google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಹುಡ್ಗಾಟದ " ಹುಡ್ಕಾಟ "

https://arebhasheminpuli.blogspot.com/2017/08/blog-post_11.html

Tuesday 14 March 2017

ಹುಡ್ಗಾಟದ " ಹುಡ್ಕಾಟ "


ಪ್ರಾಯನೇ ಹಂಗೆ... ಆಗಷ್ಟೇ ಪಿಯುಸಿ ಮುಗ್ಸಿ ದೊಡ್ದ ಕಾಲೇಜ್ ಗೆ ಸೇರಿದ್ದವೆ. ಕ್ಲಾಸ್ ಲಿ ಇದ್ದರೂ ಇಲ್ಲದಿದ್ದರೂ, ಲೆಕ್ಚರ್ ಮಾಡ್ದ ಪಾಠ ಕೇಳ್ರೂ ಕೇಳದಿದ್ದರೂ ಹೇಳಂವ ಕೇಳಂವ ಯಾರೂ ಇರ್ದುಲೆ. ಎಷ್ತೇ ಗೂಡೆಗಳ ನೋಡ್ರೂ ಮನ್ಸ್ ಗೆ ಬಿಡ್ದ್ ಹೋತ್ ಅನ್ಸಿಕೇಲೆ. ಗ್ಲಾಸ್ ಲಿ ಅಲ್ಲದಿದ್ದರೆ ಗೊಟ್ಟೆಲಿ ಕುಡ್ಸುವಾಂಗೆ ಕದ್ದ್ ಕದ್ದ್ ನೋಡಿಕಾಂಡಿದ್ದವೆ. ಇನ್ನ್ ಹಾಸ್ಟೆಲ್ ಲಿ ಇದ್ದರೆ ಅಂತೂ ಕೇಳೊಕೂಂತಲೇ ಇಲ್ಲೆ. ಅಪ್ಪನ ಬೊಯ್ಗಳಿಲ್ಲೆ.. ಅಮ್ಮನ ಪರ್ರ್ಂಚಟ ಇಲ್ಲೆ!!! ( ಎಷ್ಟೋ ಸಲ ಅನ್ಸಿದೆ... ಮೊನ್ಸ ಆಗಿ ಹುಟ್ಟಿದ ಮೇಲೆ ಒಮ್ಮೆಯಾರ್ ಹಾಸ್ಟೆಲ್ ಲೈಫ್ ಮಜಾ ಅನ್ಭವ್ಸಿಯೇ ಅನ್ಭವ್ಸೊಕು!!) ಹಿಂಗಿರ್ ಕಾಕನನೇ ನಮ್ಮ ತಲೆಗೆ ಎಂತ ಹೋಳ್ದರೂ "ಸಂಶೋಧನೆ" ಮಾಡೊನೊ ಎಂಬ ಸಣ್ಣ ಧೈರ್ಯ "ಹುಡ್ಗಾಟ" ಮನ್ಸ್ ಗೆ ಹೊಳಿದು. ಹಂಗೇ ಹಾಸ್ಟೆಲ್ ಹಿಂದೆ ಮರಲಿ ಗ್ಯಾರ್ದಣ್ಣ್ ನೋಡ್ಕಾಕನನೇ ನನ್ನ ತಲೆಗೂ ಹೊಳ್ತ್... ಎಂತ?? ಬೀಜದಣ್ಣ್ ಹೇಳ್ರೇ ನೀವ್ಗೂ ಹೊಳ್ದಿರ್ದಲ್ಲಾ?? ಅದೇ..ಅದೇ.. ಒಮ್ಮೆ "ಗ್ಯಾರ್ದಣ್ಣ್" ದರ ಕಾಸಿ ನೋಡೊನೋಂತ!!!

ಆದರೆ ಕಾಸುದು ಹೆಂಗೆ?? ಸಣ್ಣದರ್ಲಿ ಬೀಜಣ್ಣ್ ಸಿಗ್ದ್ ಹಾಕುದರ ನೋಡಿ ಗೊತ್ತುತಷ್ಟೇ ಬುಟ್ಟು ಕಾಸುದರ ನೋಡಿಯೇ ಗೊತ್ಲೆ!!! ಪ್ರೈಮರಿ ಶಾಲೆಲಿ ವಿಜ್ಞಾನಲಿ ಜಾರ್ಜ್ ಮಾಷ್ಟ್ರ್ "ನೀರಿನ ಭಾಷ್ಪೀಭವನ/ ಭಟ್ಟಿಇಳಿಸುವಿಕೆ ಅಂದರೆ ಅದೇ ಮಾರಾಯ" ಹೇಳ್ದ್ ನೆನ್ಪಾತ್. ಆದರೂ ಯಾರೊಟ್ಟಿಗೇಂತ ಕೇಳ್ದು. ಕೊಡ್ಪಾಣಲಿ ಚಿಪ್ಪಿ ಇಸಿ ಕಾಸಿಕಣ್ತಿದ್ದ ದೊಡ್ಡಪ್ಪನೊಟ್ಟಿಗೆ ಕೇಳ್ರೆ ಆಕಿಲೆ. ಯಾರಿಗೂ ಗೊತ್ತಾಂಗದಾಂಗೆ ಪುಂಡಿಪಾತ್ರಲಿ ಕಾಸಿಕಂಬತಿದ್ದ ದೊಡ್ಡಮ್ಮನೊಟ್ಟಿಗೆ ಕೇಳ್ರೆ ಮಾಯಿಪುನ ಸುಡಿಲೇ ಸಿಕ್ಕುದು. ಇನ್ನ್ ಡ್ರಮ್ ಗಟ್ಟಲೆ ಕಾಸಿಸಿಕಂಬತಿದ್ದ ಮಾವನೊಟ್ಟಿಗೆ ಕೇಳ್ರೆ ಗ್ರಾಚಾರನೇ ಬುಡ್ಸ್ ವೊ. ಅಷ್ಟೊತ್ತಿಗೆ ಕುರೆನೊಟ್ಟಿಗೆ ಇರುವ ಕೊರುಂಬನಾಂಗೆ ನನ್ನ ಎಲ್ಲಾ "ಮಹಾತ್ಕಾರ್ಯ"ಗಳ್ಗೆ ಒಟ್ಟಿಗೆ ಇರುವ ದೋಸ್ತಿ "ಎಂಪಿ" ನೆನ್ಪಾತ್. (ಮನೆಂವ್ ಎಷ್ಟೇ ಲಾಯಿಕ್ ಹೆಸ್ರಿಸಿರೂ ನಾವ್ ಕರಿದು ' ಕುಂಞಿ' ಹೆಸ್ರ್ ಲೇ ಅಲ್ಲ) ನಾವಿಬ್ಬರೂ ಕ್ಲಾಸ್ ಬೇರೇ ಆದರೂ ಒಂದೇ ಊರವ್ ಆದರ್ಂದ ಬೆಸ್ಟ್ ಜೋಡಿ. ಇಬ್ಬರೂ ಸೇರಿ, ಡಿಸ್ಕಸ್ ಮಾಡಿ "ಕಾಸುವ ಪ್ಲಾನ್" ರೆಡಿ ಮಾಡ್ದೊ.

ಬೊಳ್ಪುಗೇ ಹೋಗಿ ಸುಮಾರ್ ಬೀಜಣ್ಣ್ ಹೆಕ್ಕ್ಯಂಡ್ ಬಾಕನ ದಾರಿಲಿ ಸಿಕ್ಕಿದ ಗೂಡೆಗಳಿಗೆ ತಿಂಬಕೆ ಆಸೆ ಆದೇಂತ ಸುಳ್ಳು ಬೇರೆ ಬುಟ್ಟೊ. ಹಣ್ಣ್ ಸಿಗ್ದ್ ಒಂದ್ ಪಾತ್ರಲಿ ಹಾಕಿ ಮಂಚದಡಿಲಿ ಅಣ್ಂಗಿಸಿ ಇಸಿದೊ.(ವಾರ್ಡನ್ ಗೆ ಗೊತ್ತಾಕೆ ಬೊತ್ತಲ್ಲ!!) ಈಗ ನೋಡಿ ಹೊಸ ತಲೆಬಿಸಿ.. ಕಾಸುದೆಂತದರ್ಲಿ?? ಅದ್ಕೂ ಎಂಪಿ ಒಂದು ಉಪಾಯ ಕೊಟ್ಟತ್. ಕೆಮೆಸ್ಟ್ರಿ ಲ್ಯಾಬ್ಂದ "ದುಂಡು ತಳದ ಫ್ಲಾಸ್ಕ್" ಹಾರ್ಸಿದೊ. ಒಟ್ಟಿಗೆ ಒಂದ್ ಬಿರಡೆ/ ಕಾರ್ಕ್ ಮತ್ತು ಟ್ಯೂಬ್!! ಸರಿ... ಒಂದು ವಾರಕಳ್ದ್ ಶನಿವಾರ "ಕಾಸುವ ದಿನ" ಬಾತ್. ( ಶನಿವಾರ ಯಾಕೆಂತೇಳ್ರೆ ವಾರ್ಡನ್ ಮನೆಗೋದವೆ) ಇಡೀ ಹಾಸ್ಟೆಲ್ ಮಲ್ಗಿದ ಮೇಲೆ ಕತ್ತಲೆಗೆ 12ಘಂಟೆಗೆ "ಕಾಸುವ ಕಾರ್ಯ" ಕ್ಕೆ ರೆಡೀ ಆದೊ. ನಮ್ಮ "ಹುಡ್ಕಾಟ"ಕ್ಕೆ ನಡುರಾತ್ರೆ ಅದ್ಯಾವ ಕೊಲೆ, ಪೀಡೆ ಕಣ್ಣ್ ಮುಟ್ಟ್ ಸಿತ್ತೋ ಏನೋ... ಕಾಸಿಕೆ ಕಿಚ್ಚಿ ಇಲ್ಲೆ!! "ಆಪದ್ಭಾಂದವ ಐರನ್ ಬಾಕ್ಸ್" ಮೇಜದ ಮೂಲೆಲಿ ಕುದ್ದು ನೆಗಾಡ್ ತುಟ್ಟು. ಇಸ್ತ್ರಿ ಪೆಟ್ಟಿಗೆನನೇ ಅಡ್ಡ ಹಾಕಿ ಫ್ಲಾಸ್ಕ್ ಅದರ ಮೇಲೆ ಇಸಿ ಕಾಸಿಕೆ ಸುರು ಮಾಡ್ದೊ.( ಇಸ್ತ್ರಿ ಪೆಟ್ಟಿಗೆಗೆ ಆಮ್ಲೆಟ್ ಹೊಯ್ದ್ ಹೊಯ್ದ್ ಅಭ್ಯಾಸ ಆದದ್ರಂದ ಹೆದ್ರಿಕಂಡಿರಿಕಿಲೆ!!) ಅಂತೂ ಫ್ಲಾಸ್ಕ್ ಲಿ ಇದ್ದದ್ ಕೊದ್ದ್ ಕೊದ್ದ್ ಕರೆಲಿದ್ದ ಸಣ್ಣ ಕುಪ್ಪಿಲಿ ಒಂದ್ ಕೊಂಡೆನಷ್ಟ್ ತುಂಬಿತ್. ನಾವ್ಗೋ ... ಪ್ರಪೋಸ್ ಮಾಡಿಕೆ ಹೋಕನ ಗೂಡೆನೇ ಬಂದ್ " ಲವ್ ಯೂ" ಹೇಳ್ದಷ್ಟ್ ಖುಶಿ . ಕಾಸಿದ ಮೇಲೆ ರುಚಿ ನೋಡದಿದ್ದರೆ ಆದೋ? ಹುಟ್ಟಿದಲ್ಲಿಂದಿತ್ತ ಕಂಡವರೆಲ್ಲಾ ಮನ್ಸ್ ಲೇ ನೆನ್ಸಿದ್ ಒಂದ್ ತುಂಡ್ ನೆಕ್ಕರೆ ಉಪ್ಪನಕಾಯ್ ನೂ ನೆಕ್ಯಂಡ್ ಚೂರ್ ಚೂರ್ ಹೊಯಿಕಂಡೊ. ಯಪ್ಪಾ.... ಕಂಯಿ ಕರ್ಪಟೆ!! ಕರ್ಂಚಿದ ವಾಸನೆ ಬೇರೆ!! ಇದರ ಹೆಂಗಪ್ಪಾ ಕುಡ್ದವೇಂತ ಕಾಸವಂಗ , ಕುಡಿಯವಂಗೆ , ಕಾಸುದರ ಕಂಡ್ ಹುಡ್ಕಿದವಂಗೂ ಶಾಪ ಹಾಕ್ಯಂಡ್ ಫ್ಲಾಸ್ಕ್ ಲಾಯಿಕ್ ತೊಳ್ದಿಸಿದೊ. ( ನಾಳ್ದ್ ಪುನಃ ಲ್ಯಾಬ್ ಲಿ ಇಸೊಕು... ಇಲ್ಲರೆ "ಕಾಣೆಯಾಗಿದೆ" ಸುದ್ದಿ ಬಾದು). ಕಾದ್ ಕಾದ್ ಹೊತ್ತಿ ಹೋದ ಇಸ್ತ್ರಿ ಪೆಟ್ಟಿಗೆ ನಮ್ಮ ನೋಡಿ ಒರ್ಂಗುಸಿ ನೆಗಾಡ್ ತಿತ್ತ್!!!

🖋ನಿಮ್ಮ ಹೈದ 

3 comments:

  1. 🙌🙌😁😁👌👌👌👌👌

    ReplyDelete
  2. ಅಯ್ಯೋ ರಾಮಾ.... ಇಂಥಾ ಇನ್ವೆಂಶನ್ನೋ...... ಶಿವನೇ.... ಈ ಬದ್ಕ್‌ಲಿ ಏನೆಲ್ಲ ನೋಡ್ಯಳೆ, ಅಂಗರೂ ಇಸ್ತ್ರಿಪೆಟ್ಟಿಗೆಲಿ ಆಮ್ಲೇಟ್ ಮಾಡ್ದರ ಇಂದೇ ಕೇಳ್ದಪ್ಪ! ನಿಜವಾಗಿಯೋ ನಿಮ್ಮೊದು ದೊಡ್ಡ ಸಂಶೋಧನೆನೇ... ಅದೆಲ್ಲ ಸರಿ, ಕಾಸಿಕಾಕನ ಹಾಸ್ಟೇಲ್‌ಗೀಡಿ ಪೊರ್ಮಳ ಬಾತ್ಲೆನೋ......?

    ReplyDelete