google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): " ಮಿಣ್ಪುಳಿ : ಅರೆಭಾಷೆ ಬರಹಗಳ ಜೊಂಗೆ"

https://arebhasheminpuli.blogspot.com/2017/08/blog-post_11.html

Sunday 5 March 2017

" ಮಿಣ್ಪುಳಿ : ಅರೆಭಾಷೆ ಬರಹಗಳ ಜೊಂಗೆ"

ಹತ್ತ್ ಕುಟುಂಬ ಹದ್ನೆಂಟ್ ಗೋತ್ರದ ಎಲ್ಲಾ ಗೌಡ ಬಾಂಧವ್ಕೆ ನನ್ನ ನಮಸ್ಕಾರಂಗ....

ಅರೆಭಾಷೆ... ನಾ ಕಲ್ತ ಸುರೂನ ಭಾಷೆ... ಅಮ್ಮ, ಅಪ್ಪ ಕಲ್ಸಿದ ಭಾಷೆ..ಅವ್ವ, ತಾತ ಬೆಳ್ಸಿದ ಭಾಷೆ.. ನನ್ನ ಭಾವನೆಗಳ ನಾನೇ ಅರ್ಥ ಮಾಡಿಕಂಬೊದರ ಕಲ್ಸಿಕೊಟ್ಟ ಭಾಷೆ.. ನಾವ್ ಎಷ್ಟೇ ದೊಡ್ಡ ಮೊನ್ಸರೇ ಆಗಲಿ, ನೂರಾರ್ ಭಾಷೆಗಳ ಕಲ್ತರೂ ನಮ್ಮೊಟ್ಟಿಗೆ ನಾವ್ ಮಾತಾಡಿಕಂಬೊದು ಕಲ್ತ ಸುರೂನ ಭಾಷೆಲೇ ಅಲ್ಲ!! ನಾವ್ ನಮ್ಮ ಮಾತೃಭಾಷೆಲಿ ಮಾತಾಡ್ಕಾಕನ ಸಮಾಜಲಿ ನಾವ್ಗೆ ಸಿಕ್ಕುವ ಗೌರವನೇ ಬೇರೆ. ಆದರೆ ಇಂದ್ ನಮ್ಮಲ್ಲಿ ಎಷ್ಟ್ ಜನ "ಅರೆಭಾಷೆ"ಲಿ ಮಾತಾಡುವೆ? ಮನೆಲಿ ಅಯ್ಯೆ,ಅಪ್ಪ ಮಕ್ಕ ಶಾಲೆಗೆ ಹೋಕೆ ಮೊದ್ಲೇ ಕನ್ನಡಲಿ ಮಾತಾಡಿಕೆ ಶುರು ಮಾಡ್ದೊ. ಇನ್ನ್ ಮಕ್ಕಳೋ... ಹೈಸ್ಕೂಲ್, ಕಾಲೇಜ್ ಮುಗ್ಸಿ ಲಕ್ಷಗಟ್ಟಲೆ ಸಂಬಳಹಿಡ್ದ್ ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ಮಲೆಯಾಳ.. ಅಷ್ಟ್ ಏಕೆ ಫಾರಿನ್ಗೆ ಹೋಗಿ ಫ್ರೆಂಚ್, ಜರ್ಮನ್ ಮಾತಾಡ್ರೂ "ಅರೆಭಾಷೆ" ಮಾತಾಡಿಕೆ ಗೊತ್ತಿರ್ದುಲೆ.ಕಾರಣ.. ನಾಚಿಕೆನಾ? ಅಲ್ಲಾ ಈ ಭಾಷೆಲಿ ನಾವ್ಗೆ ಬೊದ್ಕ್ ಕಟ್ಟಿಕಂಬಕೆ ಆದುಲೇಂತನಾ?

ಎರ್ಡೂ ಅಲ್ಲ...ನಾವ್ಗೆ ನಮ್ಮ ಭಾಷೆಲಿ ಇರುವ "ಆ ರುಚಿ" ಗೊತ್ಲೆ..ಆಳ ಗೊತ್ಲೆ.. ಹಿರಿಮೆ ಗೊತ್ಲೆ.. ಕನ್ನಡ ಭಾಷೆ ಮಾತ್ರ ಅಲ್ಲ.. ಹಳೆಗನ್ನಡಲೂ ಸಿಕ್ಕದ ಅದೆಷ್ಟೋ ಅಪರೂಪದ ಶಬ್ದಗ/ನುಡಿಗಟ್ಟ್ ಗ ಅರೆಭಾಷೆಲಿ ಸಿಕ್ಕಿದೇಂತ ಹೇಳಿಕೆ ನಂಗೆ ಗರ್ವ ಆದೆ. ಅವುಗಳ ಪರ್ಚಯ ಮಾಡಿಕೆ/ ಅರೆಭಾಷೆನ ಒಳ್ಸಿ,ಬೆಳ್ಸಿ ನನ್ನ ಮುಂದೆನ ಜನಾಂಗಕ್ಕೂ ತಿಳ್ಸಿಕೆ ನಾ ಶುರು ಮಾಡ್ತಿರುವ ಸಣ್ಣ  ಪ್ರಯತ್ನನೇ.. ಈ ಬ್ಲಾಗ್ "ಮಿಣ್ಪುಳಿ". ನಮ್ಮಲ್ಲಿ ಎಷ್ಟೋ ಹೈದ,ಗೂಡೆಗಳಿಗೆ "ಮಿಂಚು ಹುಳ"ಕ್ಕೆ "ಮಿಣ್ಪುಳಿ" ಹೇಳುವೇಂತ ಕೇಳಿಯೇ ಗೊತ್ತಿರಿಕಿಲೆ. ಅಮವಾಸ್ಯೆ ಕತ್ತಲೆಲಿ ಮಿಣ್ಪುಳಿಗ ಎಲ್ಲಾ ಒಮ್ಮೆಗೆ ಹೊಳ್ಯಕಾಕನ ನಾವು ಕಾಂಬ ಆ ಲೋಕನೇ ಒಂದ್ ಬೇರೇ.. ಅದ್ ಒಂಥರಾ ಸ್ವರ್ಗ.. ಆಗ ನಮ್ಮ ಸುತ್ತ ಎಷ್ಟೇ ಕತ್ತಲೆ ಇದ್ದರೂ ಆ ಕತ್ತಲೆ ಒಳಗೆ ಇರ್ವ ಎಲ್ಲಾ ವಸ್ತುಗ ಒಮ್ಮೆ ಕಂಡವೆ. ಹಂಗೇ ಈ ಬ್ಲಾಗ್ ಕೂಡ.. ಅರೆಭಾಷೆಲಿ ಬರ್ದದರ ನಾವ್ ಓದ್ಕಾಕನ ಸಿಕ್ಕುವ, ನಮ್ಮೊಳಗೆ ಅಣ್ಂಗಿರುವ ಒಂದ್ ಮನಸ್ಸಮಾಧಾನ, ಸಂತೋಷ.. ಅದರ ಬರೇ ಹೇಳಿಕಾಕಿಲೆ.. ಸ್ವತಃ ಅನ್ಭವ್ಸೋಕಷ್ಟೆ..ಅದ್ ನಾವ್ ಯಾವ್ದೇ ದೊಡ್ಡ ಇಂಗ್ಲೀಷ್ ಕಾದಂಬರಿಗಳ ಓದಿರೂ ಸಿಕ್ಕುದ್ಲೆ!!

ಸರ್ವಜ್ಞ ಬರ್ದ ಒಂದ್ ವಚನ ನೆನ್ಪಾದೆ...
ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು
ಸಾಹಿತ್ಯ ಎಲ್ಲರಿಗಲ್ಲ ಸರ್ವಜ್ಞ!!
ಈ ವಚನದಾಂಗೆ ನಂಗೆ ಗೊತ್ತಿದ್ದದ್ ನನ್ನೊಟ್ಟಿಗೇ ಮೊಣ್ಣಾಗಿ ಹೋಕೆ ಬೊತ್ತ್ ತೇಂಳುವ ಸಣ್ಣ ಆಸೆ ನಂಗೆ. ಕತ್ತಲೆ ಒಳಗೆ ಮಾಯ ಆಗಿ ಹೋದದರ ಮತ್ತೆ ತೋರ್ಸುವ "ಮಿಣ್ಪುಳಿ"ನಾಂಗೆ, ಮರ್ತ್ ಹೋದ ಶಬ್ಧಗಳ ವಾಪಸ್ ಪರ್ಚಯಿಸಿ, ಕಳ್ದ್ ಹೋದ ಕತೆಗಳ ಪುನಃ ನೆನ್ಪುಸಿ ಅರೆಭಾಷೆನ ಒಳ್ಸಿ, ಬೆಳ್ಸುವ "ಅರೆಭಾಷೆ ಬರಹಗಳ ಜೊಂಗೆ (ಗೊಂಚಲು)' ಆಗಿ ಬರ್ಲೀಂತ ನನ್ನ ಬಯ್ಕೆ. ತಪ್ಪಿದಲ್ಲಿ ತಿಳ್ಸಿ, ನಾವ್ ತಪ್ಪುಗಳಂದಲೇ ಕಲಿಯೊದು ಅಲ್ಲ?? ನಾ ಬರ್ದ ಎಲ್ಲಾ ಬರಹಗಳಿಗೆ ನಿಮ್ಮೆಲ್ಲರ ಆಶೀರ್ವಾದ, ಶುಭಹಾರೈಕೆ ಯಾಗೋಳು ನನ್ನೊಟ್ಟಿಗೆ ಇರ್ಲೀಂತ ಕೈಜೋಡ್ಸಿ ಕೇಳಿಕಣೆ.

ನಮಸ್ಕಾರ...

7 comments:

  1. Awesome Puneeth...eshtu layk explain madyola...God bless your talent of writing and expression.

    ReplyDelete
  2. ತುಂಬಾ ಒಳ್ಳೆಯ ಪ್ರಯತ್ನ ಅಣ್ಣ...ಬಾರಿ ಲಾಯಿಕ ಉಟ್ಟು ....

    ReplyDelete
    Replies
    1. ಧನ್ಯವಾದಂಗ... ನಮಸ್ತೇ

      Delete
  3. ಒಳ್ಳ ಕಾರ್ಯಾಂತ್ಹೇಳುವೇ....! ದೇವ್ರು ಒಳ್ಳದ್ ಮಾಡಲಿ...

    ReplyDelete