google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): June 2017

https://arebhasheminpuli.blogspot.com/2017/08/blog-post_11.html

Friday 16 June 2017

ಪಾಚುನ ಕಟ್ಟ!!!


                      "ಕಟ್ಟ" ಹೇಳ್ರೆ ಅರೆಭಾಷೆಲಿ "ಒಟ್ಟಿಗೆ ಸೇರ್ಸಿ ಇಸುದು" ಅಂತ ಅರ್ಥ. ಕನ್ನಡಲಿ ಹೇಳ್ದಾದರೆ "ಕಟ್ಟು".  ಅಂದರೆ ಸೌದೆಹೊರೆ, ಹುಲ್ಲು ಹೊರೆ ಇದ್ಕೆ ಸೌದೆ ಕಟ್ಟ, ಹುಲ್ಲು ಕಟ್ಟ ಅಂತ ಹೇಳುವೆ. ಇನ್ನೊಂದು ನೀರ್ ಹರ್ದ್ ಹೋದರ ತಡೆಯಕೆ ಹಾಕುದು, ಅದೇ ನೀರ್ ಕಟ್ಟ(ಶುದ್ಧ ಕನ್ನಡಲಿ  ಒಡ್ಡು/ ಕಿಂಡಿ ಅಣೆಕಟ್ಟು). ಇನ್ನ್ ಕೋಳಿಕಟ್ಟ ನೀವ್ ಗೆಲ್ಲಾ ಗೊತ್ತೇ ಉಟ್ಟು!!! ನಾ ಈಗ ಹೇಳಿಕೆ ಹೊರ್ಟದ್ "ಪಾಚುನ ನೀರ್ ಕಟ್ಟ". ಊರೊಳಗೆ ಪ್ರಗತಿಪರ ಕೃಷಿಕ ಹೆಸ್ರ್ ಮಾಡ್ದ ನಮ್ಮ ಪಾಚು, ಕೃಷಿಲಿ ಬಗೆ ಬಗೆ ಪ್ರಯೋಗ ಮಾಡ್ತಿತ್ತ್. ಹಡ್ಲ್ ಬಿದ್ದ ಗದ್ದೆಗಳೆಲ್ಲಾ ಟಿಲ್ಲರ್ ಹೊಡ್ಡ್ ವರ್ಷಲಿ ಮೂರು ಬೆಳೆ ತೆಗೆವ ಆಸೆ. ಆದರೆ ಸುಗ್ಗಿ ಬೆಳೆಗೇ ನೀರ್ ಅಲ್ಲಿಂದಲ್ಲಿಗೆ, ಇನ್ನ್ ಏಣೆಲ್ ಗೆಲ್ಲಿಂದ?? ಕಾರಣ ಆಧುನೀಕತೆ!! ಅದೇಂಗೆ?? ಹಿಂದೆಲ್ಲಾ ಚೊಂಟೆಲಿ ನೀರ್ ಗೋಂಚ್ ತಿದ್ದೊ. ಈಗ ಕರೆಂಟ್ ಪಂಪ್ ಬಂದ್ ನೀರ್ ಆರ್ಕಾಕನ ಮುಟ್ಟ ಪಂಪ್ ನಿಲ್ಸುವ ಗೊಡವೆನೇ ಇಲ್ಲೆ ( ಮೆಸ್ಕಾಂನವು ಸಿಂಗಲ್ ಫೇಸ್ ಕೊಟ್ಟರೆ ಮಾತ್ರ ಪಂಪ್ ಆಫ್ ಆದು!!). ಹಂಗಾಗಿ ಹಳ್ಳಗಳ್ಲಿ ಡಿಸೆಂಬರ್ ತಿಂಗಳ್ಲೇ ಪಾರೆ ಕಲ್ಲ್ ಎದ್ದ್ ಕುದ್ದಿದ್ದವೆ. ಮಾರ್ಚ್ ತಿಂಗಳ್ಲಿ 3 ದಿನ ಮಳೆ ಬಂದರೆ ಸಾಕ್. ಹಳ್ಳಲಿ ನೀರ್ ತುಂಬಿ ಹರ್ದದೆ. ಮಳೆ ನೀರಲ್ಲ!? ಯಾರೂ ಪಂಪ್ ಸ್ಟಾರ್ಟ್ ಮಾಡುದ್ಲೆ. ಅದರ್ರ್ಂದಾಗಿ!! ಆಗ ನಮ್ಮ ಪಾಚುಗೆ ಹೊಳ್ದ ಐಡಿಯಾನೆ ಗದ್ದೆ ಕರೆಲಿದ್ದ ಚೋಡಿಗೆ " ಕಟ್ಟ ಕಟ್ಟುದು".

                 ನೆರೆಕರೆಯವರೊಟ್ಟಿಗೆ ಎಲ್ಲಾ ಕೇಳಿ ಕಟ್ಟ ಹಾಕುವ ದಿನ ನಿಘಂಟ್ ಮಾಡ್ಯಾತ್. ಆಕಿಲೇಂತ ಹೇಳ್ದವು ಯಾರೂ ಇಲ್ಲೆ. ಎಲ್ಲವ್ಕೂ ನೀರ್ ಸಿಕ್ಕಿದಲ್ಲೇಂತ ಕುಸಿನೊಟ್ಟಿಗೆ ಕೆಳಗೆಡೆನ ತೋಟಕ್ಕೆ ನೀರ್ ಚೋಂಪ್ ಕೆಲ್ಸ ಒಳ್ದದೆ ಎಂಬ ಸಮಾಧಾನ. ಸಿಡ್ಲ್ ಹೊಡ್ದ್ ಸತ್ತ, ಮುಂಡ್ ತಿರಿ ಆಗಿ ಕುಬೆ ಚೊಯ್ಯ್ಂಗಲೆ ಆದ ಕೊಮ್ಮ್ ಗಳೆಲ್ಲಾ ಸಿಗ್ದ್ ಗಟ್ಟಿ ಮುಟ್ಟ್ ತಟ್ಟೆ ಮಾಡಿಕಂಡೊ. ಕೆಲ್ಸಕ್ಕೆ ಬಂದವ್ಕೆಲ್ಲ ಕೋಳಿ ಗೈಪುನ ಗಮ್ಮತೂ ಆತ್. ಒಟ್ಟಿಗೆ ಹನೀಸ್ ಹನೀಸ್ ಗ್ಯಾರ್ದಣ್ಣ್ ದೂ!! ಅಂತೂ ಭರ್ಜರಿ ಕಟ್ಟ ಕಟ್ಟಿ ಗದ್ದೆ, ತೋಟಗಳಿಗೆ ನೀರ್ ಬುಟ್ಟೊ. ಅದರೊಟ್ಟಿಗೆ ನಮ್ಮ ಪಾಚುನ ದೆಸೆನೇ ಬದ್ಲಾತ್.. ಕೃಷಿ ಜಾಸ್ತಿ ಆಗೀಂತ ನೆನ್ಸಿದರಿಯಾ... ಖಂಡಿತಾ ಅಲ್ಲ... ನಮ್ಮ ಪಾಚು ಹಾಕಿದ  "ಫೇಸ್ ಬುಕ್ ಫೋಟೋ"ನೇ ಕಾರಣ!!??


                 ಫೇಸ್ ಬುಕ್ ಲಿ ಬಂದ ಫೋಟೋ ನೋಡಿ ಪಾಚುನ ಕಟ್ಟಕ್ಕೆ ಸುಮಾರ್ 'ಲೈಕ್' ಒಟ್ಟಿಗೆ ಒಂದಷ್ಟ್ ಶುಭಹಾರೈಕಗ ಬಾತ್. ಅದರೊಟ್ಟಿಗೆ ಒಂದ್ ಗೂಡೆನ "ಫ್ರೆಂಡ್ ರಿಕ್ವೆಷ್ಟ್" ಕೂಡ!! ಗೂಡೆ ಹಂಚಿಮನೆ ಲಚ್ಚಣ್ಣನ ಎರಡ್ಣೇ ಮಗ್ಳ್ ಅಮ್ಮುಣಿ. ಗೂಡೆ ಎಂಎಸ್ ಡಬ್ಲ್ಯೂ ಓದಿ ಸಮಾಜ ಕಾರ್ಯಲಿ ಇರವ್ಳು. ಪಾಚುನ ಸಮಾಜಮುಖಿ ಕಾರ್ಯನೋಡಿ ಅಮ್ಮುಣಿಗೂ ಅವನ ಬಗ್ಗೆ ಒಳ್ಳೆ ಮನ್ಸ್ ಅಷ್ಟೆ. ಫೇಸ್ ಬುಕ್ ಪರಿಚಯ ದಿನ ಆದಷ್ಟ್ ಗಟ್ಟಿ ಆಕಂಡ್ ಬಾತ್. ಮನೆಯವ್ಕೂ ಹೇಳಿ ಹೊಸ ನೆಂಟಸ್ತಿಕೆ ಶುರ್ ಮಾಡೋಣೋಂತ ನೆನ್ಸಿದೊ. ಆದರೆ ಭೇಟಿ ಆಕೊಲ್ಲಾ??  ಅಂತೂ ಪಾಚುನ "ಫಸ್ಟ್ ಡೇಟಿಂಗ್" ಫಿಕ್ಸ್ ಆತ್. ಎಲ್ಲರಾಂಗೆ ಚೆನ್ನಕೇಶವ ದೇವಸ್ಥಾನಲೋ, ಆಲ್ ಸೀಸನ್ ಹೋಟೆಲ್ಲೋ ಅಲ್ಲ. ಪರಿಚಯಕ್ಕೆ ಕಾರಣ ಆದ "ನೀರ್ ಕಟ್ಟದ ಕರೆಲಿ"!!! ಸರಿ... ನಮ್ಮ ಪಾಚುನೂ, ಅಮ್ಮುಣಿನೂ ಕಟ್ಟದ ಹಕ್ಕಲೆ ಎತ್ತಿದೊ. ಅಲ್ಲಿಗೆತ್ತಿ ನೋಡ್ರೆ ಎಂತ? ಕತ್ತಲೆನೆ ರಣ ಮಳೆಗೆ ನೀರ್ ತುಂಬಿ, ಕಟ್ಟ ಒಡ್ದ್, ಹಾಕಿದ್ದ ಕೊಮ್ಮ್ ತಟ್ಟೆ ಎಲ್ಲಾ ಬೊಳ್ಳಲಿ ಹೋಗುಟು!! ಅಲ್ಲಿದ್ದ ಎರ್ಡ್ ಎಸ್ಂಡ್ ಕೊಂಬಲಿ ಒರ್ಂಗಿಸಿ ಮೋಟೆ ಸೇರ್ದೊ. ಪಾಪ ಪಾಚು... ಮನ ಮೆಚ್ಚಿದ ಗೂಡೆಗೆ ತನ್ನ ಕಾರ್ಯನ ತೋರ್ಸಿಕೆ ಹೋಗಿ ಹೊಗ್ಳಿ ಹೊಗ್ಳಿ ಅಗ್ಳ್ ಹರ್ಂಡಿದಾಂಗಾತ್!! ಆದರೂ ಪರ್ವಾಗಿಲ್ಲೆ... ಹೈದ,ಗೂಡೆಗ ಹೊಸ ಜೀವನ ಕಟ್ಟುವ ಬಗ್ಗೆ ಮಾತಾಡಿಕಣ್ತಾ ದೊಡ್ಡವ್ಕೆ ತಿಳ್ಸಿಕೆ ಹೊರ್ಟೊ

🖋ನಿಮ್ಮ ಹೈದ 

Thursday 15 June 2017

ದ್ಯಾವಂಮಕ್ಕನ ಸೊಸೆ.... ( An Arebhashe Article of Gowdas )


                 ಓಟೆಕಜೆ ದೊಡ್ಡಮನೆಗೆ ನಮ್ಮ ದ್ಯಾವಂಮಕ್ಕ ಸೊಸೆ ಆಗಿ ಬಾಕನ ಅವ್ಕಿನ್ನೂ ಪ್ರಾಯ 16 ನಡಿತಿತ್ತಷ್ಟೇ. ಕಟ್ಟಪುಣಿ ತ್ಯಾಂಪಣ್ಣನ 6 ಮಕ್ಕಳ್ಲಿ ಸುರುನಂವೇ ದೇವಮ್ಮ...ಊರವ್ಕೆಲ್ಲಾ "ದ್ಯಾವಂಮ್ಮ"!! ಆಗಲೇ ಪ್ರಾಯ 40ಕ್ಕೆ ಹಕ್ಕಲೆ ಎತ್ತಿದ್ದ ಓಟೆಕಜೆ ಭೋಜಪ್ಪನ ಮೊದ್ವೆ ಆಕೆ ಏನೇನೂ ಮನ್ಸಿಲ್ಲದ್ದಿದ್ದರೂ ಅವಳ್ಂದ ಮತ್ತೆ ಹುಟ್ಟಿದ 4 ತಂಗೆಕಳ ಮೋರೆ ನೋಡಿ, ಒಟ್ಟಿಗೆ ತ್ಯಾಂಪಣ್ಣನ ಬಡ್ತನನ ಕಂಡ್ ಗಟ್ಟಿ ಮನ್ಸ್ ಲಿ ಓಟೆಕಜೆ ಸೇರ್ದೊ. ಮೊದ್ವೆ ಆಗಿ ಎರ್ಡ್ ವರ್ಷಕ್ಕೆ ಹುಟ್ಟಿದವಂನೇ  ಮನೋಜ್. ಹುಟ್ಟಿದ 6 ತಿಂಗಳಿಗೇ ಅವಂನ ದೆಸೆನೋ ಅಲ್ಲಾ ಭೋಜಪ್ಪಣ್ಣನ ಆಯಸ್ಸೇ ಅಷ್ಟಿದ್ದದೋ ಗೊತ್ಲೆ... ದೊಡ್ಡ ಹಳ್ಳಕ್ಕೆ ಮೀನ್ ಕಡ್ಯಕೆ ಹೋದವ್ ಕಯಲಿ ಕಂತಿ ಸ್ವರ್ಗ ಸೇರ್ದೊ. ಇದ್ದ ಒಬ್ಬನೇ ಮಂಙನ 'ಬೆಸೆಗೆಲಿಸಿರೆ ಮೊಸಿ ಹಿಡಿದು, ನೆಲಲಿ ಬುಟ್ರೆ ಕೇರ್ದ ಸೆಗ್ಣಿ ಅಂಟುದು'ತೇಃಳುವಾಂಗೆ ಅಯ್ಯೆ ಅಪ್ಪ ಎರ್ಡೂ ಆಗಿ ಸಾಂಕಿದೊ ದ್ಯಾವಂಮಕ್ಕ. ಓದುದರ್ಲೂ ಉಶಾರಿದ್ದ ಮನೋಜ ಇಂಜಿನಿಯರೂ ಆತ್. ಕೆಲ್ಸ?? ನಮ್ಮ ಎಲ್ಲಾ ಹೈದ, ಗೂಡೆಗಳಾಂಗೆ ಬೆಂಗ್ಳೂರ್ಗೆ ಎತ್ತದೆ ಕೃಷಿ, ಮನೆಕಡೆ ನೋಡಿಕಂಡಿತ್ತ್. ಅತ್ತೆಗೊಂದು ಕಾಲ ಸೊಸೆಗೊಂದು ಕಾಲದಾಂಗೆ ನಮ್ಮ ದ್ಯಾವಂಮಕ್ಕಂಗೂ ನಾನೂ ಅತ್ತೆ ಆಗಿ ಮೆರೆಯೊಕೂಂತ ಆಸೆ ಚಿಗುರ್ತುಟ್ಟು. ಸುರಾತ್... ಮಂಙಂಗೆ ಹೆಣ್ಣ್ ಹುಡ್ಕಿಕೆ!!!
                                  
                  ನಾಕ್ ಕಡೆ ವಿಚಾರ್ಸಿ ಹಳೇ ನೆಂಟ್ರ್ ಗಡಿಕಲ್ಲ್ ಶೇಷಪ್ಪರ ಮಗ್ಳೊಂದಿಗೆ ಕುರುಂಜಿಯವ್ರ ಹಾಲ್ ಲಿ ಭರ್ಜರಿಯಾಗಿ ಮೊದ್ವೆನೂ ಕಳ್ತ್. ತೆಳ್ಳಂಗೆ, ಬೆಳ್ಳಂಗೆ ತೊಳ್ದ ಮೊಟ್ಟೆನಾಂಗಿರುವ ಗೂಡೆ ಓದಿದ್ ಫುಲ್ ಚರ್ಚ್ ಶಾಲೆಲೇ. ಅದೇನೋ ಗೂಡೆ ಮನೆ ಕಡೆ ಇದ್ದವೂ, ಆರಾಮಲಿ ಇರಕ್ ಅಂತ ನೆನ್ಸಿ ಒಪ್ಪಿತ್ತ್. ಆದರೆ ಅತ್ತೆ ಬುಡೊಕಲ್ಲ?? ಕೆಲ್ಸ ಮಾಡ್ದಷ್ಟೂ ಮುಗ್ಯಕಿಲ್ಲೆ.... ದ್ಯಾವಂಮಕ್ಕಂಗೆ ಅದ್ ಮಾಡ್ದ್ ಸಮಾಧಾನನೂ ಆಕಿಲೆ... ಆಚೆ ಮನೆ ಸುನಂದಕ್ಕನೊಟ್ಟಿಗೆ ಬಾಯಿ ಬುಟ್ಟ್ ಹೇಳ್ದೊ ಕೂಡ.."ಅಲ್ಲಯಾ.... ಬಟ್ಟೆ ಒಗ್ದ್ ಹರ್ಗಿ ಹಾಕಿಕೂ ಗೊತ್ಲೆ.. ನೇಕೆಲಿ ಒಣ್ಂಗಿಲ್ ಬೊಳ್ಳಿಕಾರ್ ಮೀನ್ ನೇಲ್ಸಿದಾಂಗಿದ್ದದೆ. ಅದ್ಕೆ ಗೆಣ್ಸ್ ಬೇಸಿಕೂ ಗೊತ್ಲೆ. ಇನ್ನೆಲ್ಲಿಂದ ಹಿಟ್ಟ್ ಮಾಡ್ದು. ಕಲ್ತಪ್ಪ ನಾಯಿ ನಾಲಿಕೆನಾಂಗಾಗಿತ್ತ್. ಗುಡ್ಸಿರೆ ಮೂಲೆ ಮೂಲೆಲಿ ಕಾಡ್ ಹಂಗೇ ಹಾರಿಕಂಡಿದ್ದದೆ!! ಎಂಥ ಮಾಡ್ದು... ಮೇಲೆ ನೋಡಿ ಉಗ್ದರೆ ನಮ್ಮ ಮೋರೆಗೇ ರೆಟ್ಟುದೂಂತ ಸುಮ್ಮನೆ ಒಳೆ.. ಅಷ್ಟೇ." ಆದರೂ  ಸೊಸೆ ದೀಪಿಕಾ ಸಮಾಧಾನದ ಗೂಡೆ. ಅತ್ತೆನ ಪಿರಿಪಿರಿ ಕಂಡರೂ ಕಾಣದಾಂಗೆ ಸುಮ್ಮನೆ ಇರ್ತಿತ್ತ್. ಎಷ್ಟಾದರೂ ಹಿರಿಯವ್.. ಇದಲ್ಲನಾ "ಜೆನರೇಶನ್ ಗ್ಯಾಪ್".


                   ದಿನ ಕಳ್ದಾಂಗೆ ದೀಪಿಕಾಂಗೆ ಮನೆಲೇ ಇರ್ದು ಭಂಗ ಆಗ್ತುಟ್ಟು. ಓದಿದ ಗೂಡೆ. ಸಮಾಜದ ಪರಿಚಯ ಇರುವವ್ಳ್. ಅದ್ಕೇ ನೆರೆಕರೆನ ಹೆಣ್ಣ್ ಮಕ್ಕಳ ಸೇರ್ಸಿಕಂಡ್ "ಬಫೆ" ಮಾಡುವ ಕಾರ್ಯ ಸುರುಮಾಡಿಟು. ಇದರ್ದಾಂಗಿ ನಾಕ್ ಜನರ ಪರ್ಚಯದೊಟ್ಟಿಗೆ ಬಡಹೆಣ್ಣ್ ಮಕ್ಕಳಿಗೆ ಜೀವನಕ್ಕೂ ಸಹಾಯ ಆತ್. ಆದರೆ ದ್ಯಾವಂಮಕ್ಕ? ಅವರ ಚಾಳಿ ಇನ್ನೂ ಬುಟ್ಟೋತ್ಲೆ. ದೀಪಿಕಾನೂ ಮಹಿಳಾ ಮಂಡಲ, ಸ್ತ್ರೀ ಶಕ್ತೀಂತ ಸುಮಾರ್ ಕಡೆ ಸೇರಿಕಂಡ್ ಸರಕಾರಂದ ಸಿಗುವ "ವಿಶೇಷ ವ್ಯಕ್ತಿ" ಪುರಸ್ಕಾರಕ್ಕೆ ಆಯ್ಕೆ ಆತ್. ಆದಿನ ಸಮಾರಂಭಕ್ಕೆ ಮನ್ಸಿಲ್ಲದ ಮನ್ಸ್ಂದ ಹೊರ್ಟೋ ದ್ಯಾವಂಮಕ್ಕ. ಸೇರ್ದ ಸಭೆಲಿ ದೀಪಿಕಾನ ಅಭಿಪ್ರಾಯ ತಿಳ್ಸಿಕೆ ವೇದಿಕೆಗೆ ಕರ್ದೊ. ಅವ್ಳ್ ಹೇಳ್ದ ಮಾತ್ ಗಳ ಕೇಳಿ ದ್ಯಾವಂಮಕ್ಕನ ತಲೆಗೆ ಮರ ಬಿದ್ದಂಗಾತ್. "ನನ್ನ ಸಾಧನೆಗೆ ಸ್ಪೂರ್ತಿ ನನ್ನತ್ತೆ ದೇವಮ್ಮ. ಸಣ್ಣದರ್ಲಿ ಗಂಡನ ಕಳ್ಕಂಡರೂ ಜೀವನ ಕಳ್ಕಂಡತ್ಲೆ. ಹೆಣ್ಣೊಂದು ಗಂಡಾಗಿ ಮಂಙನ ಬೆಳ್ಸಿದೊ. ಅಷ್ಟ್ ಮಾತ್ರ ಅಲ್ಲ... ಅಷ್ಟ್ ಕಲ್ತ ಮಂಙನ ಬೆಂಗ್ಳೂರ್, ಹೊರದೇಶಕ್ಕೆ ಬೆರ್ಸದೆ ಒಬ್ಬ ಉತ್ತಮ ಕೃಷಿಕ ಆಗಿ ಮಾಡ್ದೊ. ಈಕೆನೇ ನಿಜವಾದ ತಾಯಿ. ಅದ್ಕೇ ಹೇಳ್ದು 'ಹೆಣ್ಣು ಸಮಾಜದ ಕಣ್ಣು'. ನಾ ಇಂಥವರ ಸೊಸೇಂತೇಃಳಿಕೆ ಹೆಮ್ಮೆ ಆದೆ." ಇತ್ತ ದ್ಯಾವಂಮಕ್ಕ ಕೊನೆಗೂ ಗುಡ್ಸಿಟ್ಟ ಕುಂಟುಮಾಯಿಪುನೇ ಗತೀಂತ, ನಾಚಿಕೆ ಆದರೂ ತೋರ್ಸಿಕಣದೆ ಸೊಸೆನ ಹೊಗ್ಳಿಕಂಡ್ ಮನೆ ಕಡೆ ಹೊರ್ಟೊ.
(Arebhashe Article of Gowdas)

🖋ಡಾ.ಪುನೀತ್ ರಾಘವೇಂದ್ರ ಕುಂಟುಕಾಡು