google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಪಾಚು ಮುತ್ತು ಕೊಟ್ಟುಟುಗಡ!!!

https://arebhasheminpuli.blogspot.com/2017/08/blog-post_11.html

Tuesday 6 March 2018

ಪಾಚು ಮುತ್ತು ಕೊಟ್ಟುಟುಗಡ!!!


                         ಬೊಡ್ರೊಟ್ಟಿಗೆ ಬಂದ ಕಡ್ಯಕೆ ಮಿಕ್ಸಿಗೆ ಹಾಕಿ ತಿರ್ಗಿಸಿಕಂಡ್ ನಿತ್ತ ತಂಗಮಕ್ಕಂಗೆ, ಬಂದ ನೀರಾಗಿ ನೀರ್ ದೋಸೆ ಹದಕ್ಕೆ ಬಂದದ್ ಗೊತ್ತಾದ್ ಕರೆಂಟ್ ಹೋಗಿ ಮಿಕ್ಸಿ ಆಫ್ ಆಕನನೇ!! ಯಾವುದೋ ಆಲೋಚನೆಲಿ ಮುಳ್ಗಿದವ್ಕೆ ಮಿಕ್ಸಿ ಆಫ್ ಮಾಡಿಕೆ ನೆನ್ಪೇ ಇಲ್ಲೆ. ಮತ್ತೇನಲ್ಲ... ಮೊನ್ನೆ ಬಾಲ ಹೈದನ ಮೊದ್ರೆಂಗಿಲಿ ಲಲ್ತಕ್ಕ ನನ್ನ ನೋಡಿ ಯಾಕೆ ಹುಳ್ಳಂಗೆ  ನೆಗಾಡ್ತೊತ??!! ಕಡೆಗೂ ನೈಸ್ ಆದ ಬಂದನ ಹೆಂಗೆ ಹೆಂಗೋ ಹೊಯಿದ್, ಎಳ್ಕದ ಹಿಟ್ಟ್ ಕೆರ್ದ್ ತೆಗ್ದ್ ನಾಯಿಗೆ ಇಟ್ಟವೇ ಸೀದ ಹೋಗಿ ಲಲ್ತಕ್ಕಂಗೆ ಫೋನ್ ಮಾಡಿಯೇ ಬುಟ್ಟೊ.. "ಎಂಥ ಲಲ್ತಕ್ಕ.. ನೀವ್ ಮೊನ್ನೆ ಮೊದ್ರೆಂಗಿಲಿ ನನ್ನ ನೋಡಿ ಹಂಗೆ ನೆಗಾಡ್ದ್ ಎಂತಕೆ? ನಾ ಏನ್ ಮಾಡ್ಯಳೆ??" "ಅಲ್ಲ ತಂಗಮಕ್ಕ... ಊರಿಡೀ ವಿಶ್ಯ ಗೊತ್ತಾಗುಟು... ಪೆರ್ಜೆಲಿ ಗೌಡ್ರ ಕುಟುಂಬಗಳ ಕ್ರಿಕೆಟ್ ಮ್ಯಾಚ್ ಲಿ, ಚಾಕಟೆ ಮರದ ಹಿಂದೆ ಅಮ್ಮುಣಿಗೆ ಪಾಚು ಮುತ್ತು ಕೊಟ್ಟುಟುಗಡ!! ಅವ್ಕೆ ಮೊದ್ವೆ ನಿಘಂಟ್ ಆಗುತು.. ಆದರೂ.. ಹಿಂಗೆಂತ.. ನಾಕ್ ಜನ ಸೇರುವಲ್ಲಿ ಎಂತ!! ನೀವ್ಗೆ ಗೊತ್ತಾಕೆ ಇನ್ನ್ ಸುದ್ದಿ ಪೇಪರ್ ಲಿ ಹಾಕೊಕೊ ಏನೋ??" ಅಷ್ಟೇ..  ತಂಗಮಕ್ಕ ಫೋನ್ ಕುಕ್ಕಿದ ರಭಸಕ್ಕೆ ಹೊರಗೆ ಕಾಪು ಕುದ್ದಿದ್ದ ಬೆಳ್ಳೆ ಹೇಂಟೆ ಹದ್ಕಿ ಬೀತ್.


                           ಕಟ್ಟಂದ ನೀರ್ ಬುಡಿಕೆ ಹೋಗಿದ್ದ ಲಚ್ಚಣ್ಣ  ಮನೆಗೆ ಬಂದರೆ ಕಾಲಡಿಗೆ ಸಿಕ್ಕಿದ  ನಾಯಿ ಮೊರಿ ಮೆರ್ರೇಂತ ಓಡ್ತ್. ಆಗಳೇ ನೆನ್ಸಿದೊ.. ಏನೋ ರಗಳೆ ಉಟ್ಟೂಂತ!! ನೆತ್ತಿ ಕೊಡಿಗೆ ಬೆಣ್ಣೆ ಹನ್ಕ್ ಸಿಕಂಡ ಕೊತ್ತಿಮೊರಿನಾಗೆ ಅವರಷ್ಟಕ್ಕೆ ಸುಮ್ಮನಿರುವ ತಂಗಮಕ್ಕ ಇಂದ್ ನೋಡ್ರೆ ಬೀಲ ಸುಟ್ಟ ಕೊತ್ತಿನಾಂಗೆ ಅತ್ತಂದಿತ್ತ ಇತ್ತಂದತ್ತ ಹೋಗ್ತೊಳೊ.. ಒಟ್ಟಿಗೆ ಸುಡು ಸುಡುತ ಸ್ವಗತ ಬೇರೆ!! ಹೆಣ್ಣ್ ಅವಸ್ಥೆ ನೋಡಿ "ಎಂಥಯಾ ನಿನ್ನ ಅವಸ್ಥೆ... ನಿನ್ನ ಕೆಲ್ಸದ ಹೆಂಗ್ ಸ್ ಪುನಃ ಪದ್ರಡ್ ಹಾಕಿತಾ ಹೆಂಗೆ?" ಕುಸಾಲ್ ಲಿ ಕೇಳ್ದಕ್ಕೆ "ನಿಮ್ಮ ಕುಸಾಲ್ ಗಿಷ್ಟ್ ಕಿಚ್ಚಿ ಹೆಟ್ಟಿತ್.. ಎಲ್ಲಾ ಸಸಾರನೆ ನೀವ್ಗೆ!! ನಿಮ್ಮ ಮಂಙನ ಪುರಾಣ ಊರಿಡೀ ಗೊತ್ತಾಗುಟು.. ನೀವೋ.."  ಮೂಕು ಮುಸುಂಡ್ ಸೆರ್ರ್ಂಗ್ ಲಿ ಉಜ್ಜಿಕಂಡ್ ಮರ್ಡಿಕೆ ಸುರು ಮಾಡ್ದೊ. ಯಾಗೋಳು ನನ್ನ ಮಂಙತ ಹೇಳುವ ಆಳ್ ಇಂದ್ ನಿಮ್ಮ ಮಂಙತ ಹೇಳ್ದು ಕೇಳ್ರೆ (ಎಲ್ಲಾ ಅಯ್ಯೆಕಳೂ ಹಂಗೆನೇ ಅಲ್ಲನ? ಹೈದ ಕ್ಲಾಸ್ ಗೆ ಫಸ್ಟ್ ಬಂದರೆ ಅವರ ಮಂಙ. ಫೈಲಾದರೆ ಅಪ್ಪನ ಮಂಙ) ಏನೋ ವಿಷಯ ಗಂಭೀರತ ಅನ್ಸಿ.. ಒಕ್ಕಿ ಒಕ್ಕಿ ಕೇಳ್ದರ್ಲಿ ಲಚ್ಚಣಂಗೆ ಅರ್ಥ ಆದ್ ಒಂದೇ ವಿಷಯ... ಅಮ್ಮುಣಿಗೆ ಪಾಚು ಮುತ್ತು ಕೊಟ್ಟುಟುಗಡ!!


                          ಆತಪ್ಪ... ಈಗದ ಹೈದಂಗ... ಯಾರೂ ಮಾಡದ್ದೇನ್ ಅಲ್ಲಲ್ಲ.. ಹೆಣ್ಣ್ ಸಮಾಧಾನ ಮಾಡಿಕೆ ನೋಡ್ರೆ ತಂಗಮಕ್ಕಂದ್ ಒಂದೇ ಹಠ... "ಮೊದ್ವೆಗೆ ಮೊದ್ಲೇ ಹಿಂಗೆ ಇದ್ದರೆ ಹೆಂಗೆ.. ಇನ್ನ್ ಅಮ್ಮುಣಿ ಹೆಂಗೆ ಇರ್ದು..ಅದ್ಕೆ ಆರ್ ಸೊಯೆ ಬೇಡ.. ನಂಗೆ ನಾಕ್ ಜನ ಇರುವ ಕಡೆ ಹೋಕೇ ನಾಚಿಕೆ ಆದೆ.. ನಡಿನಿ... ಪೋಯಿ... ದ್ಯಾಪಣ್ಣನಲ್ಲಿಗೆ!!" ಗಂಡಂಗೆ ಕಂಬೈನೂ ಸರಿ ಕಟ್ಟಿಕಂಬಕೆ ಬುಡದೆ ಎಳ್ಕಂಡೇ ಹೋದೊ. ದ್ಯಾಪಣ್ಣನೊಟ್ಟಿಗೆ ಏನ್, ಒಳ್ಳದ್ ಕೇಳಿಕೆ ಮೊದ್ಲೇ ನೀರ್ ಚೊಂಬ್ ತಂದ ಭಾವೀ ಸೊಸೆ ಅಮ್ಮುಣ್ಣಿಗೆ ಸೀದ ಕೇಳಿಯೇ ಬುಟ್ಟೊ ತಂಗಮಕ್ಕ.. "ನಿಂಗೆ ಪಾಚು ಮುತ್ತು ಕೊಟ್ಟುಟುಗಡ!!?? ಹೌದ!! " ಅದ್ಕೆ ಒಮ್ಮೆ ಏನ್ ಹೇಳೊಕುತ ಗೊತ್ತಾಗದೆ ತಿರ್ಗಿ ಓಡ್ದರ್ಲಿ ಕೈಲಿದ್ದ ನೀರ್ ಚೊಂಬ್ ಬಾಗ್ ಲ್ ದಾರಂದಕ್ಕೆ ಹೆಟ್ಟಿ ಒಟ್ಟಿಯೇ ಹೋತ್!! ಕಡೆಗೆ ದ್ಯಾಪಣ್ಣ ನೇ ಒಳಗೆ ಹೋಗಿ ಮಗಳ ಕರ್ಕಂಡ್ ಬಂದರೆ ಕೈಲಿ ಒಂದ್ ಸಣ್ಣ ಕಟ್ಟ್ ಉಟ್ಟೂ.. "ಅತ್ತೇ .. ಅವು ಮೊನ್ನೆ ಹೈದ್ರಾಬಾದ್ ಹೋಗಿದ್ದೊಲ್ಲ.. ಮುತ್ತು ಬೇಕುತ ಹೇಳಿದ್ದೆ... ಇದರ್ ನೇ ಅವು ಕೊಟ್ಟದ್.. ಬರುವ ವಾರ ಮುಳಿಯಕ್ಕೆ ಕೊಟ್ಟ್ ಲಾಯಿಕ್ ಒಂದ್ ಸರಮಾಲೆ ಮಾಡ್ಸಿಕಣೆ!!" ಇದರ ಕೇಳಿ ಲಚ್ಚಣ್ಣನ್ನೂ ಸೇರಿ ಮನೆವೆಲ್ಲಾ ಅಡ್ಡಡ್ಡಾ ಬಿದ್ದ್ ನೆಗಾಡಿಕೆ ಸುರು ಮಾಡ್ರೆ ತಂಗಮಕ್ಕಂಗೆ ನಾಚಿಕೆಲಿ ಎಂತ ಹೇಳೊಕುತ ಗೊತ್ತಾಗದೆ ಹ್ಯಾಪಮೋರೆಲೇ ನೆಗಾಡಿಕಂಡ್ ಕುದ್ದೊ.
(ಪಾಚು ಮುತ್ತು ಕೊಟ್ಟುಟುಗಡ!!!: An Arebhashe Article of Gowdas)




  • ಡಾ.ಪುನೀತ್ ರಾಘವೇಂದ್ರ ಕುಂಟುಕಾಡು
  • No comments:

    Post a Comment