google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಪಾಚುನ ಕಟ್ಟ!!!

https://arebhasheminpuli.blogspot.com/2017/08/blog-post_11.html

Friday 16 June 2017

ಪಾಚುನ ಕಟ್ಟ!!!


                      "ಕಟ್ಟ" ಹೇಳ್ರೆ ಅರೆಭಾಷೆಲಿ "ಒಟ್ಟಿಗೆ ಸೇರ್ಸಿ ಇಸುದು" ಅಂತ ಅರ್ಥ. ಕನ್ನಡಲಿ ಹೇಳ್ದಾದರೆ "ಕಟ್ಟು".  ಅಂದರೆ ಸೌದೆಹೊರೆ, ಹುಲ್ಲು ಹೊರೆ ಇದ್ಕೆ ಸೌದೆ ಕಟ್ಟ, ಹುಲ್ಲು ಕಟ್ಟ ಅಂತ ಹೇಳುವೆ. ಇನ್ನೊಂದು ನೀರ್ ಹರ್ದ್ ಹೋದರ ತಡೆಯಕೆ ಹಾಕುದು, ಅದೇ ನೀರ್ ಕಟ್ಟ(ಶುದ್ಧ ಕನ್ನಡಲಿ  ಒಡ್ಡು/ ಕಿಂಡಿ ಅಣೆಕಟ್ಟು). ಇನ್ನ್ ಕೋಳಿಕಟ್ಟ ನೀವ್ ಗೆಲ್ಲಾ ಗೊತ್ತೇ ಉಟ್ಟು!!! ನಾ ಈಗ ಹೇಳಿಕೆ ಹೊರ್ಟದ್ "ಪಾಚುನ ನೀರ್ ಕಟ್ಟ". ಊರೊಳಗೆ ಪ್ರಗತಿಪರ ಕೃಷಿಕ ಹೆಸ್ರ್ ಮಾಡ್ದ ನಮ್ಮ ಪಾಚು, ಕೃಷಿಲಿ ಬಗೆ ಬಗೆ ಪ್ರಯೋಗ ಮಾಡ್ತಿತ್ತ್. ಹಡ್ಲ್ ಬಿದ್ದ ಗದ್ದೆಗಳೆಲ್ಲಾ ಟಿಲ್ಲರ್ ಹೊಡ್ಡ್ ವರ್ಷಲಿ ಮೂರು ಬೆಳೆ ತೆಗೆವ ಆಸೆ. ಆದರೆ ಸುಗ್ಗಿ ಬೆಳೆಗೇ ನೀರ್ ಅಲ್ಲಿಂದಲ್ಲಿಗೆ, ಇನ್ನ್ ಏಣೆಲ್ ಗೆಲ್ಲಿಂದ?? ಕಾರಣ ಆಧುನೀಕತೆ!! ಅದೇಂಗೆ?? ಹಿಂದೆಲ್ಲಾ ಚೊಂಟೆಲಿ ನೀರ್ ಗೋಂಚ್ ತಿದ್ದೊ. ಈಗ ಕರೆಂಟ್ ಪಂಪ್ ಬಂದ್ ನೀರ್ ಆರ್ಕಾಕನ ಮುಟ್ಟ ಪಂಪ್ ನಿಲ್ಸುವ ಗೊಡವೆನೇ ಇಲ್ಲೆ ( ಮೆಸ್ಕಾಂನವು ಸಿಂಗಲ್ ಫೇಸ್ ಕೊಟ್ಟರೆ ಮಾತ್ರ ಪಂಪ್ ಆಫ್ ಆದು!!). ಹಂಗಾಗಿ ಹಳ್ಳಗಳ್ಲಿ ಡಿಸೆಂಬರ್ ತಿಂಗಳ್ಲೇ ಪಾರೆ ಕಲ್ಲ್ ಎದ್ದ್ ಕುದ್ದಿದ್ದವೆ. ಮಾರ್ಚ್ ತಿಂಗಳ್ಲಿ 3 ದಿನ ಮಳೆ ಬಂದರೆ ಸಾಕ್. ಹಳ್ಳಲಿ ನೀರ್ ತುಂಬಿ ಹರ್ದದೆ. ಮಳೆ ನೀರಲ್ಲ!? ಯಾರೂ ಪಂಪ್ ಸ್ಟಾರ್ಟ್ ಮಾಡುದ್ಲೆ. ಅದರ್ರ್ಂದಾಗಿ!! ಆಗ ನಮ್ಮ ಪಾಚುಗೆ ಹೊಳ್ದ ಐಡಿಯಾನೆ ಗದ್ದೆ ಕರೆಲಿದ್ದ ಚೋಡಿಗೆ " ಕಟ್ಟ ಕಟ್ಟುದು".

                 ನೆರೆಕರೆಯವರೊಟ್ಟಿಗೆ ಎಲ್ಲಾ ಕೇಳಿ ಕಟ್ಟ ಹಾಕುವ ದಿನ ನಿಘಂಟ್ ಮಾಡ್ಯಾತ್. ಆಕಿಲೇಂತ ಹೇಳ್ದವು ಯಾರೂ ಇಲ್ಲೆ. ಎಲ್ಲವ್ಕೂ ನೀರ್ ಸಿಕ್ಕಿದಲ್ಲೇಂತ ಕುಸಿನೊಟ್ಟಿಗೆ ಕೆಳಗೆಡೆನ ತೋಟಕ್ಕೆ ನೀರ್ ಚೋಂಪ್ ಕೆಲ್ಸ ಒಳ್ದದೆ ಎಂಬ ಸಮಾಧಾನ. ಸಿಡ್ಲ್ ಹೊಡ್ದ್ ಸತ್ತ, ಮುಂಡ್ ತಿರಿ ಆಗಿ ಕುಬೆ ಚೊಯ್ಯ್ಂಗಲೆ ಆದ ಕೊಮ್ಮ್ ಗಳೆಲ್ಲಾ ಸಿಗ್ದ್ ಗಟ್ಟಿ ಮುಟ್ಟ್ ತಟ್ಟೆ ಮಾಡಿಕಂಡೊ. ಕೆಲ್ಸಕ್ಕೆ ಬಂದವ್ಕೆಲ್ಲ ಕೋಳಿ ಗೈಪುನ ಗಮ್ಮತೂ ಆತ್. ಒಟ್ಟಿಗೆ ಹನೀಸ್ ಹನೀಸ್ ಗ್ಯಾರ್ದಣ್ಣ್ ದೂ!! ಅಂತೂ ಭರ್ಜರಿ ಕಟ್ಟ ಕಟ್ಟಿ ಗದ್ದೆ, ತೋಟಗಳಿಗೆ ನೀರ್ ಬುಟ್ಟೊ. ಅದರೊಟ್ಟಿಗೆ ನಮ್ಮ ಪಾಚುನ ದೆಸೆನೇ ಬದ್ಲಾತ್.. ಕೃಷಿ ಜಾಸ್ತಿ ಆಗೀಂತ ನೆನ್ಸಿದರಿಯಾ... ಖಂಡಿತಾ ಅಲ್ಲ... ನಮ್ಮ ಪಾಚು ಹಾಕಿದ  "ಫೇಸ್ ಬುಕ್ ಫೋಟೋ"ನೇ ಕಾರಣ!!??


                 ಫೇಸ್ ಬುಕ್ ಲಿ ಬಂದ ಫೋಟೋ ನೋಡಿ ಪಾಚುನ ಕಟ್ಟಕ್ಕೆ ಸುಮಾರ್ 'ಲೈಕ್' ಒಟ್ಟಿಗೆ ಒಂದಷ್ಟ್ ಶುಭಹಾರೈಕಗ ಬಾತ್. ಅದರೊಟ್ಟಿಗೆ ಒಂದ್ ಗೂಡೆನ "ಫ್ರೆಂಡ್ ರಿಕ್ವೆಷ್ಟ್" ಕೂಡ!! ಗೂಡೆ ಹಂಚಿಮನೆ ಲಚ್ಚಣ್ಣನ ಎರಡ್ಣೇ ಮಗ್ಳ್ ಅಮ್ಮುಣಿ. ಗೂಡೆ ಎಂಎಸ್ ಡಬ್ಲ್ಯೂ ಓದಿ ಸಮಾಜ ಕಾರ್ಯಲಿ ಇರವ್ಳು. ಪಾಚುನ ಸಮಾಜಮುಖಿ ಕಾರ್ಯನೋಡಿ ಅಮ್ಮುಣಿಗೂ ಅವನ ಬಗ್ಗೆ ಒಳ್ಳೆ ಮನ್ಸ್ ಅಷ್ಟೆ. ಫೇಸ್ ಬುಕ್ ಪರಿಚಯ ದಿನ ಆದಷ್ಟ್ ಗಟ್ಟಿ ಆಕಂಡ್ ಬಾತ್. ಮನೆಯವ್ಕೂ ಹೇಳಿ ಹೊಸ ನೆಂಟಸ್ತಿಕೆ ಶುರ್ ಮಾಡೋಣೋಂತ ನೆನ್ಸಿದೊ. ಆದರೆ ಭೇಟಿ ಆಕೊಲ್ಲಾ??  ಅಂತೂ ಪಾಚುನ "ಫಸ್ಟ್ ಡೇಟಿಂಗ್" ಫಿಕ್ಸ್ ಆತ್. ಎಲ್ಲರಾಂಗೆ ಚೆನ್ನಕೇಶವ ದೇವಸ್ಥಾನಲೋ, ಆಲ್ ಸೀಸನ್ ಹೋಟೆಲ್ಲೋ ಅಲ್ಲ. ಪರಿಚಯಕ್ಕೆ ಕಾರಣ ಆದ "ನೀರ್ ಕಟ್ಟದ ಕರೆಲಿ"!!! ಸರಿ... ನಮ್ಮ ಪಾಚುನೂ, ಅಮ್ಮುಣಿನೂ ಕಟ್ಟದ ಹಕ್ಕಲೆ ಎತ್ತಿದೊ. ಅಲ್ಲಿಗೆತ್ತಿ ನೋಡ್ರೆ ಎಂತ? ಕತ್ತಲೆನೆ ರಣ ಮಳೆಗೆ ನೀರ್ ತುಂಬಿ, ಕಟ್ಟ ಒಡ್ದ್, ಹಾಕಿದ್ದ ಕೊಮ್ಮ್ ತಟ್ಟೆ ಎಲ್ಲಾ ಬೊಳ್ಳಲಿ ಹೋಗುಟು!! ಅಲ್ಲಿದ್ದ ಎರ್ಡ್ ಎಸ್ಂಡ್ ಕೊಂಬಲಿ ಒರ್ಂಗಿಸಿ ಮೋಟೆ ಸೇರ್ದೊ. ಪಾಪ ಪಾಚು... ಮನ ಮೆಚ್ಚಿದ ಗೂಡೆಗೆ ತನ್ನ ಕಾರ್ಯನ ತೋರ್ಸಿಕೆ ಹೋಗಿ ಹೊಗ್ಳಿ ಹೊಗ್ಳಿ ಅಗ್ಳ್ ಹರ್ಂಡಿದಾಂಗಾತ್!! ಆದರೂ ಪರ್ವಾಗಿಲ್ಲೆ... ಹೈದ,ಗೂಡೆಗ ಹೊಸ ಜೀವನ ಕಟ್ಟುವ ಬಗ್ಗೆ ಮಾತಾಡಿಕಣ್ತಾ ದೊಡ್ಡವ್ಕೆ ತಿಳ್ಸಿಕೆ ಹೊರ್ಟೊ

🖋ನಿಮ್ಮ ಹೈದ 

2 comments: