google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಅರೆಭಾಷೆಗೊಂದು ಅನರ್ಘ್ಯ ರತ್ನ : ಮುಡ್ಪು ಅರೆಬಾಸೆ ತಿಂಗ ಪತ್ರಿಕೆ

https://arebhasheminpuli.blogspot.com/2017/08/blog-post_11.html

Friday 26 May 2017

ಅರೆಭಾಷೆಗೊಂದು ಅನರ್ಘ್ಯ ರತ್ನ : ಮುಡ್ಪು ಅರೆಬಾಸೆ ತಿಂಗ ಪತ್ರಿಕೆ

                     ಬೆಂಗ್ಳೂರ್ ಗೆ ಬಂದ ಮೇಲೆ ನಂಗೆ ಭಾಷೆ ಇಲ್ಲದಾಂಗಾಗುಟು!!! ಅಂದರೆ ಸೊಯೆ ಇಲ್ಲೇಂತಲ್ಲ... ಅರೆಭಾಷೆಲಿ ಮಾತಾಡಿಕೆ ಜನ ಇಲ್ಲೇಂತ!! ಕಾಲೇಜ್ ಗೆ ಬಂದರೆ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು,ಮಲೆಯಾಳ.... ಇನ್ನ್ ಪೇಷೆಂಟ್ ಗಳೊಟ್ಟಿಗೋ ಇಂಗ್ಲೀಷ್ ತಪ್ಪಿರೆ ಕನ್ನಡ ಭಾಷೇಂತ ಹೇಳುವ ಕಂಗ್ಲೀಷ್!! ಹಂಗಾಗಿ ನನ್ನೊಟ್ಟಿಗೆ ಅರೆಭಾಷೆಲಿ ಮಾತಾಡುವ ಏಕ ಮಾತ್ರ ವ್ಯಕ್ತಿ .. ಅದೇ ನನ್ನ ಹೇಂಡ್ತಿ!! (ಕೆಲ್ಸ ಮುಗ್ಸಿ ಬೊಚ್ಚಿಕಂಡ್ ಮನೆಗೆ ಎತ್ತ್ ಕಾಕನ ಅದೂ ಇರ್ದುಲೆ.... ಬರೇ ಕೈಭಾಷೆ,ಕಣ್ಣ್ ಭಾಷೆ!!). ಹಿಂಗಿರ್ಕಾಕನ ನಂಗೇ ಭಾಷೆ ಮರ್ತೋದುತ ಹೆದ್ರಿ ಗೊತ್ತಿದ್ದದ್ದರ ಬರ್ಯಕೆ ಸುರು ಮಾಡ್ದೆ. ಒಂದು ನಮೂನೆಲಿ ನೋಡ್ರೆ ಕೆಲ್ಸ ಇಲ್ಲದ ಆಚಾರಿ ಕೂಸುನ ಕುಂಡೆ ಕೆತ್ತಿದಾಂಗೆ!!. ಕಟ್ಟಿಸಿದ್ ಬೂಸ್ ಹಿಡ್ದ್ ಕರ್ಗುದು ಬೇಡಾಂತ ಎಲ್ಲವ್ಕೂ ಓದಿಕೆ ಬ್ಲಾಗ್ ಮಾಡಿ ಇಲ್ಲಿ ತುಂಬುಸ್ತೊಳೆ. ಹೆಚ್ಚಿನವು ಓದಿದೊ... ಖುಶಿ ಪಟ್ಟೊ.. ಸಮಾಧಾನ ಉಟ್ಟು. ಒಂದಿನ ನನ್ನ  ಈಮೈಲ್ ಲಿ ಒಂದು ಪತ್ರ. " ಬಾವ... ನಿಮ್ಮ ಸುಮಾರ್ ಕತೆಗ ಸಾಮಾಜಿಕ ಜಾಲತಾಣಗಳ್ಲಿ ಹರ್ದಾಡ್ತುಟ್ಟು. ಅದರ ನಮ್ಮ ಅರೆಭಾಷೆ  ಮಾಸಪತ್ರಿಕೆ ' ಮುಡ್ಪು'ಲಿ ಪ್ರಕಟ ಮಾಡಕಾ? ... ಇಂತು ನಿಮ್ಮ ವಿನೋದ್ ಮೂಡಗದ್ದೆ". ನಂಗೇ... ಹಸ್ ತಕಂಬಕಾಕನ ಒಂದ್ ಹೆಣ್ಣ್ ಕರ್ ನೂ  ಫ್ರೀ ಸಿಕ್ಕಿದಾಂಗಾತ್. ಆದೂಂತ ಒಪ್ಪಿ, ಒಂದ್ ಪುಸ್ತಕ ಕಳ್ಸಿಕೆನೂ ಹೇಳ್ದೆ.

                     ಹೇಳಿ ಮೂರ್ನೇ ದಿನಕ್ಕೆ ಪತ್ರಿಕೆ ಮನೆಲಿ ರೆಡೀ. ಭಾರೀ ಲಾಯಿಕ್ ಚಿಕ್ಕ, ಚೊಕ್ಕ ಪತ್ರಿಕೆ. ಸುರೂಗೆ ನಾ ನೆನ್ಸಿದ್ದೆ . ಇದರ್ಲಿ 40 ಪುಟ ಇದ್ದರೆ 20 ಪುಟ ಬರೇ ಜಾಹೀರಾತುಗಳೇ ಇರ್ದೋ ಏನೋಂತ!!( ಕೆಲವು ಪತ್ರಿಕೆಗಳ ತೆಗ್ದ್ ನೋಡಿ.... 5-6 ಪುಟ ಸತ್ತವರ ಶ್ರದ್ಧಾಂಜಲಿ!! ಇನ್ನ್ ಮೊದ್ವೆ ಆದವರ್ದ್ , ಆಕೆ ಇರವರ್ದ್, ಯಾರದೋ ಮನೆಲಿ ಸತ್ಯನಾರಾಯಣ ಪೂಜೆ, ಗಣಹೋಮ!! ಒಟ್ಟಾರೆ ವಿಷಯ ಶೂನ್ಯ!!.... ಹಂಗೇಂತ ಜಾಹೀರಾತುಗ ಇರೀಕೇ ಬೊತ್ತೂಂಥಳೂ ಹೇಳುದ್ಲೆ. ಒಂದು ಪತ್ರಿಕೆ ಯಶಸ್ವಿ ಆಗಿ ನಡೆಯಕೆ ಬೇಕಾಗುವ ಆರ್ಥಿಕ ಸಹಾಯಕ್ಕೆ ಜಾಹೀರಾತುಗಳೇ ಮೂಲ ಆಧಾರ.) ನಾ ನೆನ್ಸಿದೆಲ್ಲಾ ಠುಸ್ ಆತ್! ಅರೆಭಾಷೆ ಗೌಡ್ರ್ ಗಳ ಬಗ್ಗೆ, ರಾಜ ಮಹಾರಾಜರ ಕಾಲಂದಲೇ ಇರುವ ಗೌಡ್ರ್ ಗಳ  ಇತಿಹಾಸ, ಅರೆಭಾಷೆ ಗೌಡ್ರ್ ಗಳ ಸಾಧನೆಗ, ಅಷ್ಟೇ ಅಲ್ಲ... ಅರೆಭಾಷೆ ಸಾಹಿತ್ಯ ಲೋಕನ ಬೆಳ್ಗುವ ಕತೆ, ಕವನ, ಗೌಡ್ರ್ ಗಳ ವಿಶೇಷ ತಿಂಡಿ, ತಿನಸ್... ಒಟ್ಟಾರೆ " ಮುಡ್ಪು: ಅರೆಬಾಸೆ ತಿಂಗ ಪತ್ರಿಕೆ" ಒಂದ್ ಸಂಗ್ರಹಯೋಗ್ಯ ಪತ್ರಿಕೆ.

                      ಪತ್ರಿಕೆ ಓದಿ ಖುಷಿ ಆತ್... ಸಂಪಾದಕರ್ ಗೆ ಫೋನ್ ಮಾಡ್ದಿ ವಾರ್ಷಿಕ ಚಂದಾ ಎಷ್ಟೂಂತ ಕೇಳ್ದೆ. ರೂ. 300!! ಇನ್ನೊಂದ್ ಶಾಕ್!!! ಸತ್ಯ ಹೇಳ್ನೆ... ನಂಗೆ ನಂಬಿಕೇ ಬಾರದೆ 3 ಸಲ ವಾಪಸ್ ಕೇಳ್ಯಳೆ " ವಾರ್ಷಿಕ ಚಂದಾ ಎಷ್ಟೂಂತ!!!" ನಾವ್ ಮೂರ್ ತಿಂಗ ಹಾಕುವ ಚಪ್ಪಲ್ ಗೇ ರೂ. 500 ಕ್ಕಿಂತ ಕಮ್ಮಿ ಇರ್ಕಿಲೆ. ಅಂಥದರ್ಲಿ ನಮ್ಮ ಭಾಷೆಲಿ ಬಂದ ಪತ್ರಿಕೆನ ತಲೆಲಿ ಇಸಿಕಂಡ್ ಗರ್ವಂದ ನಡೆಯಕ್. ವರ್ಷಕ್ಕೆ ರೂ.300!!!.. ಒಮ್ಮೆಗೆ ನಂಬಿಕೇ ಬಾದುಲೆ ಅಲ್ಲ??( ದೇಶದ ಅದೆಷ್ಟೋ ಭಾಷೆಗಳ ಮಾತಾಡಿಕೇ ಜನ ಇಲ್ಲೆ!!). ಹಂಗಾಗಿ... ನಾ ಎಲ್ಲರೊಟ್ಟಿಗೆ ಹೇಳ್ದಿಷ್ಟೆ ...."ಮುಡ್ಪು ತಿಂಗ ಪತ್ರಿಕೆ" ತರ್ಸಿಕಣಿ.. ಅರೆಭಾಷೆ ಒಳ್ಸಿ, ಬೆಳ್ಸುದಕ್ಕೆ ನಮ್ಮದೊಂದು ಸಣ್ಣ ಕೈ ಜೋಡ್ಸೊನೊ. ಚಂದಾದಾರ ಆದು ಕೂಡ ಸುಲಾಭ. ಕೆಳಗೆನ ನಂಬರ್ಗೆ ಪೇಟಿಎಂ ಮಾಡಕ್. ಮತ್ತೆ ಅದೇ ನಂಬರ್ಗೆ ನಿಮ್ಮ ಫುಲ್ ಅಡ್ರೆಸ್ ಕಳ್ಸಿ. ತಿಂಗ ತಿಂಗ ಅರೆಭಾಷೆ ಪತ್ರಿಕೆ ಓದಿ ಮನ್ಸ್ ಹಗ್ ಮಾಡಿಕಣಕ್.
Paytm: 9535615759
Address: Vinod MN
ICICI Bank, Electronic city Branch
Acc. No. 036001532462
IFSC: ICIC0000360


ನಿಮ್ಮ ಹೈದ

No comments:

Post a Comment