google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಚಿಲ್ಲರೆ ಪ್ರಸಂಗ!!!

https://arebhasheminpuli.blogspot.com/2017/08/blog-post_11.html

Wednesday 26 July 2017

ಚಿಲ್ಲರೆ ಪ್ರಸಂಗ!!!



                     ಆಟಿ ತಿಂಗಳ ಜಿಟಿಜಿಟಿ ಮಳೆ. ಬೊಳ್ಪುನ ಚಳಿಗೆ ಬೆಚ್ಚನೆ ಗುಡಿ ಹೊದ್ದ್ ಮಲ್ಗಿದ್ದರೂ ನನ್ನ ಹೆಣ್ಣ್ ಪರ್ರ್ಂಚಟಕ್ಕೆ ವೊಲ್ಲಿ ಒಳಗೇ ಬೆಗ್ರಿಕೆ ಸುರಾತ್. ಮತ್ತೇನಿಲ್ಲೆ.. "8 ಘಂಟೆ ಬಸ್ಸ್ ಲಿ ಸುಳ್ಯಕೆ ಎತ್ತೊಕು... ಎದ್ರಿಯಾ... ಶಾಲೆ ಮಕ್ಕಳಾಂಗೆ ಎಷ್ಟೂಂತ ಮಲ್ಗಿರೆ!!!" ನಾ ವೊಲ್ಲಿ ಎಳ್ದ್ ಮೋರೆ ಮುಚ್ಚಿಕಂಡರೂ ಅದರ ಎಳ್ದ್, ನೂಕಿ, ಮಂಚಂದ ಹೊಣ್ಕ್ ಸಿ ಎದ್ರಿಸಿ ನೀರಡಿ ಕೊಟೆಗೆಗೆ ಬೆರ್ಸಿತ್. ( ಒಂದರ್ಥಲಿ ನೋಡ್ರೆ ಅದ್ ಬೆರ್ಸಿದಲ್ಲ... ನನ್ನ ಬಿಸಾಡ್ತ್!! ತಿರ್ಗಿ ಹೇಳುವಾಂಗೆ ಉಟ್ಟಾ!!??) ವಿಷಯ ಸಿಂಪಲ್... ಕೃಷ್ಣ ಸ್ಟೋರ್ ಲಿ ಸಾರಿ ಮೇಳ!! ಲೇಟಾದರೆ ಒಳ್ಳ ಒಳ್ಳ ಸೀರೆ ಮುಗ್ದದೆ. ಹೊತ್ತಾದರೆ ಜನಗಳ ನೋಡೊಕಷ್ಟೆ. ಯಾಪೆಗೆ ಹತ್ತಿದ ಉಬರ್ ಮೀನ್ ಗಳಾಂಗೆ ಮಿಜಿ ಮಿಜಿ ಹೇಳ್ತಿದ್ದವೆ!!! ನೆರೆಕರೆ ದೋಸ್ತಿಗಳೊಟ್ಟಿಗೆ ಇದ್ ಒಂದ್ ತಿಂಗಳ್ಂದ ಹೇಳ್ತುಟ್ಟು... 'ನಂಗೆ ಇವು ಸರ್ತಿ ಸೀರೆ ಮೇಳಲಿ 10 ಸೀರೆ ತೆಗ್ದ್ ಕೊಟ್ಟವೆಗಡ!!' ಡಯಲಾಗ್ ಗೆ ನಾ ಖುಶಿ ಪಡೊಕೋ ತಲೆಬಿಸಿಮಾಡಿಕಣೊಕೋ ಗೊತ್ತಾಗದೆ, ಗಡಿಬಿಡಿಲಿ ಹೊಯ್ದ ಓಡಿಟ್ಟ್ ನಾಂಗಿರುವ ಬೊಡ್ರೊಟ್ಟಿ ತಿಂದ್ ಓಡಿಕಂಡೇ ಬಂದ್ ಬಸ್ಟಾಂಡ್ ಗೆ ಎತ್ತಿದೊ.

                     ಬಚ್ಚಾವ್!! ಬಸ್ ಹೋತ್ಲೆ. ಬುಲ್ಲೆಟ್ ನಾಂಗೆ ಬುಡ್ತಿದ್ದ ಶ್ವಾಸ ಮೆಲ್ಲ ಮೆಲ್ಲ ಬುಲ್ಡೋಝರ್ ಹದಕ್ಕೆ ಬಾತ್. ಅದೇ ಸ್ಪೀಡ್ ಲಿ ಬಸ್ಸ್ ಕೂಡ!!! ಬಸ್ಸ್ ಲಿ ಕುದ್ರಿಕೆ ಜಾಗೆ ಇಲ್ಲೆ. ಎಲ್ಲವೂ ಪೇಟೆಗೆ ಹೊರ್ಟವೇ!! ಹಂಗೂ ಹಿಂಗೂ ಜನರ ಎಡೆಲಿ ನುಗ್ಗಿ ಒಂದ್ ರಾಡ್ ಗೆ ಒರ್ಗಿ ನಿತ್ತೆ.(ನನ್ನ 'ದೊಡ್ಡಾ' ಜೀವ ನೋಡಿ ಹೆದ್ರಿಯೋ ಏನೋ.. ಅಲ್ಲಿಗೆ ಎತ್ತಿಕೆ ಸೆರೆ ಮಾಡಿ ಕೊಟ್ಟವ್ಕೆಲ್ಲಾ ಒಂದ್ ದೊಡ್ಡ ನೊಮ್ಸ್ಕಾರ!!) ಹಂಞ ಹೊತ್ತ ಕಳ್ಡ್ ನೋಡ್ರೆ ಇನ್ನೊಂದ್ ರಾಡ್ ಗೆ ಒರ್ಗಿ ನಿತ್ತ ಗೂಡೆ ನನ್ನ ನೋಡಿ ಮೋರೆ ಕರೇಲಿ ನೆಗಾಡ್ತುಟ್ಟು. ಯಾರೋ ಹೊಸ ಗೂಡೆ!! ಯಾರೂಂತ ಗೊತ್ತಾತ್ಲೆ. ಬೊಟ್ಟ್, ಕೆಬಿದ್, ಕೈದ್, ತುಟಿದ್, ಬಟ್ಟೆ ಎಲ್ಲಾ ಮ್ಯಾಚಿಂಗ್ ಮ್ಯಾಚಿಂಗ್... ಪಿಂಕ್!!! ಎಲ್ಲಿ ನನ್ನ ಯಜಮಾಂತಿ ನೋಡ್ದೆನಾಂತ ನೋಡ್ರೆ ಅದ್ ಸಿಕ್ಕಿದ ಹೆಮ್ಮಕ್ಕಳೊಟ್ಟಿಗೆ ಬಿಝೀ!! ಏನಪ್ಪಾ... ಲಡ್ಡು ಬಂದು ಬಾಯಿಗೆ ಬಿತ್ತಾ!! ಅಂತ ಖುಶಿಲಿ ನಾನೂ ತಿರ್ಗಿ ನೆಗಾಡ್ಡೆ. ಆದರೂ ಗೂಡೆ ಯಾರೂಂತ ನಂಗೆ ಗೊತ್ತಾತ್ಲೆ. ಅಂತೂ ಬಸ್ಸ್ ನಿಲ್ಸಿದಲ್ಲೆಲ್ಲಾ ಗೂಡೆ ನನ್ನ ನೋಡಿ ನೆಗಾಡ್ದು, ನಾ ತಿರ್ಗಿ ಸ್ಮೈಲ್ ಕೊಡ್ದು ಮುಂದುವರ್ತ್.(ಒಟ್ಟ್ 11 ಸರ್ತಿ) ಸುಳ್ಯಕ್ಕೆ ಎತ್ತಿದೇ ಗೊತ್ಲೆ. ಯಾರೋ ಒಬ್ಬ ರಶ್ ಲಿ ಕಾಲ್ ಗೆ ಮೆಟ್ಟ್ ಕಾಕನೇ ಗೊತ್ತು.. ಬಸ್ಸ್ ಬಸ್ಟಾಂಡ್ ಲಿ ನಿತ್ತುಟ್ಟೂಂತ!!

                    ಬಸ್ಸ್ ಇಳಿಯಕಾಕನೊಮ್ಮೆ ಲಾಸ್ಟ್ ಸರ್ತಿ ಅದರ ನೆಂಪು ಮಾಡಿಕಣೊನೋಂತ ಕಣ್ಣ್ ಲೇ ಹುಡ್ಕಿ ನೋಡಿ ನೆಗಾಡ್ದೆ. ಅದುನೂ ಪೊರ್ಲುಲಿ ನೆಗಾಡ್ತ್. ಓಟ್ಟಿಗೆ ನನ್ನ ಹೆಣ್ಣ್ ಕೂಡ ಅದರ ನೋಡೊಕೋ!! ನೋಡ್ರೆ ಅದರ ಕಣ್ಣ್ , ಮೋರೆ ಪಿಂಕ್ ಹೋಗಿ ಕೆಂಪಾಗುಟು!! ಅಂಗಡಿ ಹೆಂಗೂ ಇಲ್ಲಿಯೇ ಹಕ್ಕಲೆ ಉಟ್ಟಲ್ಲಾಂತ  ಬಸ್ಸ್ ಇಳ್ದ್ ನಡ್ಕಂಡ್ ಹೊರ್ಟೊ. ಗೂಡೆ ಮಾತ್ರ ನನ್ನ ತಲೆಂದ ಹೋತೇಲೆ. ಯಾರಾಗಿರ್ದು ಅದ್??!! ನನ್ನ ಕ್ಲಾಸ್ ಮೇಟ್ ಅಂತೂ ಅಲ್ಲ. ಯಾರಾರ್ ನನ್ನ ಕ್ಲಾಸ್ ಮೇಟ್ ತಂಗೆನಾ? ಅಲ್ಲ..ಮೊನ್ನೆ ಬೆಂಗ್ಳೂರ್ಂದ ಬಾಕನ ಬಸ್ಸ್ ಲಿ ಸಿಕ್ಕಿದ ಗೂಡೆ ದೀಪಿಕಾನ? ಅದೂ ಅಲ್ಲ... ನನ್ನಪ್ಪನ ಸ್ಟೂಡೆಂಟ್ ಗಳ ಪೈಕಿ ಯಾರಾರ್ ಆಗಿರ್ದೋ ಹೆಂಗೆ? ಅಂತೂ ನನ್ನ ತಲೆಗೆ ಹೊಳ್ತ್ ಲೆ. ಅಷ್ಟೊತ್ತಿಗೆ ಒಟ್ಟಿಗೆ ನಡ್ಕಂಡ್ ಬರ್ತಿದ್ದ ನನ್ನ ಹೆಣ್ಣ್ ಕುತ್ತಿ ಕುತ್ತಿ ಕೇಳಿಕೆ ಸುರು ಮಾಡ್ತ್. 'ಯಾರ್ ಯಾ ಗೂಡೆ. ಭಾರೀ ಲಾಯ್ಕ್ ಲಿ ನೆಗಾಡ್ತೊಳರಿ!' 'ನಂಗೆ ಗೊತ್ಲೇ ಮಾರಾಯ್ತಿ' ಹೇಳ್ದಕ್ಕೆ  ಅವ್ಳು 'ಮತ್ತೆಂತಕೆ ಅದ್ ನಿಮ್ಮ ಹಿಂದೆಕಂಡೇ ಬರ್ತುಟ್ಟು??!!' . ತಿರ್ಗಿ ನೋಡ್ರೆ ... ಹೌದು... ಆ ಗೂಡೆ ನನ್ನ ಹಿಂದೆಕಂಡೇ ಉಟ್ಟು. ನಾನೂ ಒಮ್ಮೆ ಬ್ರೇಕ್ ಹಾಕಿ ನಿತ್ತೆ. ಪುನಃ ಅದೇ ಸ್ಮೈಲ್. ನೀ ಯಾರೂಂತ ಕೇಳಿಕೆ ಬಾಯಿ ತೆಗ್ಯಕೆ ಮೊದ್ಲೇ ಗೂಡೆನ ಪ್ರಶ್ನೆ ನಂಗೆ ಹಾರಿ ಬಾತ್. ಅದೇ ಪ್ರಶ್ನೆಲಿ ನನ್ನ ಹೆಣ್ಣ್ ಡೌಟೂ ಹಾರಿ ಹೋತ್. " ಅಣ್ಣಾ... ನಿಮ್ಮೊಟ್ಟಿಗೆ 2000 ನೋಟುಗೆ ಚಿಲ್ಲರೆ ಉಟ್ಟಾ??"


  • ಡಾ. ಪುನೀತ್ ರಾಘವೇಂದ್ರ

No comments:

Post a Comment