google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಪುಂಡುನ ಗೂಡೆ ಪದ್ರಡ್ ಗಡ!!!

https://arebhasheminpuli.blogspot.com/2017/08/blog-post_11.html

Thursday 17 August 2017

ಪುಂಡುನ ಗೂಡೆ ಪದ್ರಡ್ ಗಡ!!!



         ಕೆಲವೊಮ್ಮೆ ಏನೋ ಮಾಡಿಕೆ ಹೋಗಿ ಏನೇನೋ ಆದೆ. ಗಣಪತಿನ ಮಾಡಿಕೆ ಹೋಗಿ ಅವನ ಅಪ್ಪನ  ಮಾಡ್ದ ಹಾಂಗೆ!! ಪೂರ್ತಿ ಮೊರ್ಲರ ಬೇಕರೂ ಒಂದ್ ನಮೂನೆಗೆ ಸರಿ ಮಾಡಕ್.. ಆದರೆ ಅರೆಮೊರ್ಲರ ಸರಿ ಮಾಡ್ದು ಭಾರೀ ಭಂಗ!!! ಹಂಗೇ ಇಲ್ಲೊಬ್ಬ ಅರೆಮೊರ್ಲನೇ ನಮ್ಮ "ಪುಂಡು". ಪುಂಡಿಮನೆ ನಾರ್ಣಣ್ಣನ ಕಡೇ ಮಂಙ. ಮೇಲೆಂದ ಮೇಲೆ ಸಾಲಾಗಿ ಐದ್ ಹೆಣ್ಣ್ ಮಕ್ಕಳೇ ಆದದರ ಕಂಡ್ ನಾರ್ಣಣ್ಣಂಗೆ ಭಾರೀ ಬೆಚ್ಚಲಿತ್ತ್. ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ಸುತ್ತಿ, ಕಂಡ ಕಂಡ ದೇವ್ರುಗಳಿಗೆಲ್ಲಾ ಹರ್ಕೆಹೊತ್ತ್ ಕಡೆಗೆ ದೇವ್ರ್ ಗಳಿಗೇ ಇವನ ಉಪದ್ರ ತಡೆಯಕೆ ಬೊತ್ತದಾಗಿಯೋ ಏನೋ ಕೊಟ್ಟ ಒಂದ್ ಕಿಳೆ ಮೊರಿ ಕೊಳ್ಳಿ ಕುಬೇರನೇ ಪುಂಡು. ಅದರ್ಂದಾಗಿಯೋ ಗೊತ್ಲೆ ಹೈದನ ಕಣ್ಣ್ ಚೂರ್ ಕೋಸ್, ತಿರ್ರ್ಂಟೆಲ್ ಕೆಬಿ ಒಟ್ಟಿಗೆ ಎಡ್ದ ಕಾಲ್ ಚೂರ್ ಚೊಟ್ಟೆ. ನಡ್ಯಕಾಕನ ಚೂರ್ ಏಂಟಿಕಂಡೇ ನಡಿದು. ಇನ್ನ್ ಮಾತ್ ಮಾತ್ರ..... ಆಹಾ...ಸೂಪರ್...ಕೊಂಞೆ.. ಕೊಂಞೆ.. ಕೊಂಞ್ಞೇ!!!  ಒಬ್ಬನೇ  ಮಂಙಾಂತ ಮನೆಯವೆಲ್ಲಾ ಮೋಕೆಲೇ ಸಾಂಕಿದೊ. ತಿಂಬಕೆ ಕುಡಿಯಕೆ ಬಿಣ್ಣರ ಬಿಕ್ಕರ ಬೇಕಾದಾಂಗೆ  ಬಗೆ ಬಗೆ ಮಾಡಿ ಅಯ್ಯೆ ಇಕ್ಕಿರೆ, ಅಕ್ಕಂದ್ರ್ ಇವಂಗೆ ಕುಂಡೆ ಪೊಕ್ಕ್ ಸಿ ಒಂದೂ ಕೆಲ್ಸ ಮಾಡಿಕೆ ಬುಡಿಕಿಲೆ. ಹಂಗಾಗಿ ಪುಂಡುನ ಪ್ರಾಯದೊಟ್ಟಿಗೆ ದೇಹ ಬೆಳ್ತಷ್ಟೇ ಹೊರ್ತ್ ಬುದ್ಧಿ ಮಾತ್ರ ಬೆಳ್ತೇಲೆ!!!

          ನಾರ್ಣಣ್ಣಂಗೂ ಪ್ರಾಯ ಆಕಂಡ್ ಬಾತ್. ಮುನ್ನೂರು ಮುಡಿ ಗದ್ದೆ, ಇಪ್ಪತೈದ್ ಖಂಡಿ ಅಡ್ಕೆ, ಕೆಲ್ಸದವರೆಲ್ಲಾ ನೋಡಿಕಂಬೊದು ಇನ್ನ್ ಇನ್ನ್ ಆಕೇಲೇ. ಪುಂಡುಗೋ ಗದ್ದೆ ಪುಣಿಲಿ ನಡ್ದ್ ಹೋಗಿಯೇ ಗೊತ್ಲೆ. ಇನ್ನ್ ಬೇಸಾಯ ನೋಡಿಕಂಬೊದೆಲ್ಲಿಂದ??!! ಆಗ ಹೊಳ್ದ ಐಡಿಯಾನೇ ಮಂಙಂಗೆ ಮೊದ್ವೆ ಮಾಡ್ದೂಂತ.. ಹುಚ್ಚು ಬುಡದೆ ಮೊದ್ವೆ ಆಕಿಲೆ.. ಮೊದ್ವೆ ಆಗದೆ ಹುಚ್ಚು ಬುಡಿಕಿಲೆ ಎಂಬಾಂಗೆ!! ಹಂಗಾರ್ ಜವಾಬ್ದಾರಿ ಬಾದೂಂತ ಆಸೆ. ಸುಮಾರ್ ಕಡೆ ಹುಡ್ಕಿ ಕಡೆಗೆ ಚಾಳೆಅಡಿ ಸೇಸಪ್ಪನ ಎರಡ್ನೇ ಮಗ್ಳ್ "ಚಾಮುಣಿ" ನೊಟ್ಟಿಗೆ ನೆಂಟಸ್ತಿಕೆ ಗಟ್ಟಿ ಆತ್. ಸೇಸಪ್ಪನೂ ನಾಕ್ ಹೆಣ್ಣ್ ಮಕ್ಕಳ ಅಪ್ಪ. ಮಗಕ್ಕಳಿಗೆ ಗಂಡ್ ಹುಡ್ಕಿ ಹುಡ್ಕಿ ಸಾಕಾಗಿ 'ಹೆಂಗಿದ್ದರೂ ಆಸ್ತಿ ಬೊದ್ಕ್ ಧಾರಾಳ ಉಟ್ಟೂಂತ' ಒಮ್ಮೆ  ಇದ್ ದಾಟ್ರೆ ಸಾಕ್ ತೇಳಿ ಬೊಯಿದ್ ಮಗ್ಳ ಮೊದ್ವೆಗೆ ಒಪ್ಪ್ ಸಿತ್. ಸುತ್ತ ಹತ್ತೂರ್ ಲೇ ಇಲ್ಲದ ಭಾರೀ ಗೌಜಿನ ಮೊದ್ವೆ. ಹತ್ತ್ ಕುಟುಂಬ ಹದಿನೆಂಟ್ ಗೋತ್ರದ ಬಂಧು ಬಾಂಧವರು ನೆಂಟರಿಷ್ಟರು ಮುಂತಾದ ಸ್ವಜಾತಿ ಗೃಹಸ್ಥರು ಸೇರ್ದಲ್ಲಿಂದ ಕೈಯೆತ್ತಿ ಕನ್ಯಾಧಾರೆ ಹೊಯ್ಸಿ ಚಾಮುಣಿ ಎಂಬ ಸೊಸೆನ ಮನೆ ಸೇರ್ಸಿಕಂಡೊ ನಾರ್ಣಣ್ಣ. ಗೂಡೆ ಸುಮಾರಾಗಿ ಲಾಯಿಕ್ಕೇ ಇದ್ದರೂ, ಅದ್ಕೆ ಅಡಿ ಪೊಡಿನೂ ಒಂಬದ ಹೈದ ಪುಂಡು!! ಆದರೂ ಬಂದವೆಲ್ಲಾ 'ದೊಡ್ದವರ ಮೊದ್ವೆ ಅದೆಲ್ಲಾ ನೋಡಿಕುಟ್ಟಾ' ಸಮಾ ಉಂಡ್ ಮೊದ್ ಮಕ್ಕಳಿಗೆ ನೊಮ್ಸ್ಕಾರ ಹಾಕಿ ಹೋದೊ.

             ದಿನ ಕಳ್ದಾಂಗೆ ಚಾಮುಣಿಗೆ ಪುಂಡುನ ದಿನಚರಿಗಳೆಲ್ಲಾ ಒಂದೊಂದಾಗಿ ಅರ್ಥ ಆಗ್ತುಟ್ಟು. ಬರೇ ಬೇಜವಾಬ್ಧಾರಿ.. ಉದಾಸೀನದ ಮಾರಿ... ಕತ್ತಲೆ ಆದರೆ ಮಲ್ಗಿ ಗೂರೆಳ್ಯಕೇ ಕಾದ್ ಕಂಡಿರ್ದು!! ಹಾಕ್ಯಂಡ ಕಾಚ ಸಮೇತ ಒಗ್ಕಂಬ್ಬಕ್ಕೆ ಗೊತ್ಲೆ!! ಇನ್ನ್ ಬೇರೆ ವಿಷಯಗೆಲ್ಲಾ ಎಲ್ಲಿಂದ.... ಚಾಮುಣಿನೋ... ಚೂರು ಉಸಾರ್ ಗೂಡೆ. ಪೇಟೆ ಸುತ್ತಿ ಗೊತ್ತಿದ್ದ ಆಳ್. ಮನೆಲೇ ಇರ್ಕೆ ಸರಿ ಆದುಲೆತ ಅತ್ತೆನ ಹೆಡ್ಡ್ ಮಾಡಿ ಟೈಲರಿಂಗ್ ಕ್ಲಾಸ್ಗೆ ಹೋಕೆ ಸುರು ಮಾಡ್ತ್. ಯಾಗೋಳು ಪೇಟೆ ನೋಡಿ ನೋಡಿ ಅದುವೇ ರುಚಿ ಅನ್ಸ್ತುಟ್ಟು. ಚಾಮುಣಿ ಹಳ್ಳಿ ಗೂಡೆ ಆದರೆ ಏನ್.. ಅದ್ಕೂ ಆಸೆ ಇರ್ದುಲೆನಾ? ಹಿಂಗೇ ಪೇಟೆ ಕಡೆ ಹೋಗಿ ಹೋಗಿ... ಬಸ್ಸ್ ಕಂಡೆಕ್ಟರೊಟ್ಟಿಗೆ ಪರಿಚಯ ಆತ್... ಪರಿಚಯ ಸ್ನೇಹನೂ ಆಗಿ ಒಂದಿನ ಅವನೊಟ್ಟಿಗೇ "ಪಣಾಂದೆ ಪದ್ರಡ್!!". ಪುಂಡುನ ಸರಿ ಮಾಡಿಕೆ ಹೋಗಿ ಮನೆ ಮರ್ಯಾದೆನೇ ಕಳ್ಕಂಡತ್ ನಾರ್ಣಣ್ಣ. ಇನ್ನ್ ಪುಂಡುನೋ "ಕೊಣ್ಯಕೆ ಗೊತ್ತಿಲ್ಲದಂವ ನೆಲ ಡೊಂಕುತ ಹೇಳ್ದಾಂಗೆ", ಚಾಮುಣಿನ ಗುಣನೇ ಸರಿ ಇಲ್ಲೇಂತ ಊರಿಡೀ ಹೇಳಿಕಂಡ್ ಸುತ್ತಿದೆ.  ಅಲ್ಲಿಂದ ಮೇಲೆ ಒಂದ್ ಹೋಗಿ ಇನ್ನೊಂದ್ ಆಗುವ ಕೆಲ್ಸಗಳಿಗೆ  "ಪುಂಡುನ ಗೂಡೆ ಪದ್ರಡ್ ಹಾಕಿದಾಂಗೆ ಆದು ಬೇಡ ಮಾರಾಯ!!" ಎಂಬ ಮಾತ್ ಬೈಲ್ ಜನಗಳ ಬಾಯಿಗೆ ಬಂದುಟು...
  • ಡಾ. ಪುನೀತ್ ರಾಘವೇಂದ್ರ ಕುಂಟುಕಾಡು

Arebhashe Articles of Gowdas

1 comment: