google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ದುಬೈ ಹೈದಂಗೊಂದ್ ದುರ್ಬೀನ್!!!

https://arebhasheminpuli.blogspot.com/2017/08/blog-post_11.html

Monday 12 March 2018

ದುಬೈ ಹೈದಂಗೊಂದ್ ದುರ್ಬೀನ್!!!


                   ವಿಮಾನ ಇನ್ನ್ 20 ನಿಮ್ಶಲಿ ಬಜ್ಪೆ ವಿಮಾನ ನಿಲ್ದಾಣಲಿ ಇಳ್ದದೆ..  ಸೀಟ್ ಬೆಲ್ಟ್ ಸೆಕ್ಕ್ ಸಿ ಗಟ್ಟಿ ಮಾಡಿಕಣಿತ ಪೈಲಟ್ ಮೈಕ್ ಲಿ ಕುಂಯಿಗುಟ್ಟಿದರ ಕೇಳಿ ಹಂಗೇ ಕಣ್ಣ್ ಮುಚ್ಚಿದ್ದ ಪ್ರಕಾಶ ರಪಕ್ಕ ಕಣ್ಣ್ ಬುಟ್ಟ್ ಎದ್ದ್ ಕುದ್ದತ್. ಊರುಗೆ ಬಾದಕ್ಕೆ ಖುಸಿ ಪಡೊಕೊ ಬೇಜಾರ್ ಮಾಡಿಕಣೊಕೊತ ಗೊತ್ತಾಗ್ತಿಲ್ಲೆ!! ಏಕೆಂತೇಃಳ್ರೆ ಕಳ್ದ ಹತ್ತ್ ವರ್ಷಂದ ಇದ್ ಮಾಮೂಲಿ... ಡಿಗ್ರಿ ಮುಗ್ಸಿ ಸಿಕ್ಕಿಸಿಕ್ಕಿದ ಕಡೆ ಎಲ್ಲಾ ಅರ್ಜಿ ಹಾಕಿ ಎಲ್ಲಿನೂ ಕೆಲ್ಸ ಸಿಕ್ಕದೆ ದಿನ ದೂಡ್ದ್.. ಈಗನ ಕಾಲಲಿ ಡಾಕ್ಟ್ರ್ , ಇಂಜಿನಿಯರ್ ರೋಡ್ ರೋಡ್ ಗೆ ಒಬ್ಬೊಬ್ಬನಾಂಗೆ ಒಳೊ..ಡಿಗ್ರಿ ಮಾಡ್ದವೆಲ್ಲಾ ಬುಗ್ರಿ ತಿರ್ಗಿಸ್ತೊಳೊ... ಇನ್ನ್ ಹ್ಯಾಪಂಗೆಲ್ಲಿಂದಾ ಕೆಲ್ಸ ಸಿಕ್ಕುದುತ ಕುಂಞತ್ತೆ ಕಡೆಂದ ಟಾಂಟ್ ಹೇಳ್ಸಿಕಂಡದ್.. ಊರ್ ಲೇ ಗೊಬ್ಬರ ಹೊರ್ದಕ್ಕಿಂತ ಗ್ಲಾಸ್, ಪ್ಲೇಟ್ ತೊಳ್ದರೂ ಆದು.. ಬಾಂಬೆಗೆ ಓಡಿ ಹೋನೆತ ನೆನ್ಸಿ ಮನೆ ಬುಟ್ಟದ್.. ಕಡೆಗೆ ಯಾರ್ ಯಾರೋ ಏಜೆಂಟ್ಗಳ ಕಾಲ್ ಹಿಡ್ದ್, ಯಾರ್ಯಾರೋ ಕಡೆ ಸಾಲ ಮಾಡಿ, ಇದ್ದ ಹೊಡಿ ಜಾಗೆನ ಅಡವಿಸಿ ಕತಾರ್ ಗೆ ಎತ್ತಿದ್...ಆಚೆಕರೆ ಸಂಣಪ ಜಾಗೆ ಮಾರಿ ದುಬೈ ಹೊರ್ಟಳತ ನಂಜಿಲಿ ಕೊಕ್ಕೆ ಮಾತಾಡ್ದ್... ಅರಬ್ ಲಿ ಯಾವ್ದೇ ದೇಶಲೇ ಇದ್ದರೂ ಊರ್ನವ್ಕೆ ಮಾತ್ರ ದುಬೈ ಒಂದೇ ಅಲ್ಲ??!! ಇದೆಲ್ಲಾ ತಲೆಲಿ ಸುತ್ತಿಕಂಡಿರ್ಕಾಕನನೇ ಏರ್ ಪೋರ್ಟ್ಂದ ಹೊರಗೆ ಬಂದಾತ್... ತಮ್ಮ ಸತೀಶ ಅಲ್ಲೇ ಕಾಯ್ತುಟ್ಟು... ಅವನ ಕಣ್ಣೋ.. ಅಣ್ಣನ ಮೋರೆ ನೋಡ್ದು ಬುಟ್ಟು  ದುಬೈಂದ ಬರವನ ಬ್ಯಾಗ್ ಎಷ್ಟ್ ದೊಡ್ದದುಟ್ಟುತ ಕಣ್ಣ್ ಲೇ ಲೆಕ್ಕ ಹಾಕಿದೆ!!

                  ಇಜ್ಜಲ್ ಕರೆಂದ ಹತ್ತಿ ಬಂದವನ ಅವನೇ ಕಟ್ಟ್ ಸಿದ ಮನೆ ಕರ್ದ್ ಕುದ್ರಿಸಿಕಂಡರೂ ಒಳಗೆ ಬಿಸಿ ಮಾತ್ರ ತಾರಾಮಾರ. ದುಬೈಲಿ ಪೊಯ್ಯ ಹೊತ್ತುವಂಥ ಬಿಸ್ಲಿದ್ದರೂ ಹುಟ್ಟಿ ಬೆಳ್ದ ಊರುನ ಬಿಸಿ ಮಾತ್ರ ಯಾಕೋ ತಡ್ಕಂಬಕೆ ಭಂಗ ಆಗ್ತುಟ್ಟು... ಹಾಲ್ ಕೊಟ್ಟು ಸಾಂಕಿದ ಅವ್ವನೇ ಬೆನ್ನ್ ಹೊಡಿಯಾಗುವಾಂಗೆ, ಕುಂಡೆ ಹಣ್ಣಾಗುವಾಂಗೆ ಪೊಳಿ ಕೊಟ್ಟಾಂಗೆ ಆತ್!! (ತಪ್ಪೂ ಆಗುಟು.. ತಲೆಗೆ ಹೊಯ್ದ ನೀರ್ ಕಾಲ್ ಗೆ ಬಂದೇ ಬರೊಕಲ್ಲ??). ಮಾರ್ನೆ ದಿನಂದ ಸುರು... ಕುಂಞಪ್ಪನ ಮನೆಲಿ ದೆವ್ವದರ್ಕೆ, ದೊಡ್ಡತ್ತೆನವರ್ಲಿ ಕೋಲ, ಶಾಲೆಮಾವನಲ್ಲಿ ಕಲಾಯ, ಕುಂಞಿ ಬಾವನ ವೀಳ್ಯಶಾಸ್ತ್ರ, ಅಚ್ಚುನ ಮೊದ್ರೆಂಗಿ, ಅಣ್ಣಿನ ಮೊದ್ವೆ... ಹಿಂಗೇ... ನಾವು, ನಮ್ಮವುತ ನಾಕ್ ಜನ ಸಿಕ್ಕುವೆತ ಹೇಳ್ದಲ್ಲಿಗೆಲ್ಲಾ ಹೊರ್ಟದಷ್ಟೇ. ಎಲ್ಲಿ ಹೋದರೂ ಒಂದೇ ಪ್ರಶ್ನೆ.. ಯಾಗ ಬಂದದ್? ನಂಗೆ ಎಂತ ತಂದಳ? ವಾಪಸ್ ಯಾಗ? ( ಪ್ರಶ್ನೆಂದ ಬಹುಃಶ ತಪ್ಪ್ ಸಿಕಂಡವ ಯಾರೂ ಇಲ್ಲೆ.. ಬಂದವ ಬೇಗ ಊರ್ ಬುಟ್ಟು ಹೋಕುಂತಲೇ ಇವು ಕಾದ್ ಕಂಡಿದ್ದವೆನಾ ಹೆಂಗೆ??). ಬಂದ ಮೂರ್ನೇ ದಿನಕ್ಕೇ ಕನ್ಸ್ ಲಿತಾ ನೆನ್ಸಿಕಣದವು ಮನೆ ಜಾಲ್ ಗೇ ಬಂದೆತ್ತ್ಯೊಳೊ. ಪ್ರಕಾಶ ಬಂದುಟುಗಡ. ನೋಡದೆ ಇರಿಕೆ ಮನ್ಸೇ ತಡ್ತ್ ಲೆತ!! ಬಂದದ್ ಅಂವ ತಂದ ದುಬೈ ಮಾಲ್ ಗೆತ ಪ್ರಕಾಶಂಗಷ್ಟೇ ಗೊತ್ತು!! ಇನ್ನೂ ಮೊದ್ವೆ ಆಗದ ಪ್ರಕಾಶಂಗೆ ಒಂದು ಪ್ರಶ್ನೆಂದ ಇನ್ನೂ ನಿಮೂರ್ತಿ ಇಲ್ಲೆ. ಹೊಸ ನೆಂಟ್ರ್ ಮನಿ ಬಂದೊಳೊನಾ? ಗೂಡೆ ನಿಘಂಟ್ ಆಗುಟಾ?? ಕೇಳ್ದವರೊಟ್ಟಿಗೆಲ್ಲಾ 'ನೋಡ್ತೊಳೆ.. ಇನ್ನೊಮ್ಮೆ ಬಾಕನ ಮೊದ್ವೆ ಆಗಿನೇ ಹೋದು' ಹೇಳಿ ಜಾರಿಕಂಬೊತಿತ್ತ್. ಎಲ್ಲಿ ಹೋದರೂ ಇದೇ ಕಥೆ !! ಎಷ್ಟಾದರೂ "ಮುಡಿಗೆ ಮೂರು ಸೇರ್ ಜಳ್ಳೇಅಲ್ಲ??

                  ದುಬೈಲಿ ಹೊಟ್ಟೆ ಬಾಯಿ ಕಟ್ಟಿ ಎರ್ಪು ಮಾಡಿ ಕಟ್ಟಿಸಿದರ ಎಲ್ಲಾ ಪೂಜಿ ಮನೆಗೆ ಕೊಟ್ಟು ಮನ್ಸಿಲ್ಲಾದ ಮನ್ಸ್ಂದ ಹೊರ್ಟತ್ ಪ್ರಕಾಶ ಹೈದ. ಮತ್ತದೇ ದಿನಚರಿ... ಊರುಲಿ ನೀರಡಿ ಕೊಟೆಗೆನಷ್ಟೇ ಇರುವ ಮನೆ. ದನದ ಮೂಕುಂದ ಪಾವಲಿ ತೆಗ್ಯಕೆ ಆಗ್ತಿದ್ದ ಹೇಸಿಕೆ ಇಲ್ಲಿ ಕೋಳಿ ಫಾರ್ಮ್ ಲಿ ಹೊಲ್ಸ್ ಎತ್ತಿರೂ ಏನೂ ಅನ್ಸ್ ತಿಲ್ಲೆ. ಕೋಳಿ ಹೇಲ್ ಪೂಜಿ ತೆಗ್ಯಕೇ ಹೇಸಿಕೆ ಆಗ್ತಿದ್ದವಂಗೆ ಇಲ್ಲಿ ಟಾಯಿಲೆಟ್ ಕ್ಲೀನಿಂಗ್ ಒಂದ್ ವಿಷಯನೇ ಅಲ್ಲ. ಮನೆ ಹಿಂದೆ ನೀರಡ್ಕೆ ಹೊಂಡದ ಅಡ್ಕೆ ನೋಡ್ರೇ ನಾತ, ಕಕ್ಕಿಕೆ ಬರ್ತಿದ್ದವಂಗೆ ಇಲ್ಲಿನ ವಾಸನೆ ಏನೇನೂ ಅಲ್ಲ. ಊರ್ ಲಿದ್ದವು ಮೊದ್ವೆ, ಮನೆ ಒಕ್ಕ್ ಲ್ ನಾಕ್ ಕಡೆ ಹೋಗಿ ಬಂದರೆ ಇಲ್ಲಿ ಹೇಳಿಕೂ ಯಾರೂ ಇಲ್ಲೆ. ಅವೆಲ್ಲಾ ಕಳ್ಸುವ ಫೋಟೋ ನೋಡಿ ಹೊಟ್ಟೆ ಬೆಂದದೇ ಹೊರ್ತ್ ಮನ್ಸ್ ಗೆ ನೆಮ್ಮದಿ ಎಲ್ಯುಟ್ಟು?? . ಊರ್ ದೇವಸ್ಥಾನಲಿ ಅನ್ನದಾನಕ್ಕೆ ಇವನ ಕೊಡುಗೆ ಬೋರ್ಡ್ ಲಿ ಹೆಸ್ರು ಹಾಕ್ಯೊಳೊಗಡ. ಆದರೆ ಕೊಟ್ಟಂವ ಉಪವಾಸ ಇದ್ದರೂ ಕೇಳಂವ ಇಲ್ಲೆ!! ಮನೆವು ಇಂದ್ ಚಾಯಕ್ಕೆ ಪುಂಡಿ, ಬೊಡ್ರೊಟ್ಟಿತ ಹೇಳ್ರೂ ಇವಂಗೆ ಅದೇ ಒಣ್ಗಿಲ್ ಬ್ರೆಡ್. ಬ್ಯಾಪರ ಕಾಯಿಗೆ ಗಾಂಧಾರಿ ಮೆಣ್ಸ್ ಹಾಕಿ ಹಿಡ್ದ ಹಳ್ಳದ ಮೀನ್ ಗೈಪುಗಡ. ಇವಂಗೆ?? ಮನೆಲಿರ್ಕಾಕನ ಜ್ವರ ಬಂದರೆ ರಘುರಾಮ ಡಾಕ್ಟ್ರ ಕೆಂಪು ಸಿರಪ್ ನೊಟ್ಟಿಗೆ ಅವ್ವ ಕಾಸುವ ಒಳ್ಳೆಮೆಣ್ಸ್ ಕಸಾಯ ಒಂದೇ ಸಾಕ್. ಇಲ್ಲಿ ನೋಡ್ರೆ ಕುಡಿಯಕೆ ಬಿಸಿ ನೀರೂ ಅವನೇ ಕಾಸಿಕಣೊಕು!! ಗಂಡ್ ಮಕ್ಕ ಮಾಯ್ಪು ಹಿಡ್ದರೆ ಮೀಸೆ ಬಾದುಲೆತ ಅಯ್ಯೆ ಗುಡ್ಸಿಕೇ ಬುಡದಿದ್ದರೂ ಇಲ್ಲಿ ಅದೇ ಮಾಯ್ಪೇ ಇವನ ಕೈಲಿ ಗುಡ್ಸ್ ಸಿದೆ. ಯಜಮಾನ ಬೇರೆ ಆತ್, ಇದ್ದ ಕೆಲ್ಸನೂ ಹೋತ್, ಊರುಲಿ ಯಾರಿಗೂ ಹೇಳದೆ ಬೇರೆ ಕೆಲಸ ಹುಡ್ಕ್ಯಂಡದೂ ಆತ್. ದಿನಕ್ಕೊಂದು ಹೊಸ ಕಾನೂನುಂದ ಇದರ್ನೂ ಯಾಗ ಕಳ್ಕಂಡದೆತ ಗೊತ್ಲೆ!! ಗಟ್ಟಿಯಾಗಿ ಮರ್ಡುವ ಹಾಂಗೆನೂ ಇಲ್ಲೆ..ಏಕೆ? ಲೋಕದ ಕಣ್ಣ್ ಗೆ ಇಂವ ಗಂಡ್ ಸ್!! ವಾರದ ಅಕೇರಿಲಿ ದಾರಿಲಿ ಹೋಕನ ಬಿರಿಯಾಣಿನ ಮೂಕಳ್ಮೆ ನೆತ್ತಿಗೆ ಏರಿರೂ ಮನ್ಸ್ ಕೇಳ್ದು ಮಾತ್ರ ತಣೆನ ಗಂಜಿನೂ... ಇಟ್ಟಿ ಹಾಕಿದ ಕುಡು ಪೊಜ್ಜಿನನೂ!!
(ದುಬೈ ಹೈದಂಗೊಂದ್ ದುರ್ಬೀನ್!!!:An Arebhashe Articles of Gowdas)


  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು




4 comments:

  1. ಬಾರಿ ಲಾಯ್ಕ್ ಆವುಟು👌👍☺

    ReplyDelete
    Replies
    1. ಧನ್ಯವಾದಂಙ ತಮ್ಮ ..

      Delete
  2. ಬಾವ ಬಾರಿ ಪೊವ್ವ ಆವ್ಟು...

    ReplyDelete
  3. ಧನ್ಯವಾದಂಙ ಕುಂಞಿಬಾವ

    ReplyDelete