google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಪಾಚುನ ಪ್ರೇಮ ಪ್ರಸಂಗ !!! (An Arebhashe article of Gowdas)

https://arebhasheminpuli.blogspot.com/2017/08/blog-post_11.html

Saturday 23 September 2017

ಪಾಚುನ ಪ್ರೇಮ ಪ್ರಸಂಗ !!! (An Arebhashe article of Gowdas)



                   ಬೆಂಗ್ಳೂರ್ ಲಿ ಸಿಟಿಲೈಫ್ ಧೂಳ್ , ಹೊಗೆಗೆ ಬೊಚ್ಚಿ ಹೋಗಿದ್ದ ನಮ್ಮ ಪಾಚು, ನಾಕ್ ದಿನ ರಜೆ ಹಾಕಿ ಊರ್ ಸುಳ್ಯ ಜಾತ್ರೆಗೆ ಹೋಗಿ ಬರೊನೊತ ಹೊರ್ಟಿತ್ತ್. ಅರ್ಜೆಂಟ್ ಲಿ ಕೆಲ್ಸ ಮುಗ್ಸಿ ಎರ್ಡ್ ಬಸ್ಸ್ ಹತ್ತಿ ಇಳ್ದ್, ಮೆಜೆಸ್ಟಿಕ್ ಗೆ ಬಂದ್ ಎತ್ತ್ ಕಾಕನ ಪೂರ್ಣಿಮ ಬಸ್ಸ್ ಹೊರ್ಡಿಕೆ ರೆಡಿ ಆಗುಟು!! ಅಂತೂ ಓಡಿಕಂಡೇ ಬಂದ್ ಬಸ್ಸ್ ಗೆ ಹತ್ತಿದವಂಗೆ ಎದೂರು ಸೀಟ್ ಲಿ ಕುದ್ದ ಗೂಡೆನ ನೋಡಿ ಮನ್ಸ್ ಹುಳ್ಳಂಗೆ ಆದ್ ಮಾತ್ರ ಸುಳ್ಳಲ್ಲ.... ಸೀಟ್ ಬುಕ್ ಮಾಡದ ಕಾರಣ ಕಡೆಗೆ ಸಿಕ್ಕಿದ ಸೀಟ್ ಲಾಸ್ಟ್ ಲಿ... ಸರೀ ಟಯರ್   ಮೇಲೆನೆ!! ಇನ್ನ್ ನಾ ತೊಡ್ಪೆಲಿ ಹೊಡ್ಕಿದಾಂಗೆ ಹಾರ್ದು ಗ್ಯಾರಂಟಿತ ನೆನ್ಸಿ, ಸಿಕ್ಕಿದ ಸೀಟ್ ಗೆ ಒರ್ಗಿ ಕುದ್ದ್, ಕಾಲ್ ಸೊರ್ತ ನೀಂಡಿಕಾಗದೆ ಅಲ್ಲಿಯೇ ತಿರ್ಗಿ ಕುದ್ದರೂ ಮನ್ಸ್ ಮಾತ್ರ ಎದ್ ರ್ ಸೀಟ್ ಗೂಡೆ ಮೇಲೆನೆ... ನಡುಲಿ ಒಮ್ಮೆ ಬಸ್ಸ್ ನಿಲ್ಸ್ ಕಾಕನ ಎದ್ದ್ ಹೋಗಿ ಗೂಡೆನ ನೋಡ್ರೆ, ಅದ್ ಮೋರೆ ಮುಚ್ಚಿ ಮಲ್ಗಿಟು. ಹೆಂಗಿದ್ದರೂ ಸಂಪಾಜೆಲಿ ಮನೆಹಕ್ಕಲೆ ಇಳ್ಯಕಾಕನ ನೋಡಕ್ ನೆನ್ಸಿ ಹೋಗಿ ಮಲ್ಗಿದವಂಗೆ, ಜೋಡ್ ಪಾಲ ಟರ್ನ್ ಲಿ ಬಸ್ಸ್ ಇವಂನ ಹೊಣ್ಕ್ ಸಿ ಮಲ್ಗಿಸಿದೂ ಗೊತ್ಲೆ!! ಕೊಯಿನಾಡ್ ಚಡವು ದಾಟಿದೂ ಗೊತ್ಲೆ!! " ಅಣ್ಣಾ... ಸುಳ್ಯ ಬಾತ್" ಕ್ಲೀನರ್ ಎದ್ರ್ ಸ್ ಕಾಕನನೇ ಗೊತ್ತು. ಗಡಿಬಿಡಿಲಿ ಎದ್ದ್ ಹೊರ್ಟಂವ ಇಳಿಯಕಾಕನ ಎದುರುನ ಸೀಟ್ ನೋಡ್ರೆ ಖಾಲಿ!! ಗೂಡೆ ಯಾಗಳೋ ಇಳ್ದ್ ಹೋಗುಟು!! ಮಾರ್ನೆ ದಿನ ಹಳೇ ದೋಸ್ತಿ ಅಣ್ಣುನೊಟ್ಟಿಗೆ ಸಂತೆಅಡ್ಕ ಇಡೀ ಸುತ್ತ್ ಕಾಕನ ಕಣ್ಣ್ ಗೆ ಕಂಡದ್ ಮತ್ತೆ ಅದೇ ಗೂಡೆ!! ನಾಯಕ್ ಐಸ್ಕ್ರೀಂ  ವ್ಯಾನ್ ಗೆ ಒರ್ಗಿ ಕೋನ್ ಐಸ್ಕ್ರೀಂ ತಿಂದ್ ಕಂಡಿದ್ದ ಗೂಡೆ ಇವನ ನೋಡಿ ಕಣ್ಣ್ ಕರೇಲಿ ನೆಗಾಡ್ದೂ, ಕೋನ್ ತುಂಡಾಗಿ ಬೀಳ್ದೂ ಒಟ್ಟಿಗೇ ಆಕೋ??

                  ರಜೆ ಮುಗ್ಸಿ ಬೆಂಗ್ಳೂರ್ ಗೆ ಎತ್ತಿದವಂಗೆ ಕೆಲ್ಸದ ಒಟ್ಟಿಗೆ ಹೊಟ್ಟೆ ಇಸುದು ಮರ್ತರೂ, ಗೂಡೆನ ಮರ್ತತ್ಲೆ ಪಾಚು ಹೈದ. ಒಂದಿನ ಹಿಂಗೇ "ಫೇಸ್ ಬುಕ್" ನೋಡ್ರೆ ಗೂಡೆನ "ಪ್ರೊಫೈಲ್" ಹಾರಿ ಬಾತ್... ಹೆಸ್ರ್ "ಅಮ್ಮುಣಿ"..."ಫ್ರಂ ಸುಳ್ಯ" ಮತ್ತೆ ಒಳ್ದಡ್ ಎಲ್ಲಾ ಖಾಲಿ!! ಆದರೂ "ಫ್ರೆಂಡ್ ರಿಕ್ವೆಸ್ಟ್" ಕಳ್ಸಿಯೇ ಬುಟ್ಟರೂ ಎದೆ ಮಾತ್ರ ಒನಕೆನಾಂಗೆ ಮಿಜಿತಾ ಉಟ್ಟು. "ಅಸೆಪ್ಟೆಡ್"... ಹಾಯ್... ಹಲೋ.... ಮೊನ್ನೆ ಬಸ್ಸ್ ಲಿ ನೋಡ್ದ್ ನೀವೇ ಅಲ್ಲ??... ಎಲ್ಲಿ ಕೆಲ್ಸ ಮಾಡ್ಡು... ಎಲ್ಲಾ ಆರಂಭ ಆಗಿ... " ವೀಕೆಂಡ್  ನಾ ಫ್ರೀ...ಗೋಪಾಲನ್ ಮಾಲ್ ಲಿ ಕಿರಿಕ್ ಪಾರ್ಟಿಗೆ ಪೋಯ" ವರೆಗೆ ಬಂದ್ ಮುಟ್ಟಿತ್ ಫೇಸ್ ಬುಕ್ ಪರಿಚಯ. ಇಬ್ಬರೂ ಒಂದೇ ಜಾತಿ... ಉತ್ತಮ ಬೊಳಿ ಬೇರೆ... ಒಳ್ಳೆ ಕೆಲ್ಸಲೂ ಒಳೊ... ಇನ್ನೇನ್ ಮುಂದುವರ್ಸಿಕೆ!!?? ಇಬ್ಬರೂ ಒಪ್ಪಿದೊ... ಒಟ್ಟಾರೆ ನಮ್ಮ ಪಾಚು ಮಾತ್ರ "ಕುಂಡೋಳಿಂಙ ಕಚ್ಚಿದ ಕುಂಡಚ್ಚ" ನಂಗಾತ್!! (ಕುಂಡೋಳಿಂಙ= ಲಕ್ಷ್ಮೀ ಚೇಳು, ಕುಂಡಚ್ಚ= ಅಳಿಲು... ಯಾಗೋಳು ಹಾರಿಕಂಡ್, ಕೊಣ್ಕಂಡ್ ಕುದ್ದಲ್ಲಿ ಕುದ್ರದ ಕುಂಡಚ್ಚ ಕುಂಡೋಳಿಂಙ ಎಲ್ಯಾರ್ ಕಚ್ಚಿರೆ ಹೆಂಗೆ ಹಾರಾಡಿಕಂಡಿರ್ದು... ನೀವೇ ನೆನ್ಸಿಕಣಿ!!). ಹೋದಲ್ಲಿ, ಬಂದಲ್ಲಿ, ನಿತ್ತಲ್ಲಿ, ಕುದ್ದಲ್ಲಿ.... ಫೋನ್ ಮಾತ್ರ ಕೈಲೇ!! ಟೆರೇಸ್ ಮೂಲೆಲಿ, ವಾಟರ್ ಟ್ಯಾಂಕ್ ಅಡಿಲಿ ಕಡೆಗೆ ಗೇಟ್ ಕರೆ ಕಕ್ಕಟ್ ಮೇಲೆ ಮಲ್ಗಿರೂ ಕೈಲಿದ್ದ ಫೋನ್ ಬುಡಿಕಿಲೆ!! ನೀರೊಳಗೆ ಅಣ್ಗಿ ಕುದ್ದ್ ಹೇತರೂ ಪಾಂಬಿಕಂಡ್ ಬಾದು ಮೇಲೆನೇ ಅಲ್ಲಾ?? ಹಂಗೇ ರಟ್ಟಾಗದ ಗುಟ್ಟಿಲ್ಲೆ!! ಹಂಗೇ ಗುಟ್ಟ್ ರಟ್ಟ್ ಮಾಡ್ದ್ ಪಾಚುನ ಅಪ್ಪ... ಲಚ್ಚಣ್ಣ... ಹೆಂಗೆ??

                     ಬೆಂಗ್ಳೂರ್ ಹೋದ ಸುರೂಗೆ ದಿನಕ್ಕೆ ಹತ್ತ್ ಹತ್ತ್ ಸರ್ತಿ ಫೋನ್ ಮಾಡ್ತಿದ್ದಂವ ಈಗ ನೋಡ್ರೆ ದಿನಕ್ಕೊಮ್ಮೆ ಮಾಡ್ರೂ ಆತ್ ಅಷ್ಟೇ. ಇನ್ನ್ ನಾ ಮಾಡ್ರೆ ಯಾಗ ನೋಡ್ರೂ ಎಂಗೇಜ್!! ಇವನ ಕಥೆ ಎಂಥಪ್ಪಾ?? ನೋಡ ವಿಚಾರ್ಸೊನೊತ "ಓಯ್ ಪಾಚು... ನಾಳ್ದ್ ಬೈಲೆ ಪತ್ತನಾಜೆಗೆ ಆಚೆಕರೆ ಕುಂಞಣ್ಣನ ಹಂದಿ ಒಂದು ತಲೆಕೊಯಿಸಿಕೆ ಉಟ್ಟುಗಡ. ನಾನೂ ನಾಕ್ ಕೆಜಿ ಮಾಸಕೆ ಹೇಳ್ಯಳೆ. ನೀನೂ ನಾಕ್ ದಿನ ರಜೆ ಹಾಕಿ ಬಾ ಆತಾ..." ಹೇಳಿ ಆರ್ಡರ್ ಆತ್ ಲಚ್ಚಣಂದ್. ಮನೆಗೆ ಬಂದರೂ ಹೈದ ಲಾಯ್ಕ್ ಲೇ ಉಟ್ಟು... ಮೊಬೈಲ್ ಮಾತ್ರ ಕೈಂದ ಬುಡ್ದೇಲೆ ಅಷ್ಟೆ!! ನಡುರಾತ್ರೆ ಲಚ್ಚಣ್ಣಂಗೆ ಉಚ್ಚೆಹೊಯ್ಯಕೆ ಎದ್ದವ್ಕೆ ಪಾಚುನ ರೂಮ್ಂದ ಕುಸುಕುಸು ಕೇಳ್ದೆ. ನೋಡ್ರೆ ಗುಡಿಹೊದ್ದ್ ಮಲ್ಗಿದ್ದ ಒಲ್ಲಿ ಒಳಗೆಂದಲೇ!! ಮಾರ್ನೆ ದಿನ ಲಚ್ಚಣ್ಣ ಮಂಙನ ಕರ್ದ್ ಒಂದೇ ಪ್ರಶ್ನೆ " ಯಾರ್ ಗೂಡೆ?"... ಹೇಳದೆ ಉಪಾಯ ಉಟ್ಟಾ?? ಗೂಡೆ ಕಟ್ಟಪುಣಿ ದ್ಯಾಪಣ್ಣನ ಮಗ್ಳ್ ಅಮ್ಮುಣಿ!! ಲಚ್ಚಣ್ಣನೂ ದ್ಯಾಪಣ್ಣನೂ ಹಳೇ ದೋಸ್ತಿಗ. ಇಬ್ಬರ ಮಾವನ ಮನೆ ಹಕ್ಕಲೆ ಹಕ್ಕಲೆ ಆದರ್ಂದ ಸಣ್ಣದರ್ಲಿ ಸಿಡಿ ಹಾಕುದು, ಅಡ್ಚಿಲ್ ಇಸುದು, ಕೂಳಿ ಕಟ್ಟಿಕಂಡ್ ಒಟ್ಟಿಗೇ ಬೆಳ್ದವು. ಆದರೆ ಈಗ ಮಾತ್ರ ಬದ್ಧ ಶತ್ರುಗ... ಕಾರಣ... ಅಂದ್ ಒಂದಿನ ಸಿಡಿ ಹಾಕಿದಕ್ಕೆ ಬಿದ್ದ ತೆಕ್ಕಟೆ (ಕೋಳಿ ಹಾಂಗೆ ಇದ್ದದೆ) ಹೇಳದೆ ತಕಂಡೋಗಿ ಗೈಪು ಮಾಡಿ ಕುಂಡಕೋಳಿ(ಇದೂ ಒಂದ್ ಹಕ್ಕಿ) ಸೆಕ್ಕ್ ಸಿ ಇಸಿತ್ !! " ದ್ಯಾಪು ಬರೇ ದಗಲ್ ಬಾಜಿ....ಅವನ ಮನೆಂದ ಗೂಡೆ ನನ್ನ ಸೊಸೆ ಆದು ಬೇಡ. ನೀ ಬೇಕರೆ ಮೊದ್ವೆ ಆಗದೆ ಇದ್ದರೂ ಆದು!! ಗೂಡೆ ಮಾತ್ರ ಬೇಡನೇ ಬೇಡ!!" ಪಾಪ ಪಾಚು... 'ಞಯಿಂಕ ಆದ ಹಪ್ಪಳದಾಂಗೆ' ಚಪ್ಪೆ ಮೋರೆಲೇ ಬೆಂಗ್ಳೂರ್ ಗೆ ಹೊರ್ಟತ್. ( "ಞಯಿಂಕ ಆದ ಹಪ್ಪಳ"... ಇದಿಕ್ಕೆ ಸರಿಸಮ ಆದ ಶಬ್ಧ ನಂಗೆ ಇಲ್ಲಿವರೆಗೆ ಯಾವ ಭಾಷೆಲೂ ಸಿಕ್ಕಿತ್ಲೆ. ಅದೇ ಅರೆಭಾಷೆನ ಗತ್ತ್!!). ಒಟ್ಟಾರೆ ಒಂದ್ ತೆಕ್ಕಟೆ, ಕುಂಡಕೋಳಿಂದಾಗಿ ಪಾಚುನ ಪುಂಡಿ ಪೊಡಿಪೊಡಿ ಆತ್... ಛೇ!!
 (ಪಾಚುನ ಪ್ರೇಮ ಪ್ರಸಂಗ !!! ; An Arebhashe article of Gowdas)

  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು



Arebhashe Articles of Gowdas

No comments:

Post a Comment