google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): March 2018

https://arebhasheminpuli.blogspot.com/2017/08/blog-post_11.html

Wednesday 28 March 2018

ಒತ್ತೆಕೋಲದ ಒಳಗೆ...




                          "ಓಯ್ ಅಮ್ಮುಣಿ... ಬರ್ವ ಐತೋರ ಊರ್ಲಿ ವಿಷ್ಣುಮೂರ್ತಿ ಒತ್ತೆಕೋಲ.. ನಾ ಅಂತೂ ನಾಕ್ ದಿನ ರಜೆ ಹಾಕ್ಯಳೆ.. ನೀನೂ ಬಂದಿಯನಾ??  ಹೆಂಗೂ ಇಲ್ಲಿವರೆಗೆ ಒತ್ತೆಕೋಲ ನೋಡ್ತ್ಲೆತ ಹೇಳ್ತಿದ್ದಲ್ಲ!! ನೀ  ಶನ್ವಾರ ಹಿಂಬತ್ ಗೇ ಬಾ.. ಒಟ್ಟಿಗೇ ಪೋಯಿ ಕುಳ್ಚಾಟ ನೋಡಿಕೆ.. ಕತ್ತಲೆಗೆ ಮಲ್ಗಿಗೆ ಮತ್ತೆ ನಿಂಗೆ ಬೇಬ್ಯತ್ತೆನಲ್ಲಿಗೆ ಹೋಕ್.. ಹೆಂಗೆ.. ಆದೊಲ್ಲಾ??!!" ಪಾಚು ಹೇಳ್ದರ ಕೇಳಿ ಅಮ್ಮುಣಿ ಅಂತೂ ಕೆಬಿಗೆ ಗಾಳಿ ಹುಗ್ಗಿದ ಅಂಬೆಕರ್ ನಾಂಗಾತ್. ಕುಳ್ಚಾಟದ ದಿನ ಹಿಂಬತ್ ನಾಕ್ ಗಂಟೆಗೇ ಒತ್ತೆಕೋಲ ಗದ್ದೆಗೆ ಹೊರ್ಡಿಕೆ ಉರ್ಡಪತ್ತ ಮಾಡಿಕಂಡಿದ್ದ ತಂಗಮ್ಮಕ್ಕ, ಪಾಚುನೂ ಹೊರ್ಟಿದ್ದದರ ನೋಡಿ " ಮೇಲೇರಿಗೆ ಕಿಚ್ಚಿಕೊಡಿಕೆ ಮೊದ್ಲೇ ಎತ್ತೊಕು ಪಾಚು.. ಲಲ್ತತ್ತಿಗೆ ಬೇರೆ ಬೇಗ ಬಾಕೆ ಹೇಳ್ಯೊಳೊ.. ಕಡೆನೆ ನಾ ಯಾಗೋಳು ಲೇಟ್ ಡೋಂಗಿ ಮಾಡಿಕಂಡ್ ಸಿಕ್ಕಿದವರೊಟ್ಟಿಗೆಲ್ಲಾ ಹೇಳಿಕಂಡಿದ್ದವೆ" ಹೇಳ್ರೆ ಪಾಚು ಮಾತ್ರ ತುಗ್ಯೆತಿದ್ದ ಮೊಬೈಲ್ಂದ ತಲೆ ಎತ್ತದೆ "ಅಮ್ಮಾ ನಂಗೆ  ಜನ  ಬೇರೆ ಒಳೊ.. ಅಮ್ಮುಣಿ ಬಂದದೆ.. ನೀವು ಪೊಪ್ಪನೊಟ್ಟಿಗೆ ಹೋಗಿ" ತೇಳ್ದಂವ ಪುನಃ ಮೊಬೈಲ್ ಲಿ ತುಗ್ಯೆದರ ಮುಂದ್ ವರ್ಸಿತ್. ಇತ್ತ ಲಚ್ಚಣ್ಣನೂ "ಒತ್ತೆಕೋಲದ ದೆಸೆಂದಲೋ ಏನೋ.. ಒಂದ್ ವಾರ ಇಲ್ಲದ  ಕರೆಂಟ್ ಇಂದ್ ಉಟ್ಟು ಮಾರಾಯ್ತಿ. ಇಂದೂ ನೀರ್  ಬುಡದಿದ್ದರೆ ತೋಟ  ಒಣ್ಂಗಿ ಬರ್ರ್ಂಟಾದು. ನೀ ದಾಮಣ್ಣನ ರಿಕ್ಷಲಿ ಹೋಗು" ಹೇಳಿಕಂಡೇ ಪಂಪು ಸೆಡ್ಡ್ ಕಡೆ ಓಡ್ದೊ!!  ಮಂಙ ಹೇಳ್ದರ ಕೇಳಿ ಒಮ್ಮೆಗೇ ಚಪ್ಪೆ ಆದ ತಂಗಮಕ್ಕ "ಎಸ್ಂಡ್ ಮುಳ್ಳ್ ಎಸ್ಂಡ್ ಎದೆಗೇ ಚುರಿದುಗಡತೇಂಳ್ದೇ ಇದ್ಕೆ ... ಮಂಙ, ಮಂಙಾ, ಕೊಳ್ಳಿ ಕುಬೇರತ ಹೊತ್ತ್ ಕಂಡದೇ ಜಾಸ್ತಿ ಆತ್.. ಹೊಗ್ ಳಿ ಹೊಗ್ ಳಿ ಅಗ್ ಳ್ ಹರ್ಂಡಿತ್ ಗಡ!! ಎಲ್ಲಾ ಕೂಂಜೋಳ್ ಲಿ ಬಿದ್ದ ಮೀನ್ಂದ ಕಡೆ!! ಮಾನ, ಮೊರ್ಯಾದೆ, ಲಜ್ಜಿ, ಪುಲೇಜಿ ಒಂದೂ ಇಲ್ಲದವು..." ಅಪ್ಪ, ಮಂಙನನೂ ಸೇರ್ಸಿ ಇಡೀ ಗಂಡ್ ಸಂತಾನಕ್ಕೇ ಬೊಯ್ಕಂಡ್ ದಾಮಣ್ಣಂಗೆ ಫೋನ್ ಮಾಡಿಕೆ ಓಡ್ದೊ.

                    ಬೇಗ ಬನ್ನೆತೇಳ್ದ ಅಮ್ಮುಣಿ ಒತ್ತೆಕೋಲ ಗದ್ದೆಗೆ ಎತ್ತ್ ಕಾಕನ ಮೇಲೇರಿಗೆ ಕಿಚ್ಚಿ ಕೊಟ್ಟಾಗುಟು!! ಕಾದ್ ಕಾದ್  ಒಂದ್ ರೌಂಡ್ ಚಾಯ,ಗೋಳಿಬಜೆ ಮುಗ್ಸಿದ್ದ ಪಾಚು ಇನ್ನೊಂದ್ ಚಾಯಕ್ಕೆ ಕೈ ಒಡ್ಡಿತಷ್ಟೇ. ಪಚ್ಚೆ ಪಚ್ಚೆ ತೊಂಡೆ ಚಪ್ಪರದ ನಡೂಲಿ ಕಾಂಬ ಹಣ್ಣ್ ತೊಂಡೆನಾಂಗೆ ಹೊಳ್ಪುವ ಅಮ್ಮುಣಿನ ನೋಡಿ ಕೈಲಿದ್ದ ಚಾಯ ಸೂಸಿದ್ ಗೊತ್ತೇ ಆತ್ಲೆ. ಬೆನ್ನ್ ತೊರ್ಸಿಕಂಡಿದ್ದ ಬೊಗ್ಗ ನಾಯಿಗೆ ಬಾಜಿಂಙ ಸೊಪ್ಪುಲಿ ಬೆನ್ನ್ ಗೇ ಬೊಡ್ದರೆ ಕುಸಿ ಆಗುವಂಗಾತ್ ಪಾಚುಗೆ!!  ಕುಳ್ಚಾಟಕ್ಕೆ ಹೊತ್ತು ಸುಮಾರುಟ್ಟುತ ಕಂಡದೆ. ಇನ್ನೆಂತ ಮಾಡ್ದು.. ಹೊರ್ಟೊ ಇಬ್ಬರೂ ಸಂತೆ  ಸುತ್ತಿಕೆ. ವರ್ಷಂದ ವರ್ಷಕ್ಕೆ ಸಂತೆಡ್ಕ ಅಗಲಗಲನೇ ಆತುಟ್ಟು. ಸೋಜಿ, ಪೆಪ್ಸಿ ಮಾರವು ಮಾತ್ರ ಯಾಗೋಳೋ ಮಾಯ ಆಗೊಳೊ. ಮಾಮೂಲಿನಾಂಗೆ ವರ್ಷನೂ ಐಸ್ಕ್ರೀಂ ವ್ಯಾನ್ ಹಾಕಿದ್ದ ದಿನೇಶ ಪಾಚುನ ನೋಡ್ದವನೇ ತಲೆ ಕೆಳಗೆ ಹಾಕಿ ದುಡ್ಡು ಲೆಕ್ಕಹಾಕ್ಯಂಡ್ ಕುದ್ದತ್. ಕಾರಣ ಉಟ್ಟು. ಚಡ್ಡಿದೋಸ್ತಿ ಪಾಚುಗೆ ಪ್ರತಿವರ್ಷ ಒಂದ್ ಕೋನ್ ಐಸ್ಕ್ರೀಂ ಅಂವ ಫ್ರೀ ಕೊಡ್ದು. ಈಗ  ನೋಡ್ರೆ ಇಬ್ಬರ್ ಒಳೊಲ್ಲ!! ಸಂತೆಲಿ ಸೋದರಮಾವನ ಗುರ್ತ ಇಲ್ಲದಾಂಗಾತ್. ಚೆರೆಕುತ್ತದ ಎಲ್ಸಂಡೆ ಬೊಳ್ಳಿಗಳಾಂಗೆ ಇದ್ದ ಕೂದಲ್ ಬಾಚದೇ ಎದ್ದ್ ಬಂದವ್ಕೇನೂ ಕಮ್ಮಿಇತ್ಲೆ. ಇನ್ನ್ ಪಾಚುನ ಮೇಲೆ ಕಣ್ಣ್ ಹಾಕಂಡಿದ್ದ ಗೂಡೆಗ ಒಟ್ಟಿಗೆ ಇರ್ವ ಅಮ್ಮುಣಿನ ನೋಡಿ ಚೌಳಿಮೂಡೆ ಕೊಡ್ಕ್ ಸಿಕಂಡ ಕುರೆ ಮೊರಿನಾಂಗೆ ಆಡ್ತಿದ್ದದೂ ಸುಳ್ಳಲ್ಲ!! ಎದ್ರ್ಂದ ಭಾರೀ ಲಾಯ್ಕ್ ಕಂಡರೆತ ಹೊಗ್ಳಿಕಂಡ್ ಹಿಂದೆಂದ ಕೇಡ್ ಹೇಳಿಕಂಡ್, ಅತ್ತ ಅಳಗೆಲ್ಯಲ್ಲ- ಇತ್ತ ಸೌಂಟ್ ಲ್ಯಲ್ಲ ಸುತ್ತಿಕಂಡಿರವ್ಕೇನೂ ಸಂತೆ ಅಡ್ಕಲಿ ಬರ ಇತ್ಲೆ!!

                      ಚಂಡೆ ಸದ್ದ್ ಕೆಳ್ದಕ್ಕೆ ಗಡಿಬಿಡಿಲಿ ಮೇಲೇರಿ ಗದ್ದೆಗೆ ಎತ್ತಿ ನೋಡ್ರೆ ಕುಳ್ಚಾಟ ಸುರಾಗುಟು. ಅಮ್ಮುಣಿಗಿದ್ ಹೊಸಾ ಅನ್ಭವ. ದೆವ್ವ ಕಟ್ಟಿದವ ಸುರ್ಗೆ ಹಿಡ್ಕಂಡ್ ನಿಗಿನಿಗಿ ಕಿಚ್ಚಿ ಸುತ್ತಾ ಓಡ್ದ್..ಮೇಲೇರಿಗೆ ಹಾರಿಕೆ ಹೋದರೆ ಬೆಳ್ಚಾಡರ್ ತಡಿದು.. ಹೀಂಗೇ.. ಒಟ್ಟಾರೆ ಹೇಳಿಕೆ ಆಗದಾ ಸಂಗತಿಗ. ನಡು ಇರ್ಳ್ ಕಳ್ತ್. ಪಾಚು ಅಮ್ಮುಣ್ಣಿನ ಬೇಬ್ಯತ್ತೆನಲ್ಲಿ ಬುಟ್ಟು ಬೊಳ್ಪುಗೆ 5 ಗಂಟೆ ಒಳಗೆ ಎತ್ತೊಕು,ಇಲ್ಲರೆ ದೆವ್ವ ಮೇಲೇರಿಗೆ ಬೀಳ್ದು ನೋಡಿಕೆ ಸಿಕ್ಕಿಕಿಲೆತ ಹೇಳಿಕಂಡೇ ಮೊಬೈಲ್ ಲಿ ಅಲರಾಂ ಇಸಿ ಚಾರ್ಜರ್ ಸಿಕ್ಕ್ ಸಿ ಮಲ್ಗಿತ್. ಬೊಳ್ಪುಗೆ ಮೈತುಂಬಾ ಚಾಳೆ ತಿರಿ ಕಟ್ಟಿಕಂಡ ದೆವ್ವ ಮೇಲೇರಿಗೆ ಬೀಳ್ದೇ ನೋಡಿಕೆ ಒಂಥರಾ ಹೆದ್ರಿಕೆ. ದೆವ್ವ ಹಂಗೆ ಬೀಳ್ಕಾಕನ ಅಮ್ಮುಣಿ ಒಮ್ಮೆಗೆ ಹೆದ್ರಿ ಪಾಚುನ ಕೈ ಗಟ್ಟಿ ಹಿಡ್ಕಂಡತ್. ಪಾಚುಗೆ ಸ್ವರ್ಗಕ್ಕೆ ಮೂರೇ ಗೇಣ್ ಗಡ!! ಚೂರು ಹೊತ್ತ್ ಕಳ್ದರೆ ಕೈನೊಟ್ಟಿಗೆ ಕಾಲ್ ಕೂಡ ಬಿಸಿಬಿಸಿ ಆತುಟ್ಟು. ಗುಡಿ ಹೊದ್ದ್ ಮಲ್ಗಿದಂವ ಒಲ್ಲಿ ಒಳಗೇ ಹೊಣ್ಕಿ ,ಕಣ್ಣ್ ಬುಟ್ಟರೆ ಕಿಡ್ಕೆಂದ ಬಿಸಿಲ್ ಹೊಡ್ದದೆ. ಗಂಟೆ ಎಂಟ್ ಕಳ್ದುಟು!! ಸರೀ ನೋಡ್ರೆ ಅಲರಾಂ ಇಸಿ, ಮೊಬೈಲ್ ಗೆ ಚಾರ್ಜರ್ ಸಿಕ್ಕ್  ಸಿ ಮಲ್ಗಿದಂವ  ಸುಚ್ಚೇ  ಓನ್ ಮಾಡ್ತ್ಲೆ!! ಇನ್ನೆಲ್ಲಿಂದ ಮೊಬೈಲ್ ಚಾರ್ಜಾದು???? ಅಲರಾಂ ಹೊಡಿದು? ಮೊಬೈಲ್ ಅಲ್ಲಿಗೇ ಆಫ್ ಆಗುಟು!! ಏಳ್ಸಂವ ಫೋನ್ ಮಾಡದೆ ಇತ್ತ ಅಮ್ಮುಣಿನೂ ಎದ್ದತ್ಲೆ. ಅಂತೂ ಗಡಿಬಿಡಿಲಿ ಎದ್ದ್ ಓಡ್ರೆ ಜನ  ಏಲ್ಲ ಹರ್ಕೆ ಹಾಕಿ ಮಾರಿಕಳಕ್ಕೆ ಹೊರ್ಟೊಳೊ. ಅಲ್ಲಿಂದಲೇ ಅಮ್ಮುಣಿನ ಬಸ್ ಹತ್ತ್ ಸಿ ಬೇಜಾರ್ ಲಿ ಮನೆಗೆತ್ತಿದ ಪಾಚುಗೆ, ವಿಷಯ ತಿಳ್ಕಂಡ ತಂಗಮಕ್ಕನೇ ಸಮಾಧಾನ ಹೇಳ್ದೊ. "ಮೊನ್ನೆ ಕತ್ತಲೆ ಬಸ್ಸ್ ಲಿ.. ನಿನ್ನೆ ಒತ್ತೆಕೋಲಲಿ ನಿದ್ದೆ ಗೆಟ್ಟ.. ಹಂಗಾಗಿ ನೀ ಗೋಷ್ಠಿಯೇ ಮಾಡಿರಿಕಿಲೆ ಏನೋ.. ಬುಡು. ಬರ್ವ ವರ್ಷ ಎಲ್ಲವೂ ಒಟ್ಟಿಗೆ ಪೋಯಿ" ಅಯ್ಯೆಕಳೇ ಹಿಂಗೆ ಅಲ್ಲ... ಕ್ಷಮಯಾಧರಿತ್ರಿ... ಏಕೋ ಗೊತ್ಲೆ?? (ಅದ್ಕೇ ಹೇಳ್ದು ಹೇಂಟೆ ಕೇರ್ದೇ ಹೊಟ್ಟೆ ಅಡಿಗೆತ!!)
(ಒತ್ತೆಕೋಲದ ಒಳಗೆ...: An Arebhashe Articles of Gowdas)
  • ಡಾ. ಪುನೀತ್ ರಾಘವೇಂದ್ರ ಕುಂಟುಕಾಡು