ಬಂದ ಕುಂಞಣ್ಣನೊಟ್ಟಿಗೆ ಎಲ್ಲರೊಟ್ಟಿಗೂ ಗಂಡಂಗೂ, ಹೆಣ್ಣ್ ಗೂ ಹೇಳಿಕೆ ಒಂದೇ ವಿಶ್ಯ. 'ಅಣ್ಣು ಊರುಗೆ ಬಾತುಟ್ಟುಗಡ...ಹಂಗೇ ಅನುನ ಕೂಡ ಕರ್ಕಂಡ್ ಬಂದದೆಗಡ' (ಈಗದ ಪುಳ್ಳಿಕಳ ಹೆಸ್ರ್ ಅಜ್ಜ, ಅಜ್ಜಿಕಳಿಗೆ ಸರಿಯಾಗಿ ಹೇಳಿಕೆ ಆಗದಾಂಗೇ ಇಸುದು ಯಾಕೋ??!!). ಪುಳ್ಳಿನ ಬೇರೆ ಸುರೂಗೆ ನೋಡ್ತೊಳೊ ಪಾಪದ ಹಿರಿಜೀವಗ. ಕೂಸುಗೆ ಹಟ್ಟಿನ ಅಂಬೆ ಕರ್ ತೋರ್ಸೊಕು... ಮೊಜ್ಜಿಗೆ ಗುತ್ತಿಂದ ಬೆಣ್ಣೆ ತೆಗ್ದ್ ಕೊಡೊಕುತ ಅಜ್ಜಿ ಲೆಕ್ಕಹಾಕಿರೆ... ಕೆರೆಲಿರುವ ದೊಡ್ಡ ಮಣ್ಂಜಿ ತೋರ್ಸೊಕು... ಕೊಟ್ಟೆ ಕೊಮ್ಮುಲಿ ಮೊನ್ನೆ ನೋಡ್ದ ಯಾಪೆಗಿಳಿನ ಹಿಡ್ಡ್ ಗೂಡ್ ಮಾಡಿ ಇಸಿರೆ ಕೂಸು ಆಡಿಕೆ ಭಾರೀ ಲಾಯಿಕ್ ಕನ್ಸ್ ಕಾಂಬೊತುಟ್ಟು ಅಜ್ಜಪ್ಪ!! ಆದರೆ ಕನ್ಸ್ ಗೆ ಬೆಚ್ಚನೀರ್ ಚೋಂಪಿದ್ ಕೆಲ್ಸದ ಪಾಚೋಳ್ತಿ.. "ಎಡ್ತೆರೇ.. ಅಲ್ಲಿ ಅಮೇರಿಕಲಿ ಎಲ್ಲವೂ ಇಂಗ್ಲೀಷ್ ಲೇ ಮಾತಾಡ್ದುಗಡ. ಮೊನ್ನೆ ದುಬಾಯಿಂದ ಬಂದ ಎಂಕಮ್ಮಕ್ಕನ ಮಂಙ ಹೇಳ್ತಿದ್ದೊ. ಇನ್ನ್ ನೀವು ಕೂಸುನೊಟ್ಟಿಗೆ ಹೆಂಗೆ ಮಾತಾಡುವರಿ!!??" ಇದೆಂಥಾ ಸಮಸ್ಯೆ. ಪುಳ್ಳಿ ಬಾತ್ ಕುಸಿ ಪಡೊಕೊ.. ಪುಳ್ಳಿನೊಟ್ಟಿಗೆ ಮಾತಾಡಿಕೆ ಆದುಲೆಲ್ಲಾತ ಬೇಜಾರಾಕೊ!! ಇಬ್ಬರಿಗೂ ಒಮ್ಮೆಗೆ ಮಾತೇ ಹೊರ್ಡ್ ತಿಲ್ಲೆ. ಮನ್ಸ್ ಚುಳ್ಳಂಗೆ ಆತುಟ್ಟು. ಚಪ್ಪೆ ಆದ ಹೆಣ್ಣ್ ಮೋರೆನೋಡಿ ರಾಮಣ್ಣನೇ ಸಮಾಧಾನ ಮಾಡಿಕೆ ಮೆಲ್ಲಂಗೆ  ಹೇಳ್ದೊ "ನಾವೂ ಇಂಗ್ಲೀಷ್ ಕಲಿಯೊನೊ!!". ಬೇಬಿಯಕ್ಕ ಕಣ್ಣ್ ಲಿ ನೀರ್ ತುಂಬುಸಿಕಂಡ್ ಮಯಮಯ ದೃಷ್ಟಿಲಿ ಗಂಡನ ಮೋರೆನೋಡ್ರೆ "ನಾ ಹೆಂಗೂ ಮೂರ್ನೇ ಇಯತ್ತೆವರೆಗೆ ಹೋಗಳೆ. ನೀ ಸಾಲೆನ ಮೋರೆನೇ ನೋಡದಂವ. ಬುಡು.. ಆಚೆಕರೆ ದಾಮುನ ಮಂಙ ಕುಟ್ಟ ಹೈಸ್ಕೂಲ್ ಗೆ ಹೋದೆ ಅಲ್ಲ.. ಅಂವನೊಟ್ಟಿಗೆ ಕೇಳಿ ಮಾತಾಡಿಕೆ ಕಲ್ಯೊನೊ" ಹೇಳ್ದವು ಸೀದ ಎದ್ದ್ ದಾಮುನ ಮನೆಕಡೆ ಹೊರ್ಟೊ. ಹೈದನೂ ಚುರ್ಕುನವನೇ.. ಹಾಯ್.. ಹಲೋ... ಹೌ ಆರ್ ಯು.. ವಾಂಟ್ ಜ್ಯೂಸ್, ಮಿಲ್ಕ್.. ಕಮ್.. ಸ್ಲೀಪ್.. ಗೋ.. ಸಿಟ್.. ಈಟ್.. ಬಾಯ್... ಹಿಂಗೆ ಸುಲಭದರ ಬರ್ದ್ ಕೊಟ್ಟ್ ಕಳ್ಸಿರೆ, ಮನೆಗೆ ಬಂದ ರಾಮಣ್ಣ ಹೆಣ್ಣ್ ಗೆ ಇಂಗ್ಲೀಷ್ ಕಲ್ಸಿ ಕೊಡ್ತಿದ್ದೊ. ಒಮ್ಮೊಮ್ಮೆ ಜ್ಯೂಸ್ ಹೋಗಿ ಚೂಸ್ ಆದರೆ.. ಹಾಯ್ ಗೆ ಬಾಯ್ ಅಂತ ತಪ್ಪ್ ತಪ್ಪ್ ಹೇಳಿಕಂಡ್ ನೆಗಾಡಿಕಂಡೊ!!

                                    ಜಾತ್ರೆಗೆ ದಿನ ಹಕ್ಕಲೆ ಆದಂಗೆ ಬೇಬಿಯಕ್ಕಂಗೆ ಯಾಗ ಒಮ್ಮೆ ಪುಳ್ಳಿನ ನೋಡ್ನೆತ ಮನ್ಸೊಳಗೆನ ಚಡಪಡಿಕೆ ಜಾಸ್ತಿಆಗ್ತುಟ್ಟು. ಒಟ್ಟಿಗೆ ಗಂಡನ ಮೇಲೆ ಪರ್ರ್ಂಚಟನೂ!! 'ಕೂಸುಗೆ ಜೇನ್ ತಂದಿಸಿಕೆ ಹೇಳಿದ್ದೆ .. ತಂದಳರಿಯಾ... ಜಾಲ್ ಕರೆ ನೀರಡಿ ದೊಂಬೆ ಕಡೆ ಜಲ್ಲಿ ಹಾಕಿತ್ಲೆ..ಕೂಸು ಆಡಿಕೆ ಹೋಗಿ ಜಾರಿ ಬೀಳಿಕೆ ಬೊತ್ತ್.. ಹಿಂಗೇ' . ಒಟ್ಟೊಟ್ಟಿಗೆ ಇಂಗ್ಲೀಷ್ ಕಲಿದೂ ಬುಟ್ಟತ್ಲೆಬೇಬಿಯಕ್ಕ ಪಾಚೋಳ್ತಿನ ಬಾಕೆ ಹೇಳಿ ಇದ್ದ ಒಲ್ಲಿ, ಮೊಂದ್ ರಿ ಎಲ್ಲಾ ಒಗ್ಯಕೆ ಬೆರ್ಸಿದೊ. ಕಪಾಟ್ ಮೇಲೆ ಇದ್ದ ಹಾಸಿಗೆಗಳ ಜಾಲ್ ಲಿ ಬಿಸಿಲ್ ಗೆ ಬುಡ್ಸಿ ಧೂಳ್ ಹಾರ್ಸಿದೊ. ರಾಮಣ್ಣನೋ ಕುಂಞಣ್ಣನ ಕರ್ಸಿ ನಾಕ್ ಕೀಲೆ ಕೆಂದಾಳೆ ಬೆಂಡ ತೆಗ್ಸಿಸುದರೊಟ್ಟಿಗೆ ಕಳ್ದ ವಾರ ಕಡ್ದಿಸಿದ ಬಾಳೆಗೊನೆ ಇನ್ನೂ ಹಣ್ಣಾತ್ಲೆ.. ಪಡ ಇಜ್ಪಿ ಇಸಿದ್ದರೆ ಒಳ್ಳದಿತ್ತ್ ಗೊಣ್ಗಿಕಂಡೇ ಕೆಲ್ಸ ಮಾಡಿಕಂಡವೆ. ಜಾತ್ರೆ ಸಮಯದ ಮಳೆಗೆ ಪೋನ್ ಬೇರೆ ಹಾಳಾಗಿ ಅಣ್ಣು ಎಷ್ಟೊತ್ತಿಗೆ ಎತ್ತಿದೆತಾನೂ ಹೇಳಿಕೆ ಗೊತ್ಲೆ. ಅಷ್ಟೊತ್ತಿಗೆ ಗುಡ್ಡೆಕರೇಂದ ಯಾವುದೋ ವಾಹನದ ಸದ್ದ್ ಕೇಳ್ದಾಂಗಾಗಿ ಬೇಬಿಯಕ್ಕ ಮನೆಒಳಗೆಂದ ಜಾಲ್ ಕರೆಗೆ ಬಂದ್ ಎತ್ತಿದೊ.. ಮೆಲ್ಲಾನೆ ವಾಹನ ಸದ್ದ್ ಜೋರಾಗಿ, ಕಾರ್ ಸೀದ ಮನೆ ಜಾಲ್ ಗೇ ಬಾತ್. ನೋಡ್ರೆ ಅಣ್ಣು!! ಅಯ್ಯೆ, ಅಪ್ಪ ಮೆಲ್ಲನೆ ಕಾರ್ ಕಡೆಗೆ ಬಾಕನ ಅಣ್ಣುನೇ ಕಾರ್ಂದ ಇಳ್ದ್ ಓಡಿ ಬಂದ್ ಅಪ್ಪನ ಕೈ ಹಿಡ್ಕಂಡರೆ, ರಾಮಣ್ಣ ಅವನ ಕೈ ಜಾರ್ಸಿ ಕಾರ್ ಕಡೆ ಹೋದವೆ. ಅವ್ಕೆ ಪುಳ್ಳಿನ ಕಾಂಬಕೆ ಆಸೆ!! ಕಾರ್ಂದ ಇಳ್ದ ಸೊಸೆ " ಏನು ಅತ್ತೆ... ಏನು ಮಾವ.. ಚೆನ್ನಾಗಿದ್ದೀರಾ.." ಕೇಳ್ದರ್ಲಿ ಏನೂ ಹೊಸತನ ಇತ್ಲೆ. ಪ್ರಾಯದ ಕಣ್ಣ್ ಗಳ ಇಷ್ಟ್ ದಿನದ ಕನ್ಸ್... ಕೂಸು ಅನುಜ್ಞಾ ಕಾರ್ಂದ ಇಳ್ದದರ ನೋಡಿ, ಬೇಬಿಯಕ್ಕ ಕಲ್ತ ಇಂಗ್ಲೀಷೂ ಮರ್ತೋಗಿ 'ಹೋಯ್.. ಹೌ ರಾಯು' ಅಂತ ಕೇಳ್ದೊ. ಅದರ ಕೇಳಿ ಕೂಸು... ನೆಗಾಡ್ತ " ಅವ್ವಾ... ನಾ ಉಶಾರೊಳೆ.. ನೀವು ಹೆಂಗೊಳರಿ" ಬಂದ್ ಅಜ್ಜಿನ ಬಾಚಿ ತಬ್ಬಿಕಂಡರೆ ಅಜ್ಜ,ಅಜ್ಜಿಗೂ ಒಮ್ಮೆಗೆ ಏನೂ ಗೊತ್ತಾಗ್ತಿಲ್ಲೆ. ನಾವು ಇಷ್ಟ್ ದಿನ ಭಂಗ ಬಂದ್ ಕಲ್ತ ಇಂಗ್ಲೀಷ್ ಎಲ್ಲಿ.. ಕೂಸು ನಮ್ಮೊಟ್ಟಿಗೆ ಮಾತಾಡ್ತಿರುವ ಅರೆಬಾಸೆ ಎಲ್ಲಿ!! ಅಜ್ಜನ ಕಣ್ಣ್ ಲೂ ನೀರ್ ಮಾತ್ರ... ಮಾತೇ ಇಲ್ಲೆ.. ಆಗ ಅಣ್ಣುನೇ ಹೇಳ್ತ್.. "ಪೊಪ್ಪಾ... ನನ್ನ ಕೂಸು ಅರೆಬಾಸೆ ನನ್ನಷ್ಟೇ ಲಾಯಿಕ್ ಮಾತಾಡ್ದೆ.. ನಂಗೆ ಅಮೇರಿಕಕ್ಕೆ ಹೋದ ಮೇಲೆ ಗೊತ್ತಾತ್.. ಅಲ್ಲಿನ ಜನ ಅವರ ಸಂಸ್ಕೃತಿ, ಭಾಷೆನ ಎಷ್ಟ್ ಪ್ರೀತಿಸುವೆತ. ಅಲ್ಲಿ ಇಂಗ್ಲೀಷ್ಲಿ ಮಾತಾಡ್ರೆ, ಅವರ್ದೇ ದಾಟಿಲಿ ಉತ್ತರ ಕೊಟ್ರೆ ನಮ್ಮ ಹಾರೈಸುವೆ. ಇಲ್ಲರೆ ನಮ್ಮ ನೋಡಿ ನೆಗಾಡ್ವೆ!!! ಅದ್ ಅವರ ಭಾಷಾಭಿಮಾನನೀವು ಹೇಳ್ದರ ನಾ  ಮರ್ತತ್ಲೆ ಪೊಪ್ಪಾ.. ಮಕ್ಕ ಕನ್ನಡ, ಇಂಗ್ಲೀಷ್ ಶಾಲೆಗೆ ಹೋದ ಮೇಲೆ ಕಲ್ತವೆ. ಆದರೆ ನಾವು ಮಕ್ಕಳೊಟ್ಟಿಗೆ ಅರೆಬಾಸೆಲಿ ಮಾತಾಡದಿದ್ದರೆ ಅವು ನಮ್ಮ ಭಾಷೆ ಕಲಿದು ಯಾಗಆಚೆ ಮನೆ ಮಕ್ಕ ಶಾಲೆಗೆ ಹೋಕೆ ಸುರು ಮಾಡ್ಕಾಕನ ಮನೆಲಿ ಕನ್ನಡ ಮಾತಾಡಿರೂ ನೀವು ನನ್ನೊಟ್ಟಿಗೆ ಹಂಗೆ ಮಾಡ್ತ್ಲೆ. ನಾ ಕನ್ನಡ ಮಾತಾಡ್ರೂ ಬೊಯ್ದ್ ಅರೆಬಾಸೆಲೇ ಮಾತಾಡ್ತಿದ್ದರಿ. ಅಮೇರಿಕದವ್ಕೆ ಹೆಂಗೆ ಅವರ ಭಾಷೆ ಮೇಲೋ.. ಹಂಗೆ ನಂಗೂ ನನ್ನ ಅರೆಬಾಸೆ ಅಷ್ಟೆ. ಸರಿಯಾದ ಇಂಗ್ಲೀಷ್ ಬಂದದ್ ಸುಮಾರ್ 500 ವರ್ಷಂದ ಇಚೆಗೆ... ಅದರ್ಂದಲೂ ಹಳ್ತೇ ನಮ್ಮ ಅರೆಬಾಸೆ ಆಗಿರ್ದು!!?? ಯಾಕೆಂತೇಳ್ರೆ ಅದೆಷ್ಟೋ ಹಳೆಗನ್ನಡದ ಪದಗಳ ನಾವು ಇನ್ನೂ ಮಾತಾಡುವೆ. ಹಂಗಿರ್ಕಾಕನ ನಾವ್ಗೆ ಅರೆಭಾಸೆಲಿ ಮಾತಾಡಿಕೆ ನಾಚಿಕೆ ಯಾಕೆ? ಇಂಗ್ಲೀಷ್ನನೆ ಲ್ಯಾಟಿನ್ ಲಿ ಬರ್ದ್ ಭಾಷೆ ಒಳ್ಸ್ಯೊಳೊತೇಃಳ್ರೆ ಕನ್ನಡ ಲಿಪಿಲಿ ಬರ್ದ್ ಅರೆಬಾಸೆನ ಒಳ್ಸಿಕೆ ಆಕಿಲೆನಾ?? ... ಬನ್ನಿ... ಪೋಯಿ...ಕಾರ್ಂದ ಬಟ್ಟೆಬರೆ ಎಲ್ಲಾ ಮತ್ತೆ ಇಳ್ಸಕ್" . ಬುಡ ಚಿಗ್ರಿ ಹೊಸ ದೈ ಬಾತೆಂಬ ಕುಸಿಲಿ ರಾಮಣ್ಣನೂ ಮಂಙನ ತಬ್ಬಿಕಂಡ್, ಪುಳ್ಳಿನ ಎತ್ತಿಕಂಡ್  ಮನೆ ಕಡೆಗೆ ಹೊರ್ಟೊ.

(ಬೆಂಗಳೂರ್ ನ ಅರೆಬಾಸೆ ಜನಾಂಗ ಭಾಂಧವ್ಕೆ ಆಯೋಜಿಸಿದ್ದ "ಅರೆಬಾಸೆ ಮುಡ್ಪು ಕಥಾಸ್ಪರ್ಧೆ"ಲಿ ಪ್ರಥಮ ಬಹುಮಾನ ಪಡ್ಕಂಡ ಕಥೆ...An Arebhashe Articles of Gowdas)

  • ಡಾ. ಪುನೀತ್ ರಾಘವೇಂದ್ರ ಕುಂಟುಕಾಡು

2 comments:

  1. ಸುಪ್ಪರ್ಯ ಬಾವ...ಬಾರಿ ಪೊರ್ಲು ಆವ್ಟು ಬರ್ದದ್...

    ReplyDelete