google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ನಾನೂ ಪುಂಡಿ ಬೇಸಿದೆ!!!

https://arebhasheminpuli.blogspot.com/2017/08/blog-post_11.html

Monday 13 March 2017

ನಾನೂ ಪುಂಡಿ ಬೇಸಿದೆ!!!



ಅದ್ಯಾಕೋ ಬೆಂಗ್ಳೂರ್ ಗೆ ಬಂದಮೇಲೆ ಊರುನ ಚಾಯ/ ಹಿಟ್ಟ್ ಭಯಂಕರತೇಳುವಾಂಗೆ ನೆನ್ಪಾದೆ. ಬೊಡ್ರೊಟ್ಟಿ, ಕಲ್ತಪ್ಪ, ಓಡಿಟ್ಟ್, ಉರ್ಳಿಟ್ಟ್, ನೀರ್ ದೋಸೆ, ಪುಂಡಿ... ಹಿಂಗೆ.. ಬಗೆ ಬಗೆ. ಯಾಗೋಳು ಯೋಗ/ ರಿಸರ್ಚ್ ಲಿ ಮುಳ್ಗಿರುವ ಸೈಂಟಿಸ್ಟ್ ತಲೆಗೆ 'ನಾನೇ ಒಮ್ಮೆ ಯಾಕೆ ಹಿಟ್ಟ್ ಮಾಡಿ ನೋಡಿಕೆ ಬೊತ್ತ್?' ಅಂತ ಹಂಗೇ ಫ್ಲಾಶ್ ಆತ್. ಆದ್ರೆ ಯಾವುದರಾಂತ ಮಾಡ್ದು. ಬೊಡ್ರೊಟ್ಟಿಗೆ ಕಾವ್ಲಿ ಇಲ್ಲೆ - ನೀರ್ ದೋಸೆ ಹೊಯ್ಯಕೆ ಗೊತ್ಲೆ!! ಕಲ್ತಪ್ಪ ಮಾಡಿಕೆ ಮೇಲೆ ಕೆಳಗೆ ಕಿಚ್ಚಿ ಹಾಕಿರೆ ಹೊಗೆ ನೋಡಿ ಅಪಾರ್ಟ್ಮ್ ಮೆಂಟ್ ನವು ಅಗ್ನಿಶಾಮಕಕ್ಕೆ ಫೋನ್ ಮಾಡ್ರೆ ನಾ ಮತ್ತೆ ಪೋಲೀಸ್ ಸ್ಟೇಶನ್ ಲಿ ಇರಕಾದುತ ನೆನ್ಸಿ ನನ್ನ ಐಡಿಯಾನ 'ಪುಂಡಿ' ಗೆ ತಂದು ನಿಲ್ಸಿದೆ.

ಶಾಪಿಂಗ್ ಮಾಲ್ ಯಾವುದೋ ಮೂಲೆಲಿ ಬಿದ್ದ್ ಒಟ್ಟಿ ಹೋದ ಇಡ್ಲಿ ಪಾತ್ರೆನ ಹುಡ್ಕಿ ತಂದೆ. ರಿಸರ್ಚ್ ಲಿ ಫಸ್ಟ್ Reference ಅಂದ್ರೆ " ಉಲ್ಲೇಖ" . ಎಲ್ಲಿಂದ? ಕೂಡ್ಲೆ ಪೊಪ್ಪಂಗೆ ಫೋನ್ ಮಾಡ್ದೆ( ಯಾಕೇಂದ್ರೆ ಮನೇಲಿ ಯಾಗೋಳು ಪುಂಡಿ ಮಾಡ್ತಿದ್ದದೇ ಅವು!!!). ಅಕ್ಕಿ ಪದ್ನಿಕೆ ಹಾಕಿ, ಕಡ್ದು, ಕೊದ್ದುಸಿ , ನಾದುಸಿ ಮಾಡಿಕೆ ಕೆಲ್ಸ ಸುಮಾರುಟ್ಟೂಂತ ಕೇಳಿ ಮನ್ಸ್ ಒಮ್ಮೆ ಚುಯಿಂಕ ಆತ್. ಇನ್ನೊಂದು ಉಲ್ಲೇಖ ಇರ್ಲೀಂತ ಅಮ್ಮನ ಕೇಳ್ದೆ. ಸೋ ಸಿಂಪಲ್... ಅಕ್ಕಿ ಹೊಡಿನ ನೀರ್ ಗೆ ಹಾಕಿ ನಾದ್ಸಿರೆ ಇನ್ನೂ ಸುಲಭಾಂತ ಗೊತ್ತಾತ್. ಚೂರ್ ಕಾಯಿ ಹೆರ್ದ್ ಹಾಕಿರೆ ಇನ್ನೂ ರುಚಿ!!!

ಅಂತೂ ಇಂತೂ ಸಾಕಷ್ಟು Literature Review ಅಂದ್ರೆ ವಿಮರ್ಶೆ ಮಾಡಿ ಅಕ್ಕಿ ಹೊಡಿ ರೆಡಿ ಮಾಡ್ದೆ. ಅಗಾಲದ ತಪಲೆಗೆ ನೀರು, ಎಣ್ಣೆ ಹಾಕಿ ನೀರು ಬಿಸಿ ಆದ ಹಾಂಗೆ ಚೂರು ಚೂರು ಅಕ್ಕಿ ಹೊಡಿ ಹಾಕಿದೆ. ಮೆಲ್ಲ ಮೆಲ್ಲಂಗೆ ಕಲ್ಸಿ ಪುಂಡಿ ಹದಕ್ಕೆ ತಂದೆ. ಒಂದು ಕೈ ನೀರ್ ಪಾಟೆಗೆ ಹಾಕಿಕಂಡ್ ಬಿಸಿ ಬಿಸಿನನೇ ಹೆಂಗೋ ಕಲ್ಸಿ ಇಡ್ಲಿ ಪಾತ್ರೆಲಿ ಇಸಿದೆ. ಒಂದು ಉಂಡೆ ಕೋಳಿಮೊಟ್ಟೆ ನಾಂಗೆ, ಇನ್ನೊಂದು ಕ್ರಿಕೆಟ್ ಬಾಲ್ ನಾಂಗೆ ಆದರೂ ಬೇಯ್ದು ಗ್ಯಾರಂಟೀಂತ ಮುಚ್ಚಳ ಮುಚ್ಚಿ ಗ್ಯಾಸ್ ಸ್ಟವ್ ಹೊತ್ತುಸಿದೆ.

ಈಗ ನನ್ನ ರಿಸರ್ಚ್ ರಿಸಲ್ಟ್!! 10 ನಿಮಿಷ ಕಳ್ದಾಂಗೆ ಎಲ್ಲಿಂದಲೋ ಏನೋ ಕರ್ಂಚಿದ ವಾಸನೆ. ಹೊರಗೆ ಕಸರಾಶಿಗೆ ಕಿಚ್ಚಿ ಹಾಕ್ಯೊಳೋಂತ ನೆನ್ಸಿದೆ. ಸರೀ 20 ನಿಮಿಷ ಕಳ್ದಾಕನ ಪುಂಡಿ ಬೇತ್. ಸ್ಟವ್ ಆಫ್ ಮಾಡಿ ಇಡ್ಲಿ ಪಾತ್ರ ಮುಚ್ಚಳ ತೆಗ್ದು ನೋಡ್ರೆ.. ಪುಂಡಿ ಕರ್ಂಚಿಟು!! ಕಾರಣ ಪುಂಡಿ ಬೇಯಕೆ ಇಡ್ಲಿ ಪಾತ್ರಕ್ಕೆ ನೀರೇ ಹಾಕಿತ್ಲೆ!!! ಒಟ್ಟಿ ಹೋದ ಇಡ್ಲಿ ಪಾತ್ರೆ ನನ್ನ ರಿಸರ್ಚ್ ನೋಡಿ ಒರುಂಗಿಸಿ ನೆಗಾಡ್ ತಿತ್ತ್!!

🖋ನಿಮ್ಮ ಹೈದ 

3 comments:

  1. Experiment laaykali Moodie Baath. Konege thimbake ondar pundi sikkitha ?

    ReplyDelete
  2. ಇಡ್ಲಿ ರವೆ ಸಿಕ್ಕಿದೆ ರೆಡಿಮೇಡ್ (ಅಕ್ಕಿರವೆ) ಮಾಜಿಸಿ ಪುಂಡಿ ಮಾಡಿಕೆ ಲಾಯ್ಕಾದೆ. ಮೆತ್ತಂಗೆ ಮೆತ್ತಂಗೆ. ಒಮ್ಮೆ ಟ್ರೈ ಮಾಡಿ. ಅಂದಾಂಗೆ ಇಡ್ಲಿ ಪಾತ್ರೆಗೆ ನೀರ್ ಹೊಯ್ದಿಸಿಕೆ ಮಾತ್ರ ಮರೇಬೊಡಿ ಆಗದಾ.

    ReplyDelete