google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): July 2017

https://arebhasheminpuli.blogspot.com/2017/08/blog-post_11.html

Friday 28 July 2017

ಅರೆಭಾಷೆಗೊಂದು ಆ್ಯಪ್ !!!

                      ಇಂದ್ ಯಾರೂ "ಖಾಲಿ ಕೈ" ಕುದ್ರದವು... ಏಕೆಂತೇಃಳ್ರೆ ಎಲ್ಲರ ಕೈಗೂ ಮೊಬೈಲ್ ಬಂದುಟು. ಬರೆ ಮೊಬೈಲ್ ಅಲ್ಲ.. "ಸ್ಮಾರ್ಟ್ ಫೋನ್". ಅದರ್ಂದಾಗಿ ನಮ್ಮ ಕುಂಞಿ ಮಕ್ಕಳೂ ಎಷ್ಟ್ ಸ್ಮಾರ್ಟ್ ಆಗೊಳೊತೇಂಳ್ರೆ ಹಿಂದೆಲ್ಲಾ ಟಿ.ವಿ. ಹಾಕಿರೆ ಮರ್ಡಟ ನಿಲ್ಲ್ಸಿರೆ... ಈಗ ಕೈಗೆ ಮೊಬೈಲ್ ಕೊಟ್ರೆ ಮಾತ್ರ ನಿಲ್ಸುದು!!! ಚಡ್ಡಿ ಹಾಕಿಕೆ ಗೊತ್ತಿಲ್ಲದ್ದಿದ್ದರೂ ಮೊಬೈಲ್ ಬಳ್ಸಿಕೆ ಲಾಯಿಕ್  ಕಲ್ತಿದ್ದವೆ. ಅದೇ ಮಕ್ಕಳ ಸುಮ್ಮನೆ ಕುದ್ರಿಸಿಕೂ ಸುಲಭ.. ಒಂದ್ ವೀಡಿಯೋ ಹಾಕಿ ಕೈಲಿ ಮೊಬೈಲ್ ಇಸಿ ಬುಟ್ರೆ ಆತ್. ಸದ್ದ್ ಸುದ್ದಿ ಇರ್ದುಲೆ. (ಅಯ್ಯೆಕಳಿಗೂ ಆರಾಮ.. ಅಂಗಳಲಿ ಮೊಣ್ಣ್ ಲಿ ಆಡ್ಬಡಿನೆ... ನಾಯಿಮೊರಿಗಳೊಟ್ಟಿಗೆ ಮಲ್ಗ್ ಬಡಿನೇಂತ ಪರ್ರ್ಂಚೊಕೂಂತಿಲ್ಲೆ!!). ಅಂತಾ ಮೊಬೈಲ್ ಲಿ  ಆ್ಯಪ್ ಗಳ್ದೇ ಕಾರ್ಬಾರ್. ಅಂದರೆ Applications!!!  ಎಲ್ಲಾದಿಕ್ಕೂ ಒಂದೊಂದು  ಆ್ಯಪ್. ದಾರಿ ಹುಡ್ಕಿಕೆ "ರೂಟ್ ಮ್ಯಾಪ್" ಆದರೆ; ಅದೇ ದಾರಿಲಿ ಹೋಕೆ "ಓಲಾ ಗಾಡಿ" ಆ್ಯಪ್. ತಿಂಡಿ ಆರ್ಡರ್ ಮಾಡಿಕೂ ಆ್ಯಪ್... ಎಲ್ಲಾ ಬುಟ್ಟ್ ನೀವ್ ದಿನ ಎಷ್ಟ್ ಖರ್ಚ್ ಮಾಡ್ಯಳರಿ, ಇನ್ನ್ ಯಾಗ ಡಾಕ್ಟ್ರ ಹಕ್ಕಲೆ ಹೋಕೂಂತ ನೆಂಪು ಮಾಡಿಕೂ ಆ್ಯಪ್ ಉಟ್ಟು!! ಮತ್ತೆ ವಾಟ್ಸಾಪ್, ಫೇಸ್ ಬುಕ್ ದು ನಾ ಹೇಳೊಕುತಿಲ್ಲೆ. ನನ್ನಂದ ಜಾಸ್ತಿ ನೀವ್ಗೆ ಗೊತ್ತಿರ್ದು. ಆದರೆ... ಅರೆಭಾಷೆಗೆ ಸೇರ್ದ ಆ್ಯಪ್ ಒಂದರ ಬಗ್ಗೆ ಗೊತ್ತುಟಾ??!! ಅದೇ " kdkgowdas App". ಇಂದ್ ದಿನಕ್ಕೊಬ್ಬ ಜಾತಿಯಂವ ಗೌಡ ಅಂತ ಸೇರ್ಸಿಕಂಬಕೆ  ಕಾಯ್ತುಟ್ಟು. ಕಾರಣ "ಗೌಡ" ಹೇಳ್ದು ಒಂದು ಪ್ರತಿಷ್ಟೆ.(ಅದರ್ಲೂ ನಮ್ಮ ಡಿ.ವಿ. ಸದಾನಂದ ಗೌಡ್ರ್ ಮುಖ್ಯಮಂತ್ರಿ ಆದ ಮೇಲೆ ಬೆಂಗ್ಳೂರ್ಲಿ ಇದ್ದ ಎಷ್ಟೋ ನಮ್ಮೂರ್ನವು, ಜಾತಿ ಹೇಳಿಕೆ ಹಿಂದೆ ಮುಂದೆ ನೋಡ್ತಿದ್ದರೂ ಹೆಸ್ರುಗೆ ಗೌಡ ಸೇರ್ಸಿಕಂಡದೂ ಉಟ್ಟು.. ಮಾರ್ಕ್ಸ್ ಕಾರ್ಡ್ ಲಿ ಇರಿಕಿಲೆ!!). ಅದ್ಕೆ ಬೇಕಾಗಿ  ಕನ್ನಡ ಗೌಡ, ಘಟ್ಟದ ಗೌಡ, ಕುರುಬ ಗೌಡ ಇತ್ಯಾದಿಗ ಸೇರಿಕಂಡೊ. ಆದರೆ ನಮ್ಮ ಹತ್ತ್ ಕುಟುಂಬ ಹದಿನೆಂಟ್ ಗೋತ್ರದ ಗೌಡ್ರ್ ಗಳ ಒಟ್ಟಿಗೆ ಸೇರ್ಸುದಕ್ಕೆ ಒಳದೇ  " kdkgowdas ಆ್ಯಪ್ ಅದೇ ಕೊಡಗು, ದಕ್ಷಿಣ ಕನ್ನಡ ಗೌಡಾಸ್ ಆ್ಯಪ್ "

                        ಹಿಂಗೇ ಒಂದಿನ ವಾಟ್ಸಾಪ್ ಲಿ ನಾ ಮಾಡ್ದ "ಅರೆಭಾಷೆ ಗೌಡ@ Bengaluru" ಗ್ರೂಪ್ ಮೆಸೇಜ್ ಗಳ ಮೇಲೆ ಕೆಳಗೆ ಓಡಿಸ್ತಿದ್ದೆ. ( ಇದ್ ಎಲ್ಲಾ ಗ್ರೂಪ್ ಗಳಾಂಗೆ ಗುಡ್ ಮಾರ್ನಿಂಗ್, ಗುಡ್ ನೈಟ್, ಅದೇ ಹಾಳು ಮೂಳು ಜೋಕ್ಸ್, ಇದರ ಫಾರ್ವರ್ಡ್ ಮಾಡ್ರೆ ವಾರದೊಳಗೆ ಗೂಡೆ ಸಿಕ್ಕಿದೆ!! ಇಂತದಿದ್ದದಲ್ಲ... ಅರೆಭಾಷೆ, ಊರುನ ಕುರಿತಾದ ಸುದ್ದಿಗ ಹಂಗೇ ಬೆಂಗ್ಳೂರ್ ಲಿ ಇರುವ ಜೋಬ್ ಓಪನಿಂಗ್ಸ್ ಗಳ ಬಗ್ಗೆ ತಿಳ್ಸುವ ಒಂದ್ ಒಳ್ಳೆ ಗ್ರೂಪ್). ಇದರ್ಲಿ ನಮ್ಮ ಹೈದ ಅಡ್ತಲೆ ಸಂದೀಪ್ kdkgowdas ಆ್ಯಪ್ ಲಿಂಕ್ ಕೊಟ್ಟಿತ್ತ್. ಗರ್ಲ್ ಫ್ರೆಂಡ್ ಬುಟ್ಟ್ ಹೋದ ಮೇಲೇ ಅದರ ಬಗ್ಗೆ ಪ್ರೀತಿ ಜಾಸ್ತಿ ಆದು ನೋಡಿ.. ಹಂಗೇ ನಂಗುನೂ .. ಬೆಂಗ್ಳೂರ್ ಸೇರ್ದ ಮೇಲೇ ಅರೆಭಾಷೆ ಬಗ್ಗೆ ಪ್ರೀತಿ ಜಾಸ್ತಿ ಆದ್. ಅದ್ಕೆ ಆ್ಯಪ್ ಡೌನ್ ಲೋಡ್ ಮಾಡಿಕಂಡೆ. ನೋಡ್ರೆ ಎಂಥ??? ಅದೊಂದ್ ಬರೇ ಆ್ಯಪ್ ಅಲ್ಲ.. ಪೂರ್ತಿ ಗೌಡ್ರ್ ಗಳ ಕುಟುಂಬಗಳೇ ಉಟ್ಟು.(ಅದೆಷ್ಟೋ ಹೆಸ್ರ್ ಗಳ ನಾ ಕೇಳಿಯೇ ಇತ್ಲೆ!!). ತಕ್ಷಣಕ್ಕೆ ಫ್ಲಾಶ್ ಆದ್ ಒಂದೇ ವಿಷಯ... ಇಷ್ಟೂ ಕುಟುಂಬಗಳ ಹೆಸ್ರುಗಳ ಪಟ್ಟಿ ಮಾಡಿಕೆ ಆ್ಯಪ್ ಮಾಡ್ಡವು ಎಷ್ಟ್ ನಿದ್ದೆಗೆಟ್ಟಿರುವೋಂಥ!! ಅದಾಗಿ 10 ದಿನಕ್ಕೆ ಜರ್ಮನಿಗೆ ಹೋಕೆ ಪ್ಯಾಕ್ ಮಾಡಿಕಂಡಿರ್ಕಾಕನೇ ಒಂದ್ ಫೋನ್ ಕಾಲ್ ಬಾತ್ (ಕೇವಲ 5 ಘಂಟೆ ಕಳ್ದಿದ್ದರೆ ಕಾಲ್ ರಿಸೀವ್ ಮಾಡಿಕೆ ಆಗ್ತಿತ್ಲೆ!!)...ಕುರುಂಜಿ ಮಂಜುಪ್ರಸಾದ್.. ನನ್ನ ಕ್ಲಾಸ್ ಮೇಟ್, ಹಳೇ ದೋಸ್ತಿ!! ಹಿಂಗಿಂಗೆ ಒಂದ್ ಆ್ಯಪ್ ಮಾಡ್ಯೊಳೊಯಾ.. ಅದರ್ಲಿ ನಿನ್ನ ಬರಹಗಳ ಹಾಕಕಾ ಅಂತ. ಭಾಷೆ ಒಳಿದು ಮೊದಲು.. ಬಾಷೆನೇ ಇಲ್ಲದಿದ್ದರೆ ನಾ ಎಲ್ಲಿರುವೆ??  ನಾನ್, ನನ್ನದ್ ಎಲ್ಲಾ ಮತ್ತೇಂತ ಸಂತೋಷಲಿ ಒಪ್ಪಿಕಂಡೆ. ಅದರೊಟ್ಟಿಗೆ ಆ್ಯಪ್ ಮಾಡ್ದವರ್ನೂ ಕೇಳಿಕಂಡೆ. ಅವೇ ನನ್ನ ಇನ್ನೊಬ್ಬ ದೋಸ್ತಿ ಅಖಿಲ್ ಕೆ. ಆರ್. ಒಟ್ಟಿಗೆ ಸಂದೀಪ್ ಕೆ.ಜೆ., ಚೇತನ್ ಪಿ.ಆರ್., ವಿನೋದ್ ಕುಮಾರ್ ಬಿ.ಆರ್... ಎಲ್ಲವೂ ನಮ್ಮ ಮನೆ ಮಕ್ಕಳೇ... ಅದೆಷ್ಟ್ ಭಂಗ ಬಂದೊಳೊನೋ ( ಪಗೆಲ್ ಬೇಲೆ ಬುಡ್ತ್, ಕತ್ತಲೆತ ಕನ ಬುಡ್ತ್ ತೇಳುವಾಂಗೆ!!) Hats off to you guys…amazing work….

                       ಈ ಆ್ಯಪ್  ಬಗ್ಗೆ ನಂಗೆ ವಿಶೇಷ ಹೆಮ್ಮೆ ಉಟ್ಟು. ಯಾಕೆ ಗೊತ್ತುಟಾ... ತುಳು ಭಾಷೆ ಅಷ್ಟೊಂದ್ ಜನ ಮಾತಾಡುವೆ. ಬಂಟ್ರ್ , ಬಿಲ್ಲಂವ, ಕುಲಾಲರ್, ಗಾಣಿಗ ಹಿಂಗೇ. ಆದರೆ ಅವರ ಒಂದು ಸೇರ್ಸಿಕೆ ಯಾವುದೇ ಆ್ಯಪ್ ಇಲ್ಲೆ. ಕೊಂಕಣಿ ಮಾತಾಡವು ಎಷ್ಟ್ ಜನ ಇಲ್ಲೆ? ಆದರೆ ಅವರೆಲ್ಲರ ಒಟ್ಟಿಗೆ ಸೇರ್ಸಿಕೆ ಒಂದ್ ಜಾಗೆ ಇಲ್ಲೆ!! ಅದ್ ಬುಡಿ.. ಕೊಡಗು "ಸಿ" ರಾಜ್ಯ ಮಾಡೊಕೂಂತ ಬೇಡಿಕೆ ಉಟ್ಟು.. ಹೋರಾಟನೂ ಮಾಡ್ತೊಳೊ. ಆದರೆ ಅವಷ್ಟೂ ಕೊಡವ ಕುಟುಂಬಗಳ ಒಂದ್ ಸೇರ್ಸುವ ವೇದಿಕೆ ಎಲ್ಲ್ಯುಟ್ಟು??!!  ಅಂಥದರ್ಲಿ... ನಾವು..ಅರೆಭಾಷೆ ಗೌಡ್ರುಗ, ಕೊಡಗು ದಕ್ಷಿಣ ಕನ್ನಡಲಿ ಇರುವ ಗೌಡ್ರುಗ ಒಟ್ಟ್ ಸೇರಿಕೆ ಇರುವ ಒಂದು ಜಾಗೆ ಇದ್. ಹೆಂಗೆ ಗೌಡ್ರ್ ಬ್ರಿಟೀಷರ ಧ್ವಜ ಇಳ್ಸಿ ಸ್ವಾತಂತ್ರ್ಯದ ಇತಿಹಾಸ ಬರ್ದೊನೋ ಹಂಗೇ ಇದೂ ಒಂದ್ ನಾವ್ಗೆ ಚರಿತ್ರಾರ್ಹ ಉಲ್ಲೇಖ!! ಇಡೀ ವಿಶ್ವಲಿ ಒಂದು ಜನಾಂಗನ ಒಟ್ಟಿಗೆ ಸೇರ್ಸುವ ಅಭೂತಪೂರ್ವ ಪ್ರಯತ್ನ!! ಇದರ್ಲಿ ನಮ್ಮ ಗೌಡ್ರ್ ಗಳ ಬಗ್ಗೆ ಇರುವ ಇತಿಹಾಸ, ಅರೆಭಾಷೆ ಲೇಖನಗಳ ಶೇರ್ ಮಾಡಿಕಣಕ್. ನಮ್ಮ ನಮ್ಮ ಸಾಧನೆಗಳ ತಿಳ್ಸಿಕಣಕ್.   ಅಷ್ಟಮಂಗಲ ಪ್ರಶ್ನೆಲಿ ಅಲ್ಲೆಲ್ಲೋ ಕುಟುಂಬದ ಕೊಡಿ ಒಳ್ದುಟೂಂತ ಹೇಳುವೆ. ಒಂದೇ ಕುಟುಂಬದ ಹೆಸ್ರ್ ಬಾಕನ ಮೂಲ ಹುಡ್ಕಿಕೆ ಇದೊಂದು ಸುಲಭ ಮಾರ್ಗ ಆಕೂ ಸಾಕ್!! ಅಷ್ಟೇ ಅಲ್ಲ... ಗೂಡೆ ಹುಡ್ಕಿಕೂ ಸುಲಭ!! (ಭಾರತ್ ಮಾಟ್ರಿಮನಿಲಿ ಹುಡ್ಕಿ , ಗೂಡೆ ಗೌಡ ಅಂತ ಯಾವ್ಯಾವುದೋ ಗೌಡಗಳ ನೋಡೊಕುತಿಲ್ಲೆ!!). ಜೊತೆಗೆ ನಮ್ಮಗೂಡೆಗಳೇ...ಹಾಕುವ ಫೋಟೋಗಳ ಬಗ್ಗೆನೂ ಎಚ್ಚರ ಇರ್ಲಿ.. ಎಲ್ಲರ ನಂಬುದೂ ಬೇಡ.. ಜೇನ್ ತೆಗ್ದವ ಕೈ ನೆಕ್ಕಿಯೇ ನೆಕ್ಕಿದೆ!!!(ನೆಕ್ಕದಿದ್ದರೆ ಅವಂಗೆ ಶುಗರ್ ಕಾಯಿಲೆ ಇರೊಕೋ ಏನೋ!!!). ಆದ್ರೆ ಫೇಸ್ ಬುಕ್ ಲಿ ಆದಾಂಗೆ ಫೋಟೋ ಶೇರ್ ಮಾಡಿಕೆ, ರಾಜಕೀಯ/ ಸಾಮಾಜಿಕ ವಿಷಯಗಳಿಗೆ, ಗೂಡೆ ಹುಡ್ಕಿಕೆ ಮಾತ್ರ ನಮ್ಮ ಆ್ಯಪ್ ಉಪಯೋಗ ಆಗದಿರ್ಲಿ ಎಂಬುದು ನನ್ನ ಆಸೆ. "ಹಳೆಬೇರು ಹೊಸಚಿಗುರು ಕೂಡಿರಲು ಮರಸೊಬಗು" ತೇಃಳುವಾಂಗೆ..ಹಳೆಬೇರಾದ ಎಲ್ಲಾ ಕುಟುಂಬಗ ಹಂಗೇ ಹೊಸಚಿಗುರಾದ ಆ್ಯಪ್ ಸೇರಿ ಘನ , ಗಾಂಭೀರ್ಯದ ಸದೃಢ ಮರ.. ಅದೇ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ಹೆಮ್ಮರ ಆಗಿ ಬೆಳೆಯಲೀಂತ ಹಾರೈಸಿನೆ. ನೀವೂ kdkgowdas ಆ್ಯಪ್ ಗೆ ಸೇರಿಕಣಿ. ಅರೆಭಾಷೆ ಒಳ್ಸಿ ಬೆಳ್ಸುದರೊಟ್ಟಿಗೆ ಗೌಡ ಜನಾಂಗನ ಬೆಳ್ಸಿಕೆ ಕೈ ಜೋಡ್ಸಿ. ( Googleplay ಇಂದ ಡೌನ್ ಲೋಡ್ ಮಾಡಿಕಣಕ್)


  • ಡಾ.ಪುನೀತ್ ರಾಘವೇಂದ್ರ