google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಡಿಜಿಟಲ್ ಯುಗಲಿ ಅರೆಭಾಷೆ ಒಳಿದಾ?

https://arebhasheminpuli.blogspot.com/2017/08/blog-post_11.html

Sunday 28 May 2017

ಡಿಜಿಟಲ್ ಯುಗಲಿ ಅರೆಭಾಷೆ ಒಳಿದಾ?


                        ಹೂಲಿದ್ದ ಮಿಡಿಕಾಯಿ ಕಾಲ ಕಳ್ದಾಂಗೆ ಕರ್ಕ್  ಆಗಿ ಬೆಳ್ದ್ ದೊಡ್ಡದಾದೆ. ಹಂಗೇ ಹಣ್ಣಾಗಿ ಬಿದ್ದದೆ ಕೂಡ..... ಆದರೆ ಅಲ್ಲಿಗೆ ಅದರ ಜೀವನ ಮುಗ್ತಾ?? ಇಲ್ಲೆ.... ಅದರ ನಿಜವಾದ ಜೀವನ ಸುರು ಆದೇ ಅಲ್ಲಿಂದ!! ಹೆಂಗೆ ಗೊತ್ತುಟಾ... ಹಣ್ಣ್ ಲಿದ್ದ ಬೀಜ ಮೊಂಗೆ ಬಂದ್ ಹೊಸ ದೈ ಆಗಿ ಮರ ಆದೆ. ಅದರ ನಂಬಿಕಂಡಿದ್ದವು ಅದರ್ನೇ ಬೆಳ್ಸಿ ಆರ್ಥಿಕ ಸ್ಥಿತಿ ಸುಧಾರ್ಸಿಕಂಡವೆ... ಉದಾ: ಹಿಂದೆಲ್ಲಾ ಇದ್ದದ್ ಬೀಜ ಕೊಚ್ಚಿ. ಗ್ಯಾರ್ದಣ್ಣ್ ದೈ ಅದರಷ್ಟಕ್ಕೆ ಹುಟ್ಟಿ ಮರ ಆತಿತ್ತ್. ಈಗ ಕಸಿ ದೈ ನೆಟ್ಟ್ "ಗೇರು ಬೀಜದ ತೋಪು" ಮಾಡುವೆ. ಅಷ್ಟೇ...ಹಂಗೇ ನಮ್ಮ ಅರೆಭಾಷೆ ಕೂಡ... ನಮ್ಮ ಅಜ್ಜ, ಮುತ್ತಜ್ಜನ ಕಾಲಂದಲೇ ಮುಂದುವರಿತುಟ್ಟು.... ಅಜ್ಜನ ಕಾಲಕ್ಕೇ ಬುಟ್ಟೋತ್ಲೆ... ಆದರೆ ದಿನ ಕಳ್ದಾಂಗೆ ಮೊಬೈಲ್, ವಾಟ್ಸಾಪ್, ಫೇಸ್ ಬುಕ್ ಗಳೇ ಎಲ್ಲರ ಜನಜೀವನ ಆಗ್ತುಟ್ಟು. ( ಮೊದ್ಲೆಲ್ಲಾ ಮಕ್ಕಳಿಗೆ ಬೂದಿಗುಡ್ಡೆಲಿ ಹೊಣ್ಕುವ ನಾಯಿಮೊರಿಗಳೇ ಜೀವಂತ ಆಟದ ಸಾಮಾನ್ .... ಈಗದವ್ಕೆ ಕೈಲಿ ಒಂದು ಮೊಬೈಲ್ ಕೊಟ್ಟು ಕುದ್ರುಸಿರೆ ಆತ್.. ಮಕ್ಕಳೇ ಗೊಂಬೆಗಳಾಂಗೆ ಕುತ್ತ ಕುದ್ದ್ ಕಂಡವೆ ಅಷ್ಟೇ!!). ಏನ್ ಯಾ ಬಾವ ಹೋಗಿ ಹಾಯ್, ಹಲೋ ಆಗುಟು... ಚಿಕ್ಕಪ್ಪ, ಸಂಣಪ, ಉಗ್ಗವ, ಚಿಕ್ಕಂವ ಹೋಗಿ ನಮ್ಮ ಸುತ್ತ ಅಂಕಲ್, ಆಂಟಿಗಳೇ ತುಂಬಿ ಹೋಗೊಳೊ. ಇನ್ನ್ ಅರೆಭಾಷೆಲಿ ಬರ್ದ ಪುಸ್ತಕ ಓದುದು ಬುಡಿ.. ಮಾತಾಡಿಕೇ ಕಷ್ಟಆದೆ. ಇಂಥಾ ಡಿಜಿಟಲ್ ವ್ಯವಸ್ಥೆಲಿ ನಮ್ಮ ಅರೆಭಾಷೆ ಒಳಿದಾ???

                          ಖಂಡಿತಾ ಒಳ್ದದೆ. ವಿಶೇಷವಾಗಿ ನಮ್ಮ ಹೈದ , ಗೂಡೆಗ ಒಳ್ಸುವ ಪ್ರಯತ್ನ ಮಾಡ್ತೊಳೊ. (ಯುವ ಜನಾಂಗನೇ ಅಲ್ಲನ ನಮ್ಮ ಭವಿಷ್ಯ!). ಅದುವೇ ಒಂದು ವೆಬ್ ಸೈಟ್ http://www.arebhashegowda.com ನಮ್ಮ ಹೈದ "ಮಿಥುನ್ ಬಿಲ್ಲಾರ" ಮಾಡ್ದ ವೆಬ್ ಸೈಟ್...(ಯಾಗೋಳು ಕಾಯಿಲೆ, ಪೇಶೆಂಟ್ ಗಳೊಟ್ಟಿಗೆ ಮುಳ್ಗಿರುವ ನಂಗೆ, ಹಿಂಗೊಂದ್ ಸೈಟ್ ಮಾಡಿಕೆ ಆದೇತೇಂಳುವ ಯೋಚನೆನೇ ನನ್ನ ಬೊಡ್ಡ್ ತಲೆಗೆ ಇತ್ಲೆ!!!). ಮೊದ್ಲ್ ನಾ ಬರ್ದದರ ಫೇಸ್ ಬುಕ್ ಗೆ ಅಂಟಿಸ್ ತಿದ್ದೆ. ಮತ್ತೆ ವಾಟ್ಸ್ ಆಪ್ ಲಿ ಬುಟ್ಟೆ. ಕೆಲವು ಓದಿದೊ. ಫಾರ್ ವರ್ಡೂ ಮಾಡ್ದೊ. ಕಡೆ ಕಡೆಗೆ ಹೊಡ್ಕಿ ಒಳ್ದ ಜಳ್ಳ್ ಬತ್ತದಾಂಗೆ ಎತ್ತ ರೆಟ್ಟಿ ಹೋತೋ... ದೇವ್ರಿಗೇ ಗೊತ್ತು!!! ಅದ್ಕೆ ಇನ್ನ್ ಒಳ್ದದೂ ರೆಟ್ಟಿ ಹೋದು ಬೇಡಾಂತ ಬ್ಲಾಗ್ ಕೂಡ ಮಾಡ್ದೆ... ಅದೇ "ಮಿಣ್ಪುಳಿ"( ಇಲ್ಲಿ ಯಾಗ ಬೇಕರೂ ಬರವಣಿಗೆಗ ಓದಿಕೆ ಸಿಕ್ಕಿದೆ). ನಾವು ಬರ್ದದ್ ಪತ್ರಿಕೆಲಿ ಬರ್ದರೆ ಪತ್ರಿಕೆ ತಕಂಡವ ಮಾತ್ರ ಓದಿದೆ. (ಕಡೆಗೆ ದಾರಿಕರೆ ಗೂಡಂಗಡಿಲಿ ಆಮ್ಲೆಟ್/ಚಟ್ಟ್ಂಬಡೆ ಕಟ್ಟಿರೂ ಗೊತ್ತಾದ್ಲೆ!!). ಅದ್ಕೇ ನಾವ್ ಇಲ್ಲಿ ಹಾಕಿರೆ ಅರೆಭಾಷೆ  ಗೌಡ್ರ್ ಗ ವಿಶ್ವದ ಯಾವುದೇ ಮೂಲೆಲೇ ಇದ್ದರೂ ಓದಿ ಖುಶಿ ಪಡಕ್.

ಹಂಗೇ ಅರೆಭಾಷೆಲಿ ಇನ್ನೂ ಕೆಲವು ಬರವಣಿಗೆಗ ಬರ್ತಾ ಉಟ್ಟು. ನನ್ನ ಮಾವಂದಿರ್ ಹೊದ್ದೆಟ್ಟಿ ಭವಾನಿಶಂಕರ, ಹೊದ್ದೆಟ್ಟಿ ತೀರ್ಥರಾಮ ಇವರೊಟ್ಟಿಗೆ ನನ್ನಣ್ಣ ಯಶವಂತ ಕುಡೆಕಲ್ಲ್, ಬಡ್ಡಡ್ಕ ತೇಜ ಚಿಕ್ಕ, ಬಡ್ಡಡ್ಕ  ವೇದ ಅಂವ್ವ, ಚಟ್ಟಿಮಾಡ ಜಯಮ್ಮ ದೊಡ್ಡವ್ವ, ಅಂಬೆಕಲ್ಲ್ ಪುಟ್ಟಣ್ಣ ದೊಡ್ಡಪ್ಪ, ಅಡ್ತಲೆ ಭವಾನಿ ಅಣ್ಣ... ಇವೆಲ್ಲಾ ಅರೆಭಾಷೆಲಿ ಬರ್ದ್ ಭಾಷೆನ ಘನತೆ ಹೆಚ್ಚಿಸಿದವ್.(ನನ್ನ ಅಜ್ಜ ಹೊದ್ದೆಟ್ಟಿ ಬೆಳಿಯಪ್ಪ ಗೌಡ ಅಂದ್ ನ ಕಾಲಲೇ ಒಂದ್ ಯಕ್ಷಗಾನ ಬರ್ದಿದ್ದೊಗಡ... "ಉದಂಕ ಚರಿತೆ" ಅಂತ) ನಮ್ಮ ಇಂದ್ ನ ಹೈದ, ಗೂಡೆಗಳೂ ಏನ್ ಕಮ್ಮಿ ಇಲ್ಲೆ. ಮೂಡಗದ್ದೆ ವಿನೊದ್ ಬಾವ "ಮುಡ್ಪು: ಅರೆಬಾಸೆ ತಿಂಗ ಪತ್ರಿಕೆ"ನನೇ ತರ್ತೊಳೊ. ಲೋಕೇಶ್ ಊರುಬೈಲ್, ಚರಣ್ ಐವರ್ನಾಡ್, ಧನ್ಯಾ ಬಾಳೆಕಜೆ ಇವೆಲ್ಲವರ್ದೂ ಬರವಣಿಗೆಗ  ಓದಿಕೆ ಸಿಕ್ತುಟ್ಟು.( ಇನ್ನೂ ಇರುವೊ... ನನ್ನ ಗಮನಕ್ಕೆ ಬಾತ್ಲೆ.. ಕ್ಷಮ್ಸಿ) ಹಂಗೇ .... ಇನ್ನೂ ಕೆಲವು  ಜಾತ್ರೆಲಿ ಕಾಂಬ ಗೂಡೆಗಳಾಂಗೆ ಕಂಡ್ ಕಾಣೆಆಗ್ತುಟ್ಟು!!! ಹಂಗೆ ಕಾಣೆ ಆಕೆ  ಬುಡ್ಬಡಿ.. ನೀವು ಬರ್ದದರ  ಅರೆಭಾಷೆ ಗೌಡ ವೆಬ್ ಸೈಟ್ ಲಿ ಪ್ರಕಟ ಮಾಡಕ್. http://www.arebhashegowda.com ಇಲ್ಲಿಗೆ ಸಬ್ ಸ್ಕ್ರೈಬ್ ಮಾಡಿಕಣಿ. ಅಥವಾ ಫೇಸ್ ಬುಕ್ ಲಿ ಲೈಕ್ ಕೊಟ್ಟರೂ ಆದೆ. (https://www.facebook.com/ArebaasheGowda/) ಪ್ರತಿಯೊಂದು ಅಪ್ ಡೇಟ್ ಬರ್ತಿದ್ದದೆ.

ನೀವು ಬರ್ದದರ ಇಲ್ಲಿಗೆ ಕಳ್ಸಿ:
x

6 comments:

  1. ಲಾಯ್ಕಲಿ ಬರ್ದೊಳ್ರಿ...

    ReplyDelete
    Replies
    1. ಧನ್ಯವಾದಂಗ....ನಮಸ್ತೇ

      Delete
  2. ಇಷ್ಟರ ಅರೆಬಾಷೆಲಿ ಬರ್ದದೇ ದೊಡ್ಡ ಖುಷಿ.

    ReplyDelete
    Replies
    1. ಬರ್ಯಕೆ ಇನ್ನೂ ಉಟ್ಟು... ಕಾಯ್ತಿರಿ... ನಮಸ್ತೇ

      Delete
  3. ಜೈ ಹೋ......! ನಿಮ್ಮ ಪ್ರಯತ್ನಕ್ಕೊಂದು ದೊಡ್ಡ ನಮಸ್ಕಾರ!

    ReplyDelete
  4. "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆಲಿ ಪ್ರಕಟ ಆಗ್ತಿರುವ ಪೂರಾ ಬರಹ ಗ ತುಂಬಾ ಲಾಯ್ಕ್ ಇದ್ದವೆ...

    ReplyDelete